ಖೋಟಾ ನೋಟುಗಳ ಪ್ರಕರಣಗಳ ಸುದ್ದಿ ಆಗಾಗ ಕೇಳಿಬರುತ್ತಿದೆ. ಇಲ್ಲೊಂದು ಖೋಟಾ ನೋಟುಗಳ ಮುದ್ರಣ ಮಾಡುವಂತಹ ಗ್ಯಾಂಗ್ ಒಂದು ಎಡವಟ್ಟು ಮಾಡಿಕೊಂಡಿದೆ. ಈ ಗ್ಯಾಂಗ್ ಬರೊಬ್ಬರಿ 1.6 ಕೋಟಿ ಖೋಟಾ (Fake Currency) ನೋಟು ಮುದ್ರಿಸಿದೆ. ರಿಯಲ್ ನೋಟಿನಂತೆ ಎಲ್ಲವನ್ನೂ ಮುದ್ರಣ ಮಾಡಿರುವ ಈ ಗ್ಯಾಂಗ್ (Fake Currency) ನೋಟಿನಲ್ಲಿರುವ ಗಾಂಧಿ ಪೊಟೋ ಬದಲು ಬಾಲಿವುಡ್ ನಟ ಅನುಪಮ್ ಖೇರ್ ಪೊಟೋ ಬಳಸಿದ್ದಾರೆ. ಈ ನೋಟಗಳನ್ನು ಬಳಸಿ ಚಿನ್ನಾಭರಣದ ವ್ಯಾಪಾರಿಗೆ ಮೋಸ ಮಾಡಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಖೋಟಾ ನೋಟುಗಳನ್ನು ಪಡೆದು ಮೋಸಕ್ಕೆ ಒಳಗಾದ ವ್ಯಾಪಾರಿ ಮೆಹುಲ್ ಥಕ್ಕರ್ ಎಂಬ ಚಿನ್ನಭಾರಣ ವ್ಯಾಪಾರಿ ಈ ಕುರಿತು ನವರಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಸಿಬ್ಬಂದಿಯನ್ನು ಕೆಲವು ಸಂಪರ್ಕ ಮಾಡಿ, 2100 ಗ್ರಾಂ ಚಿನ್ನ ಖರೀದಿಸಲು ವ್ಯಾಪಾರ ಮಾಡಿದ್ದಾರೆ. ತಮ್ಮ ಜ್ಯೂವೆಲ್ಲರಿಗೆ ಮಾರಾಟ ಮಾಡಲು 2100 ಗ್ರಾಂ ಚಿನ್ನ ಖರೀದಿಸಲು ಒಪ್ಪಂದ ಮಾಡಿದ್ದಾರೆ. ಈ ಚಿನ್ನಕ್ಕೆ ಒಟ್ಟು 1.6 ಕೋಟಿ ಮೌಲ್ಯ ನಿಗಧಿಪಡಿಸಲಾಗಿದೆ. GST ಸೇರಿದಂತೆ ಇತರೆ ತೆರಿಗೆಗಳ ಕಾರಣಗಳಿಂದ ತಾವು ನಗದು ಹಣ ನೀಡುವುದಾಗಿ ಹೇಳಿದ್ದು, ಅದಕ್ಕೆ ವ್ಯಾಪಾರಿಯ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಈ ವೇಳೆ 1.3 ಕೋಟಿ ರೂಪಾಯಿ ನಗದು ಹಣ ನೀಡಿದ್ದಾರೆ. ಉಳಿದ 30 ಲಕ್ಷ ಹಣ ತರುವುದಾಗಿ ಹೇಳಿದ್ದಾರೆ. ಬಳಿಕ ಹಣದ ಬ್ಯಾಗ್ ಗಳನ್ನು ನೀಡಿ 2100 ಗ್ರಾಂ ಚಿನ್ನ ಪಡೆದುಕೊಂಡಿದ್ದಾರೆ.
ಇನ್ನೂ ವ್ಯಾಪಾರಿಗಳ ಸೋಗಿನಲ್ಲಿ ಬಂದ ಕಳ್ಳರು ಚಿನ್ನ ಪಡೆದುಕೊಂಡು ಪರಾರಿಯಾಗಿದ್ದಾರೆ. ನಕಲಿ ವ್ಯಾಪಾರಿಗಳು ನೀಡಿದ 1.3 ಕೋಟಿ ಹಣ ಎಣಿಸಲು ಹೋದಾಗ ತಾವು ಪಡೆದುಕೊಂಡಿರುವುದು ನಕಲಿ ನೋಟುಗಳು ಎಂದೂ, ತಾವು ಮೋಸ ಆಗಿರುವುದಾಗಿ ಅರಿವಾಗಿದೆ. ಕಳ್ಳರು ನೀಡಿದ ಕಂತೆ ಕಂತೆ ನೋಟುಗಳ ಮೇಲಿನ ನೋಟುಗಳು ಮಾತ್ರ ಅಸಲಿಯಾಗಿದ್ದು, ಕಂತೆಗಳ ಒಳಗೆ ಇರುವಂತಹ ನೋಟುಗಳು ನಕಲಿ ಎಂದು ತಿಳಿದೆ. ಈ ನಕಲಿ ನೋಟುಗಳಲ್ಲಿ ಗಾಂಧಿ ಪೊಟೋ ಬದಲಿಗೆ ನಟ ಅನುಪಮ್ ಖೇರ್ ಪೊಟೋಗಳನ್ನು ಮುದ್ರಿಸಲಾಗಿದೆ. ಇನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ರಿಸೋಲ್ ಬ್ಯಾಂಕ್ ಅಫ್ ಇಂಡಿಯಾ ಎಂದು ಮುದ್ರಿಸಲಾಗಿದೆ. ಈ ಸುದ್ದಿ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ.