Cristiano Ronaldo – ಪೋರ್ಚುಗೀಸ್ ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. 39 ವರ್ಷದ ರೊನಾಲ್ಡೊ ಫುಟ್‌ಬಾಲ್ ಹೊರತುಪಡಿಸಿಯೂ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಹೋಟೆಲ್ ಉದ್ಯಮ ಕೂಡ ಒಂದಾಗಿದೆ. ರೊನಾಲ್ಡೊ 2015ರಿಂದ ಸ್ಟಾರ್ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಅವರ ಒಡೆತನದ ಹೋಟೆಲ್ನಲ್ಲಿ ಕೆಲಸ ಖಾಲಿ ಇದ್ದು, ಉದ್ಯೋಗಿಗಳಿಗೆ ₹27 ಲಕ್ಷ ವೇತನ, ವರ್ಷಕ್ಕೆ 50 ದಿನ ರಜೆ ಜೊತೆಗೆ ವಾರಕ್ಕೆ 20 ಗಂಟೆ ಕೆಲಸ ಹೀಗೆ ಹಲವು ಸೌಲಭ್ಯಗಳಿದೆ. ಈ ಕೆಲಸಕ್ಕೆ ಸೇರಲು ಏನೆಲ್ಲಾ ಅರ್ಹತೆ ಇರಬೇಕು ಎಂಬ ಸುದ್ದಿ ಓದಲು ಮುಂದೆ ಓದಿ…
ಕ್ರಿಸ್ಟಿಯಾನೋ ರೊನಾಲ್ಡೊ ಅವರು ಫುಟ್ಬಾಲ್ ಆಟಗಾರನಾಗಿ ನಿವೃತ್ತಿಯ ನಂತರದ ಜೀವನದ ಬಗ್ಗೆ ಯೋಚಿಸುತ್ತಾ, ಪೆಸ್ತಾನಾ ಹೋಟೆಲ್ ಗ್ರೂಪ್ ಸಹಭಾಗಿತ್ವದಲ್ಲಿ ಹೋಟೆಲ್ ಸರಣಿ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಈಗಾಗಲೇ ಅವರ ಹೋಟೆಲ್‌ಗಳು ಮ್ಯಾಡ್ರಿಡ್, ಫಂಚಲ್, ಲಿಸ್ಬನ್, ಮರ್ಕೆಚ್ ಮತ್ತು ನ್ಯೂಯಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವರ Pestana CR7 Gran Via ಹೋಟೆಲ್ ವಿಶ್ವದ ಐದು ಪ್ರಮುಖ ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಮ್ಯಾಡ್ರಿಡ್ ನ ಸ್ಟಾರ್ ಹೋಟೆಲ್ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್ ವೇಟರ್, ಸೂಪರ್‌ವೈಸರ್, ರಿಸೆಪ್ಷನಿಸ್ಟ್, ಬಾರ್ ಅಸಿಸ್ಟೆಂಟ್, ಜೂನಿಯರ್ ವೇಟರ್ ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಇನ್ನೂ ಈ ಹೋಟೆಲ್ನಲ್ಲಿ ಕೆಲಸ ಮಾಡಲು ಯಾವುದೇ ವಿದ್ಯಾರ್ಹತೆಯ ಬಗ್ಗೆ ತಿಳಿಸಲಾಗಿಲ್ಲ. ಆದರೆ ಕೆಲಸ ಮಾಡಲು ಬಯಸುವವರು ಇಂಗ್ಲಿಷ್ ಜ್ಞಾನವನ್ನು ಹೊಂದಿರಬೇಕು. ಅವರು ಇಂಗ್ಲಿಷ್ನಲ್ಲಿ ಉತ್ತಮವಾಗಿ ಮಾತನಾಡಬೇಕು ಜೊತೆಗೆ ಬರೆಯಲು ಗೊತ್ತಿರಬೇಕು. ಇದಲ್ಲದೇ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಜ್ಞಾನವನ್ನು ಹೊಂದಿರಬೇಕು. ಖಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಹೋಟೆಲ್‌ಗೆ ಸೇರಲು ಇಚ್ಛಿಸುವವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ವ್ಯವಸ್ಥಾಪಕ ಸ್ಥಾನಕ್ಕೆ ಸಂಬಳವು ತಿಂಗಳಿಗೆ € 2300 ಅಂದರೆ ತಿಂಗಳಿಗೆ ₹ 2 ಲಕ್ಷ ಆಗಿರುತ್ತದೆ. ಮತ್ತು ಮಾಣಿ ಸ್ಥಾನಕ್ಕೆ € 1300 ಅಂದರೆ ರೂಪಾಯಿಯಲ್ಲಿ 1.18 ಲಕ್ಷವಾಗಿರಲಿದೆ. ಇದರಂದಿಗೆ ದ್ವಾರಪಾಲಕನು ವರ್ಷಕ್ಕೆ € 23 ಸಾವಿರ ಮತ್ತು ಜೂನಿಯರ್ ಮಾಣಿ ಕೆಲಸಕ್ಕೆ ಬರುವವನಿಗೆ ವಾರಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಲು € 13 ಸಾವಿರ ಪಡೆಯಬಹುದಾಗಿದೆ.
ಇನ್ನೂ ಮತಷ್ಟು ಸೌಲಭ್ಯಗಳನ್ನು ಸಹ ಕಂಪನಿ ಘೋಷಣೆ ಮಾಡಿದೆ. ಅನಿರ್ದಿಷ್ಟ ಒಪ್ಪಂದ, ಪಾವತಿಸಿದ ಊಟ, ವೈದ್ಯಕೀಯ ವಿಮೆ ಮತ್ತು ರೆಸ್ಟೋರೆಂಟ್ ಪಾಸ್‌ಗಳನ್ನು ಸಹ ನೀಡುತ್ತದೆ. ಉದ್ಯೋಗಿಗಳು ಹೋಟೆಲ್ ಗಳಲ್ಲಿ ವಸತಿಗಾಗಿ ಆದ್ಯತೆಯ ದರವನ್ನು ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ 25% ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಜೊತೆಗೆ ರಜೆಗೆ ಸಂಬಂಧಿಸಿದಂತೆ, ಉದ್ಯೋಗಿಗಳು ವರ್ಷಕ್ಕೆ 30 ದಿನಗಳು ಮತ್ತು 20 ಹೆಚ್ಚುವರಿ ದಿನಗಳನ್ನು ಒಟ್ಟು 50 ದಿನಗಳು ರಜೆಯನ್ನು ಹೊಂದಿರುತ್ತಾರೆ. ಇದರೊಂದಿಗೆ ಸಿಬ್ಬಂದಿಗೆ ಉಚಿತ ಆರೋಗ್ಯ ವಿಮೆಯನ್ನು ಸಹ ನೀಡಲಾಗುವುದರ ಜೊತೆಗೆ ಮತಷ್ಟು ಸೌಲಭ್ಯಗಳನ್ನು ಸಹ ಕಂಪನಿ ನೀಡಲಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ Pestana CR7 (https://careers.pestanagroup.com/?locale=en_US) ಅಧಿಕೃತ್ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.