Thursday, November 21, 2024

Teachers Day: ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಗುರು ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಸುಬ್ಬಾರೆಡ್ಡಿ

ಮುಂದಿನ ವರ್ಷದ ಶಿಕ್ಷಕರ ದಿನಾಚರಣೆಯೊಳಗೆ (Teachers Day) ಒಂದು ಕೋಟಿ ವೆಚ್ಚದಲ್ಲಿ ಗುರುಭವನವನ್ನು ನಿರ್ಮಾಣ ಮಾಡಿ ಅದರಲ್ಲೇ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದಾಗಿ, ಗುರುಭವನ ನಿರ್ಮಾಣದಲ್ಲಿ ಎಲ್ಲಾ ಶಿಕ್ಷಕರು ಸಹಕಾರ ನೀಡಬೇಕೆಂದು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

Teachers Day in Gudibande 1

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಶಿಕ್ಷಕರ ಸುಮಾರು ದಿನಗಳಿಂದ ಗುರು ಭವನಕ್ಕಾಗ ಜಾಗ ನೀಡುವಂತೆ ಮನವಿ ಮಾಡುತ್ತಿದ್ದರು. ಕೆಲವೊಂದು ಕಾರಣಗಳಿಂದ ತಡವಾಗಿತ್ತು. ಇದೀಗ ಸುಮಾರು 20 ಗುಂಟೆ ಜಮೀನನ್ನು ಗುರುಭವನ ನಿರ್ಮಾಣಕ್ಕೆ ನೀಡಲಾಗಿದೆ. ತಾವೂ ಸಹ ಗುರು ಭವನ ನಿರ್ಮಾಣದ ಕಡೆ ಗಮನ ಹಾಗೂ ಕಾಳಜಿ ವಹಿಸಬೇಕು. ಗುರು ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡುತ್ತೇನೆ. ಜೊತೆಗೆ ಮುಂದಿನ ವರ್ಷದೊಳಗೆ ಗುರುಭವನ ನಿರ್ಮಾಣ ಮಾಡಿ ಅದರಲ್ಲೇ ಮುಂದಿನ ಶಿಕ್ಷಕರ ದಿನಾಚರಣೆ ಆಚರಿಸೋಣ. ಜೊತೆಗೆ ಬಿಇಒ ಕಚೇರಿಗೂ ಶೀಘ್ರವಾಗಿ ಜಮೀನು ನೀಡುವ ಕೆಲಸ ಮಾಡುತ್ತೇನೆ ಎಂದರು.

ಇನ್ನೂ ನನ್ನ ಕ್ಷೇತ್ರದಲ್ಲಿ ಶಿಕ್ಷಣದ ಮೂಲಕ ಅಭಿವೃದ್ದಿ ಮಾಡಲು ಪಣ ತೊಟ್ಟಿದ್ದೇನೆ. ಈ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗುಡಿಬಂಡೆ ತಾಲೂಕು ಇಡೀ ರಾಜ್ಯಕ್ಕೆ ಪ್ರಥಮ ಬಂದಿತ್ತು. ಇದು ತುಂಬಾ ಸಂತಸದ ವಿಚಾರ. ಈ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಸಹ ಬಹಳಷ್ಟು ಇದೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಏನೇ ಸಮಸ್ಯೆಯಿದ್ದರೂ ನನಗೆ ತಿಳಿಸಿ ಅದನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ. ಆದರೆ ಶಿಕ್ಷಕರಾದ ತಾವುಗಳು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಭಾವಿಸಿ ಅವರಿಗೆ ಶಿಕ್ಷಣ ನೀಡಬೇಕು. ಇನ್ನು ಒಂದೂವರೆ ತಿಂಗಳಲ್ಲಿ ಪ್ರೌಢಶಾಲೆಯ ಕೊಠಡಿಗಳಲ್ಲಿ ಸಿಸಿ ಟಿವಿ ಅಳವಡಿಸುವ ಕೆಲಸ ಮಾಡಲಾಗು‌ತ್ತದೆ. ಇತ್ತೀಚಿಗೆ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಬರದೇ ಇರುವುದು, ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಅವರನ್ನು ನಿಗಾವಹಿಸಲು ಸಿಸಿಟಿವಿ ಅಳವಡಿಸುವ ಕ್ರಮ ವಹಿಸಲಾಗುತ್ತದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗುಡಿಬಂಡೆ ತಾಲೂಕು ಪ್ರಥಮ ಸ್ಥಾನ ಗಳಿಸಲು ಶಿಕ್ಷಕರು ಶ್ರಮವಹಿಸಬೇಕೆಂದರು.

Teachers Day in Gudibande 2

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ತಾಲೂಕಿನ ಶಿಕ್ಷಕರು ಸುಮಾರು ವರ್ಷಗಳಿಂದ ಗುರುಭವನಕ್ಕಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಕೆಲವೊಂದು ಕಾರಣಗಳಿಂದ ತಡವಾಗಿತ್ತು. ಇದೀಗ ಶಾಸಕರು ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳು ನಮಗೆ 20 ಗುಂಟೆ ಗುರುಭವನ ನಿರ್ಮಾಣಕ್ಕೆ ಜಾಗ ನೀಡಿದ್ದಾರೆ. ಶಿಕ್ಷಕರ ದಿನಾಚರಣೆಗೆ ಇದೊಂದು ದೊಡ್ಡ ಕೊಡುಗೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಪಶಸ್ತಿ ವಿಜೇತರಾದ ಶಿವಕುಮಾರ್ ಮಾತನಾಡಿ ಪೋಷಕರು ಶಿಕ್ಷಕರ ಮೇಲೆ ನಂಬಿಕೆಯಿಟ್ಟು ತೊದಲು ನುಡಿಯುವ ಮಗುವನ್ನು ತಮ್ಮ ಮಡಿಲಲ್ಲಿ ಬಿಟ್ಟು ಹೋಗುತ್ತಾರೆಂದರೆ, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಪೋಷಕರಿಗಿದೆ ಹಾಗಾಗಿ ಶಿಕ್ಷಕರು ತಮ್ಮ ಮಡಿಲಿಗೆ ಬಂದ ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಉತ್ತಮ ಶಿಕ್ಷಣ ಮತ್ತು ಮೌಲ್ಯಗಳನ್ನು ನೀಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು.

Teachers Day in Gudibande 3

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಹರೀಶ್ ರಾಜ್ ಅರಸ್, ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಕೆ.ಸಿ. ಮಂಜುನಾಥ್, ಗಂಗಾಧರಪ್ಪ, ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿ  ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಜಯಶೀಲರಾಗಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇತ್ತಿಚಿಗೆ ತಾಲೂಕಿನ ಶಿಕ್ಷಕರಿಗಾಗಿ ನಡೆದ ಕ್ರೀಡಾಕೂಟದಲ್ಲಿ ಜಯಶೀಲರಾದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

Teachers Day in Gudibande 4

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್ವುಲ್ಲಾ, ತಾಪಂ ಇಒ ಹೇಮಾವತಿ, ವೃತ್ತ ನಿರೀಕ್ಷಕ ನಯಾಜ್ ಬೇಗ್,  ಬಿಇಒ ಕೃಷ್ಣಪ್ಪ, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಮುನಿಕೃಷ್ಣಪ್ಪ, ಕೃಷ್ಣಪ್ಪ, ಸ.ನ.ನಾಗೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀರಾಮಪ್ಪ, ಶ್ರೀರಾಮರೆಡ್ಡಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಸೇರಿದಂತೆ ಹಲವರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!