ಗುಡಿಬಂಡೆ ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘದ ವತಿಯಿಂದ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದ್ದು, (Local News) ಸಂಘದ ಷೇರುದಾರರು ಇಲ್ಲಿಯೇ ರಸಗೊಬ್ಬರಗಳನ್ನು ಖರೀದಿಸಿ, ಸಂಘದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಸಂಘದ ಅಧ್ಯಕ್ಷ ಎಂ.ವಿ.ಶಿವಣ್ಣ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ (Local News) ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಒಕ್ಕೂಟದಿಂದ ಸಂಘದಲ್ಲಿ ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಅನೇಕ ಕಾನೂನುಗಳನ್ನು ತಂದಿದ್ದು ಅದರಲ್ಲಿ ವಿಶೇಷವಾಗಿ ಸಂಘದಲ್ಲಿ ವ್ಯವಹಾರ ಮಾಡಿರುವ ಬಗ್ಗೆ ಷರತ್ತು ವಿಧಿಸಿದ್ದು ಸಂಘದಲ್ಲಿ ವ್ಯವಹಾರ ಮಾಡುವುದು ರಸಗೊಬ್ಬರಗಳನ್ನು ಸಂಘದಿಂದ ಮಾರಾಟ ಮಾಡುತ್ತಿದ್ದು ಸದಸ್ಯರು ಖರೀದಿ ಮಾಡುವಾಗ ಸದಸ್ಯತ್ವದ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನೀಡಿದರೆ ಸಂಘದಲ್ಲಿ ವ್ಯವಹಾರ ಮಾಡುವಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ಸದಸ್ಯರು ಇದನ್ನು ಮಾಡಬೇಕೆಂದು ತಿಳಿಸುತ್ತಾ, ಸಂಘದಲ್ಲಿ ಆಗಿರುವ ಖರ್ಚು ಮತ್ತು ಲಾಭಗಳ ಬಗ್ಗೆ ಸಭೆಯಲ್ಲಿ ಮಂಡನೆ ಮಾಡಿದರು.
ಬಳಿಕ ಸಂಘದ ಕಾರ್ಯದರ್ಶಿ ಎಸ್.ಅಶ್ವತ್ಥಪ್ಪ ಮಾತನಾಡಿ 2023-24ನೇ ಸಾಲಿಗೆ ಸಂಘ 1.29 ಲಕ್ಷ ನಿವ್ವಳ ಲಾಭದಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ವ್ಯವಹಾರಗಳನ್ನು ಮಾಡಬಹುದು. ರೈತರಿಗೆ ಬೇಕಾದ ರಸಗೊಬ್ಬರಗಳನ್ನು ವಿತರಣೆ ಮಾಡಲು ಯಾವ ರೀತಿ ಕ್ರಮಜರುಗಿಸಬೇಕೆಂಬುದು ಸೇರಿ ಇತರೆ ಸಲಹೆ ಸೂಚನೆಗಳನ್ನು ಸಭೆಯಲ್ಲಿ ನೀಡಬೇಕೆಂದು ತಿಳಿಸಿದರು. 2024-25ನೇ ಸಾಲಿಗೆ ಅಂದಾಜು ಬಜೆಟ್ ಆಡಳಿತ ಮಂಡಳಿ ಶಿಫಾರಸ್ಸಿನಂತೆ ಮಂಜೂರಾತಿ ಮಾಡುವುದು ಮತ್ತು 2023-24ನೇ ಸಾಲಿನಲ್ಲಿ ಬಜೆಟ್ ನಲ್ಲಿ ಉಳಿತಾಯ ಮತ್ತು ಅಧಿಕ ವೆಚ್ಚ ಆಗಿರುವ ವಿಚಾರದ ಬಗ್ಗೆ ಅನುಮೋದನೆ ಪಡೆದುಕೊಂಡರು.
ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಗಂಗಾಧರಪ್ಪ, ಕೆ.ಜೆ.ಆನಂದರೆಡ್ಡಿ, ಎಂ.ಚನ್ನಕೇಶವರೆಡ್ಡಿ, ಎಸ್.ಗಂಗಿರೆಡ್ಡಿ, ಪಿ.ಎನ್.ವೇಣುಗೋಪಾಲ್, ಎಚ್.ವೆಂಕಟೇಶಪ್ಪ, ನರಸಿಂಹಪ್ಪ, ಆದಿನಾರಾಯಣಪ್ಪ, ಹನುಮಂತರಾಯಪ್ಪ, ವೆಂಕಟಲಕ್ಷ್ಮಮ್ಮ, ಆದಿಲಕ್ಷ್ಮಮ್ಮ, ಶಿವಮ್ಮ ಸೇರಿ ಸಂಘದ ಸಿಬ್ಬಂದಿ ಎನ್.ನರಸಿಂಹಮೂರ್ತಿ ಸೇರಿ ಇತರರು ಇದ್ದರು.