ಇಂದಿನ ಕಾಲದಲ್ಲಿ ಅಡುಗೆ ಅನೀಲ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಇದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಜಾರಿಯಾದ ಬಳಿಕ ಪ್ರತಿ ಮನೆಯಲ್ಲೂ ಅಡುಗೆ ಅನೀಲ ಬಳಕೆ ಮಾಡುತ್ತಾರೆ. ಆದರೂ ಇನ್ನೂ ಕೆಲವರ ಮನೆಯಲ್ಲಿ ಇನ್ನೂ ಸೌದೆ ಸೇರಿದಂತೆ ಇತರೆ ಇಂಧನ ಬಳಸಿ ಅಡುಗೆ ಮಾಡುತ್ತಾರೆ. ಸದ್ಯ ಅಡುಗೆ ಅನೀಲ ಬಳಸುವಂತಹ ಮಹಿಳೆಯರು ಗ್ಯಾಸ್ ಬೇಗ ಖಾಲಿಯಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಇದೀಗ ಈ ಲೇಖನದ ಮೂಲಕ ಅಡುಗೆ ಅನೀಲ ಹೆಚ್ಚು ಕಾಲ ಬಾಳಿಕೆ ಬರುವಂತ ಟಿಪ್ಸ್ (Cooking Tips) ಗಳನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.
ಪ್ರತಿಯೊಬ್ಬರ ಮನೆಯಲ್ಲೂ ಅಡುಗೆ ಅನಿಲ ಸಿಲಂಡರ್ ಇದ್ದೇ ಇರುತ್ತದೆ. ಅದನ್ನು ಬಳಸಿಯೇ ಆಹಾರ ತಯಾರಿಸಿಕೊಳ್ಳುತ್ತಾರೆ. ಈ ಹಿಂದೆ ಅನೇಕರು ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ಬಳಿಕ ಸೌದೆ ಒಲೆ ಬಹುತೇಕ ದೂರವಾಗಿದೆ ಎಂದು ಹೇಳಬಹುದು. ಇದೀಗ ಗ್ಯಾಸ್ ಸಿಲಂಡರ್ ಬಳಸುವಂತಹ ಅನೇಕರಿಗೆ ಗ್ಯಾಸ್ ಬೇಗ ಖಾಲಿಯಾಗುತ್ತದೆ ಎಂಬ ಚಿಂತೆ ಇದ್ದೆ ಇರುತ್ತದೆ. ನಾವು ಕೆಲವೊಂದು ಟ್ರಿಕ್ಸ್ ಫಾಲೋ ಮಾಡುವ ಮೂಲಕ ಹೆಚ್ಚು ಕಾಲ ಅಡುಗೆ ಅನಿಲ ಬಾಳಿಕೆ ಬರುವಂತೆ ಮಾಡಬಹುದು. ನಾವು ಏನೆಲ್ಲಾ ಟಿಪ್ಸ್ ಫಾಲೋ ಮಾಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ.
- ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಿ: ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬಳಸಿದ ನಂತರ ಗ್ಯಾಸ್ ಸೋರಿಕೆಯನ್ನು ತಪ್ಪಿಸಲು ನಿಯಂತ್ರಕವನ್ನು ಕಾಲಕಾಲಕ್ಕೆ ಆಫ್ ಮಾಡಬೇಕು. ಏಕೆಂದರೆ ಗ್ಯಾಸ್ ಸಿಲಿಂಡರ್ ಸೋರಿಕೆಯಾದರೆ, ಕೆಲವೊಮ್ಮೆ ಅದು ಸ್ಫೋಟಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಗ್ಯಾಸ್ ಬಳಸಿದ ತಕ್ಷಣ ರೆಗ್ಯುಲೇಟರ್ ಆಫ್ ಮಾಡಬೇಕು.
- ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ಕಾಲಕಾಲಕ್ಕೆ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಇದಕ್ಕಾಗಿ ನಿಮ್ಮ ಅನಿಲದ ಬೆಂಕಿಯ ಬಣ್ಣವನ್ನು ಗಮನಿಸುವುದರ ಮೂಲಕ ತಿಳಿಯಬಹುದು. ಅನಿಲ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲದಿದ್ದರೆ ಕೆಂಪು/ಹಳದಿ/ಕಿತ್ತಳೆ ಬಣ್ಣ ಬಂದರೆ ನಿಮ್ಮ ಬರ್ನರ್ ಸ್ವಚ್ಛವಾಗಿಲ್ಲ ಎಂದರ್ಥ. ಆಗ ನೀವು ಬರ್ನರ್ ಅನ್ನು ಸ್ವಚ್ಚಗೊಳಿಸುವುದು ಸೂಕ್ತ.
- ಪಾತ್ರೆ ಒದ್ದೆಯಾಗಿರಬಾರದು: ನೀವು ಅಡುಗೆ ಮಾಡಲು ಪಾತ್ರೆಯನ್ನು ಗ್ಯಾಸ್ ಸ್ಟೌವ್ ಮೇಲೆ ಒಣಗಿರುವ ಪಾತ್ರೆಯನ್ನು ಇಡಬೇಕು. ಒಂದು ವೇಳೆ ಪಾತ್ರೆಯಲ್ಲಿ ನೀರಿನ ಅಂಶ ಇದ್ದರೆ ಆವಿಯಾಗಲು ಸಮಯ ತೆಗೆದುಕೊಳ್ಳಬಹುದು. ಇದರಿಂದ ಅನಿಲವನ್ನು ವ್ಯರ್ಥವಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ಬೆಂಕಿಯನ್ನು ಕಡಿಮೆ ಮಾಡಬಹುದು. ಹೆಚ್ಚಿನ ಬೆಂಕಿ ಹೆಚ್ಚು ಅನಿಲವನ್ನು ಖರ್ಚು ಮಾಡುತ್ತದೆ.
- ಪ್ರೆಶರ್ ಕುಕ್ಕರ್: ಅಡುಗೆ ತಯಾರಿಸಲು ಹೆಚ್ಚು ಪ್ರೆಶರ್ ಕುಕ್ಕರ್ ಬಳಸುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಓಪನ್-ಪಾಸ್ ಅಡುಗೆಗೆ ಹೋಲಿಸಿದರೆ ಒತ್ತಡದ ಸ್ಟೀಮ್ ಆಹಾರವು ವೇಗವಾಗಿ ಬೇಯಿತ್ತದೆ. ಇದರಿಂದ ಗ್ಯಾಸ್ ಉಳಿತಾಯ ಸಹ ಆಗುತ್ತದೆ. ಜೊತೆಗೆ ಕೆಲವೊಂದು ಬೇಳೆ ಕಾಳುಗಳನ್ನು ನೀರಿನಲ್ಲಿ ನೆನಸಿ ಇಡುವುದರಿಂದ ಅವು ಬೇಗ ಬೇಯುತ್ತವೆ. ಗ್ಯಾಸ್ ಸಹ ಉಳಿತಾಯವಾಗುತ್ತದೆ.
- ಗ್ಯಾಸ್ ಲೀಕ್ ಆಗದಂತೆ ಎಚ್ಚರ ವಹಿಸಿ: ಸಾಮಾನ್ಯವಾಗಿ ಕೆಲವು ಸಿಲಿಂಡರ್ ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕ್ ಆಗಿರುತ್ತದೆ. ಆಗಾಗ ಗ್ಯಾಸ್ ರೆಗ್ಯುಲೇಟರ್, ಪೈಪ್, ಬರ್ನರ್ ಪರಿಶೀಲಿಸಬೇಕು. ಹಾನಿಗೊಳಗಾದ ಗ್ಯಾಸ್ ಲೈನ್ ನೀವು ಅಡುಗೆ ಮಾಡದಿದ್ದರೂ ಸಹ ಅನಿಲವನ್ನು ವ್ಯರ್ಥ ಮಾಡಬಹುದು. ಇದು ಅಪಘಾತಗಳಿಗೂ ಕಾರಣವಾಗಬಹುದು. ಆದ್ದರಿಂದ ಈ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ.
- ಫ್ರಿಡ್ಜ್ ನಲ್ಲಿಟ್ಟ ಆಹಾರ ಸಾಮಗ್ರಿಗಳಿಂದಲೂ ಗ್ಯಾಸ್ ಹೆಚ್ಚ ಖರ್ಚಾಗುತ್ತದೆ. ಹಾಲು, ಸೇರಿದಂತೆ ಉಳಿತ ವಸ್ತುಗಳನ್ನು ನೇರವಾಗಿ ಕುದಿಯಲು ಇಟ್ಟರೇ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅಡುಗೆಗೆ ಬೇಕಾದ ವಸ್ತುಗಳನ್ನು ಮೊದಲೇ ಫ್ರಿಡ್ಜ್ ನಿಂದ ಹೊರಗಿಡಬೇಕು. ಫ್ರಿಡ್ಜ್ ನಲ್ಲಿದ್ದ ಆಹಾರ ಪದಾರ್ಥಗಳು ತಣ್ಣಗಿರುತ್ತದೆ. ಅದು ಸಾಮಾನ್ಯ ರೀತಿಗೆ ಬಂದ ಬಳಿಕ ಬೇಯಿಸಲು ಇಟ್ಟರೇ ಬೇಗ ಬೇಯುತ್ತವೆ.