ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಭಾರಿ ಸದ್ದು ಮಾಡುತ್ತಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬೇಸರದ ನುಡಿಗಳನ್ನಾಡಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಬಿಜೆಪಿ ನಾಯಕರು ಸುಖಾಸುಮ್ಮನೆ ನನ್ನ ಆರೋಪ ಮಾಡುತ್ತಿದ್ದಾರೆ, ಅದು ಸಾಲದು ಎಂಬಂತೆ ನನ್ನ ಹೆಂಡತಿಯ ಹೆಸರನ್ನು ಎಳೆದು ತರುತ್ತಿದ್ದಾರೆ. ಎಂದೂ ನನ್ನ ಹೆಂಡತಿ ರಾಜಕೀಯಕ್ಕೆ ಬಂದವಳಲ್ಲ. ಅವಳನ್ನು ಬೀದಿಗೆ ತಂದರು. ಕುರಿ ಕಾಯವವನ ಮಗ ಎರಡನೇ ಬಾರಿ ಸಿಎಂ ಆಗಿದ್ದು, ಬಿಜೆಪಿಯವರಿಗೆ ಸಹಿಸೋಕೆ ಆಗ್ತಾ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಮೇಲೆ ಕಪ್ಪು ಚುಕ್ಕೆ ಬರಬೇಕು, ರಾಜಕೀಯವಾಗಿ ಹಣೆಯಬೇಕೆಂಬ ದುರುದ್ದೇಶದಿಂದ ಬಿಜೆಪಿ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಇದರಲ್ಲಿ ನಾನು ಏನು ತಪ್ಪು ಮಾಡಿದ್ದೇನೆ, ಕುರಿ ಕಾಯುವವನ ಮಗ ಎರಡನೇ ಬಾರಿ ಸಿಎಂ ಆಗಿದ್ದಾನಲ್ವಾ ಎಂದು ಬಿಜೆಪಿಯವರಿಗೆ ಹೊಟ್ಟೆಯುರಿ ಎಂದು ಸಿದ್ದರಾಮಯ್ಯ ನುಡಿದರು. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇವೆ. ಮಾನ್ವಿ ಮತ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಂಕು ಸ್ತಾಪನೆಯಾಗಿದೆ. ಕಾಂಗ್ರೇಸ್ ಸರ್ಕಾರ ಅಭಿವೃದ್ದಿಯ ಪರವಾಗಿದೆ. ಸರ್ಕಾರದ ಬಳಿ ದುಡ್ಡು ಇಲ್ಲ ಅಂದರೇ ಕೋಟ್ಯಂತರ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತಾ? ಅಭಿವೃದ್ದಿಯನ್ನು ಸಹಿಸಲಾಗದ ವಿರೋಧ ಪಕ್ಷದವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ರಾಜ್ಯದಲ್ಲಿ ದೇವರಾಜ್ ಅರಸು ಬಿಟ್ಟರೇ ನಾನು ಮಾತ್ರ ಐದು ವರ್ಷ ಪೂರ್ಣಗೊಳಿಸಿದ ಸಿಎಂ ಆಗಿದ್ದೇನೆ. ರಾಜ್ಯ ಮುಕ್ತ ರಾಜ್ಯವಾಗಬೇಕು ಅಂತಾ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೇನೆ. ಬಡವರಿಗೆ ಅನುಕೂಲವಾಗಲಿ ಅಂತಾ ಇಂದಿರಾ ಕ್ಯಾಂಟೀನ್ ಪ್ರಾರಂಬಿಸಿದ್ದೇನೆ. ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಏನೂ ಮಾಡಲಿಲ್ಲ. ಕೊಟ್ಟ ಕುದುರೆಯನ್ನು ಏರದವರು ವೀರರೂ ಅಲ್ಲ, ಧೀರರೂ ಅಲ್ಲ ಎಂಬ ಮಾತಿದೆಯೆಂದು ಈ ಹಿಂದಿನ ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡಿದರು. ಬಿಜೆಪಿಯವರು ತಮ್ಮ ಆಡಳಿತಾವಧಿಯಲ್ಲಿ ಏನೂ ಮಾಡಲಿಲ್ಲ. ರಾಜ್ಯವನ್ನು ದಿವಾಳಿ ಮಾಡಿ ಸೋತರು. ನಿಮ್ಮೆಲ್ಲರ ಆರ್ಶಿವಾದದಿಂಧ 2023ರ ಚುನಾವಣೆಯಲ್ಲಿ 136 ಸ್ಥಾನ ಬಂದಿದೆ. ಬಿಜೆಪಿ ಜನರ ಆರ್ಶಿವಾದದಿಂದ ಯಾವತ್ತೂ ಅಧಿಕಾರಕ್ಕೆ ಬಂದಿಲ್ಲ. ವಾಮಮಾರ್ಗದ ಮೂಲಕವೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಗುಡುಗಿದರು.
ಇನ್ನೂ ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಸದ್ಯ ರಾಜ್ಯದ 7 ಕೋಟಿ ಜನರಲ್ಲಿ 3 ಕೋಟಿ ಜನರು ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಉಪಯೋಗವಾಗಲಿ ಅಂತಾ ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿಯಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದನ್ನು ನೋಡಿದ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಬಿ.ವೈ.ವಿಜಯೇಂದ್ರ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹೊಟ್ಟೆ ಉರಿ ಎಂದು ಟಾಂಗ್ ನೀಡಿದರು.
ಮಾನ್ಯ ಮುಖ್ಯ ಮಂತ್ರಿಗಳೆ ನೀವು ಎರಡು ಬಾರಿ ಮುಖ್ಯ ಮಂತ್ರಿ ಆಗಿದ್ದೀರ ಎಂದು ಯಾರಿಗೂ ಬೇಜಾರಿಲ್ಲ ಇನ್ನೊಮ್ಮೆ ಆಗಿ ರಾಜ್ಯದ ಉನ್ನತಿಗೆ ಶ್ರಮಿಸಿ ಒಳ್ಳೆಯದು ಮಾಡಿ ಹೆಂಡತಿ ಹೆಸರಿನಲ್ಲಿ ಕೋಟಿ ಗಟ್ಟಲೆ ಬೇನಾಮಿ ಆಸ್ತಿ ಮಾಡಬೇಡಿ ಇನ್ನು ಟೀ ಮಾರುವ ಮನುಷ್ಯ ದೇಶದ ಪ್ರದಾನಿ ಆಗಬಹುದು ನೀವು ಆಗಬಾರದಾ ದೇಶದ ಸಂವಿಧಾನ ಎಲ್ಲರಿಗೂ ಅವಕಾಶ ನೀಡಿದೆ, ನೀವು ಗ್ಯಾರಂಟಿ ಹೆಸರಲ್ಲಿ ಗಂಡಸರ ದುಡ್ಡು ಕಿತ್ತು ಹೆಂಗಸರಿಗೆ ನೀಡುತ್ತಿದ್ದೀರ ಇದು ನಿಜವಾದ ಗ್ಯಾರಂಟಿ.