Local News: ಸೋಲು ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸುಬ್ಬಾರೆಡ್ಡಿ

Local News-ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು  ಸಾಮಾನ್ಯ ಆದರೆ ಯಾವುದೇ ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಕ್ರೀಡಾಪಡುಗಳು ತೋರುವ ಕ್ರೀಡಾ ಸ್ಪೂರ್ತಿ ಮುಖ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ವಿಭಾಗೀಯ ಮಟ್ಟದ ಹೈಸ್ಕೂಲ್ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಬಾಲಕ ಮತ್ತು ಬಾಲಕಿಯರ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

Kabbadi game in Bagepalli 1

ಬಾಗೇಪಲ್ಲಿಯಂತಹ ಗಡಿನಾಡಿನಲ್ಲಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು ಸುಮಾರು 11 ಜಿಲ್ಲೆಗಳಿಂದ 500 ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದು  ಕ್ರೀಡಾಪಟುಗಳು ಕ್ರೀಡಾ ರಸದೌತಣವನ್ನು ಇಲ್ಲಿನ ಜನತೆಗೆ ಉಣಬಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು ಪಂದ್ಯಾವಳಿಯಲ್ಲಿ  ಎಲ್ಲಾ ತಂಡಗಳು ಗೆಲಲ್ಲು ಸಾದ್ಯವಿದ್ಯೀ ನಿಟ್ಟಿನಲ್ಲಿ  ಯಾವುದೇ ಕ್ರೀಡೆಯಲ್ಲಿ  ಸೋಲುಗೆಲುವು ಸಾಮಾನ್ಯ, ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಉತ್ತಮ ಆಟವನ್ನು ಆಡುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆಯಬೇಕೆಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಬಿಇಓ ಎನ್.ವೆಂಕಟೇಶಪ್ಪ, ಬಿ.ಆರ್.ಸಿ ಸಮನ್ವಯಾಧಿಕಾರಿ ಆರ್.ವೆಂಕಟರಾಮಪ್ಪ, ಡಿಪಿಓ ಬಿ.ಎನ್.ನಟರಾಜ್, ಪ್ರೌಡಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪಿ.ವೆಂಕಟರಮಣಪ್ಪ, ಪಿ.ಮಂಜುನಾಥರೆಡ್ಡಿ, ಗಡ್ಡಂರಮೇಶ್, ಶ್ರೀನಿವಾಸ್ ಬಾಣಾಲಪಲ್ಲಿ, ರಂಗಾರೆಡ್ಡಿ, ರಂಗನಾಥ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Scroll to Top