ಇತ್ತೀಚಿಗೆ ಮದುವೆಯ ಹೆಸರಿನಲ್ಲಿ ಮೋಸ ಹೋಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೆಲವೊಂದು ಮ್ಯಾಟ್ರಿಮೋನಿ ತಾಣಗಳ ಮೂಲಕ ಮೋಸ (Marriage Dhoka) ಹೋದ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ರೈತನೋರ್ವ ಮೋಸಹೋದ ಘಟನೆಯೊಂದು ನಡೆದಿದೆ. ರೈತನೋರ್ವ ಹೆಣ್ಣು ಸಿಗುತ್ತಿಲ್ಲ ಎಂದು ವಧು ದಕ್ಷಿಣೆ ಕೊಟ್ಟು ಮದುವೆಯಾಗಿದ್ದಾರೆ. ಈ ಮದುವೆ ಸೆಟ್ ಮಾಡಿದ ಬ್ರೋಕರ್ ಜೊತೆಗೆ ವಧು ಪರಾರಿಯಾಗಿದ್ದಾಳೆ. ಬಳಿಕ ರೈತನಿಗೆ ತಾನು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಹಿಂದೂಪುರ ಮಂಡಲದ ರಾಚಪಲ್ಲಿಯಲ್ಲಿ. ಈ ಗ್ರಾಮದ ಕೃಷಿ ವೇಮರೆಡ್ಡಿ ಎಂಬಾತ ಪಕ್ಕದ ಜಿಲ್ಲೆಯ ಭೀಮಾವರಂ ಸತ್ಯವತಿ ನಗರದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದಾನೆ. ವಧು ದಕ್ಷಿಣೆ (Marriage Dhoka) ಕೊಟ್ಟು ರೈತ ಆ ಮಹಿಳೆಯನ್ನು ಮದುವೆಯಾಗಿದ್ದಾರೆ. ತಾನು ಅಪ್ಪ ಅಮ್ಮನೊಂದಿಗೆ ಇರಬೇಕು, ಯಾವುದೇ ಕೆಲಸಕ್ಕೆ ಹೋಗದೇ ಕೃಷಿ ಕೆಲಸವನ್ನೇ ಮಾಡಿಕೊಂಡಿದ್ದ ತನಗೆ ಹೆಣ್ಣು ಸಿಗುತ್ತಿರಲಿಲ್ಲ. (Marriage Dhoka) ಬಳಿಕ ಪಕ್ಕದ ಊರಿನ ಬ್ರೋಕರ್ ನನ್ನು ಸಂಪರ್ಕ ಮಾಡಿ ನನಗೊಂದು ಹೆಣ್ಣು ಹುಡುಕಿಕೊಡಿ ಅಂತಾ ವೇಮರೆಡ್ಡಿ ಕೇಳಿದ್ದಾನೆ. ಅದರಂತೆ ನಿನಗೆ 40 ವರ್ಷ ವಯಸ್ಸಾಗಿದೆ, ನೀನು ಕೃಷಿ ಕೆಲಸ ಮಾಡಿಕೊಂಡಿದ್ದೀಯಾ, ಜೊತೆಗೆ ಈಗಾಗಲೇ ನಿನಗೆ 40 ವರ್ಷ ವಯಸ್ಸಾಗಿದೆ. (Marriage Dhoka) ಹೆಣ್ಣು ಸಿಗುವುದು ತುಂಬಾ ಕಷ್ಟ ಎಂದು ಬ್ರೋಕರ್ ಹೇಳಿದ್ದಾನೆ. ನಂತರ ವೇಮರೆಡ್ಡಿ ಏನಾದರೂ ಮಾಡಿ ನನಗೆ ಹೆಣ್ಣು ಹುಡುಕಿಕೊಡಿ ನಿಮಗೆ ಹೆಚ್ಚು ಫೀಸು ಕೊಡ್ತೀನಿ ಅಂತಾ ಹೇಳಿದ್ದಾನೆ.
ಬಳಿಕ ಬ್ರೋಕರ್ ಕೊಂಚ ಹಣ ಪಡೆದು ಶೀಘ್ರದಲ್ಲೇ ನಿಮಗೆ ಸರಿಹೊಂದುವ ಹೆಣ್ಣನ್ನು ಹುಡುಕಿಕೊಡುತ್ತೇನೆ ಎಂದು ಹೇಳಿದ್ದಾನೆ. ರೈತನ ಬಳಿ ಹೆಚ್ಚು ಹಣ ಇದ್ದು, ಏನಾದರೂ ಮಾಡಿ ಹಣ ಲಪಟಾಯಿಸಬೇಕೆಂದು ಪ್ಲಾನ್ (Marriage Dhoka) ಮಾಡಿದ್ದಾನೆ. ಒಂದು ವಾರದ ಬಳಿಕ ರೈತನ ಬಳಿಗೆ ಬಂದ ಬ್ರೋಕರ್ ನಿಮಗೆ 40 ವರ್ಷ ವಯಸ್ಸು ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಆದರೆ ಒಂದು ಹೆಣ್ಣು ಒಪ್ಪಿಕೊಂಡಿದ್ದಾಳೆ. ಅವರಿಗೆ ನೀವೆ ವಧು ದಕ್ಷಿಣೆ ಕೊಟ್ಟು (Marriage Dhoka) ಮದುವೆಯಾಗಬೇಕೆಂದು ಹೇಳಿದ್ದಾನೆ. ನನಗೂ ಹೆಚ್ಚು ಕಮಿಷನ್ ಕೊಟ್ರೆ ನಾನು ಈ ಮದುವೆ ಸೆಟ್ ಮಾಡುತ್ತೇನೆ ಎಂದು ಹೇಳಿದ್ದಾನೆ. ಎಲ್ಲಾ ಕಂಡಿಷನ್ ಗಳಿಗೆ ಒಪ್ಪಿಕೊಂಡ ರೈತ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಮೂರ್ನಾಲ್ಕು ದಿನಗಳಲ್ಲಿ ಬ್ರೋಕರ್ (Marriage Dhoka) ಒಂದು ಹೆಣ್ಣನ್ನು ಕರೆದುಕೊಂಡ ಬಂದಿದ್ದಾನೆ. ಈ ಹೆಣ್ಣು ಮದುವೆಯಾಗಲು ಒಪ್ಪಿದ್ದು, ವಧು ದಕ್ಷಿಣೆಯಾಗಿ ಹಣ ಕೊಡಬೇಕು, ಸರಳವಾಗಿ ಮದುವೆ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಜೊತೆಗೆ (Marriage Dhoka) ಆಕೆಗೆ ಯಾರೂ ಇಲ್ಲ ನೀವೆ ನಿಮ್ಮ ಸಂಬಂಧಿಕರೊಂದಿಗೆ ಮನೆ ತುಂಬಿಸಿಕೊಳ್ಳಿ ಎಂದು ಬ್ರೋಕರ್ ಬಣ್ಣದ ಮಾತುಗಳನ್ನಾಡಿದ್ದಾರೆ.
ಬಳಿಕ ಬ್ರೋಕರ್ ಮಾತುಗಳನ್ನು ನಂಬಿದ ರೈತ ಬ್ರೋಕರ್ ಗೆ (Marriage Dhoka) ನಾಲ್ಕು ಲಕ್ಷ ಕಮಿಷನ್ ಕೊಟ್ಟಿದ್ದಾನೆ. ಇದಾದ ಬಳಿಕ ವಧು ದಕ್ಷಿಣೆಯಾಗಿ ಚಿನ್ನ, ಹಣ ಎಲ್ಲವನ್ನೂ ನೀಡಿ ಸರಳವಾಗಿ ಗ್ರಾಮಸ್ಥರಿಗೆಲ್ಲಾ ಊಟ ಹಾಕಿಸಿ ಶಾಸ್ತ್ರೋಕ್ತವಾಗಿಯೇ ಮದುವೆ ಮಾಡಿಕೊಂಡಿದ್ದಾನೆ. ಹೊಸದಾಗಿ ಮದುವೆಯಾದ ಜೋಡಿ ಎರಡು ದಿನಗಳ ಕಾಲ ದೇವಸ್ಥಾನಗಳನ್ನು ಸುತ್ತಾಡಿ, ಮದುವೆ ಶಾಸ್ತ್ರಗಳನ್ನೆಲ್ಲ ಮುಗಿಸಿದ್ದಾರೆ. ಬಳಿಕ ನನ್ನ ತಂದೆಗೆ ಅನಾರೋಗ್ಯ ಅಲ್ಲಿಗೆ ಹೋಗಬೇಕು ಎಂದಿದ್ದಾಳೆ. (Marriage Dhoka) ಆಗ ವೇಮರೆಡ್ಡಿ ಮದುವೆ ಸಮಯದಲ್ಲಿ ನಿನಗೆ ಯಾರೂ ಇಲ್ಲ ಅಂತಾ ಹೇಳಿದ್ದೀಯಾ ಎಂದು ಕೇಳುತ್ತಾನೆ ಅದಕ್ಕೆ ನಾನು ಯಾವಾಗ ನಿಮಗೆ ಹೇಳಿದ್ದೇನೆ. ನಾನು ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ನಿಮ್ಮನ್ನು ಮದುವೆಯಾಗಿದ್ದೇನೆ. ಅವರಿಗೆ ನಿಧಾನವಾಗಿ ತಿಳಿಸೋಣ. ಸದ್ಯ ಅವರಿಗೆ ಅನಾರೋಗ್ಯವಾಗಿದೆ, ಅವರನ್ನು ನೋಡಿಕೊಂಡು (Marriage Dhoka) ಬರೋಣ ಎಂದು ಹೇಳಿದ್ದಾಳೆ. ಆಗ ಮನೆಯವರು ಗಂಡ ಹೆಂಡತಿ ಇಬ್ಬರನ್ನೂ ಕಳುಹಿಸಿದ್ದಾರೆ.
ಬಳಿಕ ರೈಲ್ವೆ ಸ್ಟೇಷನ್ ಗೆ ಗಂಡನೊಂದಿಗೆ ಹೋದ (Marriage Dhoka) ಮಹಿಳೆ, ಈಗ ಮನೆಯಲ್ಲಿ ಹೇಳೋದು ಬೇಡ, ಅವರಿಗೆ ಆರೋಗ್ಯ ಸರಿಯಿಲ್ಲ. ನಾನೊಬ್ಬಳೇ ಹೋಗಿ ಅವರನ್ನು ನೋಡಿಕೊಂಡು ಬರುತ್ತೇನೆ ಎಂದು ಗಂಡನ ಮನವೊಲಿಸಿ ಭೀಮಾವರಂಗೆ ಹೋಗಿದ್ದಾಳೆ. ಬಳಿಕ ತಾನು ಊರಿಗೆ ತಲುಪಿದ್ದೇನೆ ಎಂದು ಹೇಳಿದ್ದಾಳೆ. ಬಳಿಕ ತನ್ನ (Marriage Dhoka) ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಆಕೆ ಸಂಪರ್ಕಕ್ಕೆ ಸಿಗದೇ ಇದ್ದಾಗ ಬ್ರೋಕರ್ ಗೆ ಕರೆ ಮಾಡಿದ್ದಾನೆ. ಆತ ಸಹ ವೇಮರೆಡ್ಡಿ ನಂಬರ್ ಬ್ಲಾಕ್ ಲೀಸ್ಟ್ ಗೆ ಹಾಕಿದ್ದಾನೆ. ಬಳಿಕ ಗಂಡನೇ ಭೀಮಾವರಂಗೆ ಹೋಗಿ ವಿಚಾರಿಸಿದ್ದಾನೆ. ಆಕೆಯ ವಿಳಾಸ ತಪ್ಪು (Marriage Dhoka) ಎಂದು ತಿಳಿದಿದೆ. ನಂತರ ತಾನು ಮೋಸ ಹೋಗಿದ್ದಾಗಿ ತಿಳಿದುಬಂದಿದ್ದು, (Marriage Dhoka) ಬ್ರೋಕರ್ ಹಾಗೂ ಮಹಿಳೆಯ ವಿರುದ್ದ ದೂರು ದಾಖಲಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದಾನೆ.