Tuesday, November 5, 2024

Job Alert: ಪವರ್ ಗ್ರಿಡ್ ಲ್ಲಿದೆ 802 ಟ್ರೈನಿ ಹುದ್ದೆಗಳು, ಡಿಪ್ಲೊಮಾ ಆದವರು ಕೂಡಲೇ ಅರ್ಜಿ ಸಲ್ಲಿಸಿ…!

Job Alert – ಡಿಪ್ಲೊಮಾ ಪಾಸ್ ಆದವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಪವರ್​ ಗ್ರಿಡ್​ ಕಾರ್ಪೊರೇಷನ್​ ಆಫ್​ ಇಂಡಿಯಾ ಲಿಮಿಟೆಡ್​​ (PGCIL​) ನಲ್ಲಿ ಡಿಪ್ಲೊಮಾ ಟ್ರೈನಿ ಹಾಗೂ ಅಸಿಸ್ಟಂಟ್ ಟ್ರೈನಿ ಹುದ್ದೆಗಳ (Job Alert) ಅಧಿಸೂಚನೆ ಪ್ರಕಟಿಸಲಾಗಿದೆ. 802 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು, ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇತರೆ ವಿವರಗಳನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

Power Grid Corporation of India PGCIL Recruitment 1

ಹುದ್ದೆಗಳ ವಿವರ: 802 ಟ್ರೈನಿ ಹುದ್ದೆಗಳಿದ್ದು, ಈ ಪೈಕಿ ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್​) 100 ಹುದ್ದೆ, ಡಿಪ್ಲೊಮಾ ಟ್ರೈನಿ (ಸಿವಿಲ್​) 20 ಹುದ್ದೆ, ಜೂನಿಯರ್​ ಆಫೀಸರ್​ ಟ್ರೈನಿ 40 ಹುದ್ದೆ, ಜೂನಿಯರ್​ ಆಫೀಸರ್​ ಟ್ರೈನಿ (ಎಫ್​ ಅಂಡ್​ ಎ) 25 ಹುದ್ದೆ, ಅಸಿಸ್ಟೆಂಟ್​​ ಟ್ರೈನಿ (ಎಫ್​​ ಅಂಡ್​ ಎ) 610 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ ಹಾಗೂ ವಯೋಮಿತಿ : ಇನ್ನೂ ಅಧಿಸೂಚನೆ ಹೊರಡಿಸಿದ ವಿದ್ಯಾರ್ಹತೆ ಹಾಗೂ ವಯೋಮಿತಿ ವಿಚಾರಕ್ಕೆ ಬಂದರೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹವರು ಆಯಾ ಹುದ್ದೆಗಳಿಗೆ ತಕ್ಕಂತೆ ಡಿಪ್ಲೊಮಾ, ಬಿಇ, ಬಿಟೆಕ್​, ಬಿಬಿಎ, ಬಿಬಿಎಂ, ಸಿಎ, ಬಿಕಾಂ ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

Power Grid Corporation of India PGCIL Recruitment 2

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಸಾಮಾನ್ಯ, ಒಬಿಸಿ, ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಪ.ಜಾ, ಪ. ಪಂ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಲಿಖಿತ ಪರೀಕ್ಷೆ, ಕಂಪ್ಯೂಟರ್​ ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಅಕ್ಟೋಬರ್​ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ದಿನಾಂಕ ನವೆಂಬರ್ 12 ಕೊನೆಯ ದಿನಾಂಕವಾಗಿದೆ.  ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗಾಗಿ ಅಧಿಕೃತ ವೆಬ್ ಸೈಟ್ powergridindia.com ಭೇಟಿ ನೀಡಬಹುದು.

Follow the steps given below to apply online for this recruitment:

  1. Step 1

Check Eligibility

  1. Step 2

Click on Apply Online Link

  1. Step 3

Fill the application form

  1. Step 4

Complete Payment

  1. Step 5

Save the form for future reference

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!