Friday, August 29, 2025
HomeStateLocal News: ಹಿಂದಿ ದಿವಸ್ ಆಚರಣೆ ವಾಪಸ್ ಪಡೆಯಲು ಕರವೇ ಪ್ರತಿಭಟನೆ....!

Local News: ಹಿಂದಿ ದಿವಸ್ ಆಚರಣೆ ವಾಪಸ್ ಪಡೆಯಲು ಕರವೇ ಪ್ರತಿಭಟನೆ….!

ರಾಜ್ಯದಲ್ಲಿ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಹಾಗೂ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದು ಕೂಡಲೇ ಹಿಂದಿ ದಿವಸ್ (Local News) ಆಚರಣೆಯನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಬೇಕು ಎಂದು  ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ. ಹರೀಶ್ ಅವರ ನೇತೃತ್ವದಲ್ಲಿ  ಕರವೇ ಕಾರ್ಯಕರ್ತರು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಶನಿವಾರ ಬೈಕ್ ರ್ಯಾಲಿ (Local News) ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

KARAVE Protest in Bagepalli 1

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ 22 (Local News)ಆಡಾಳಿತಾತ್ಮಕ ಭಾಷೆಗಳಿವೆ, ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ದೇಶದ ಹಲವು ಉದ್ಯೋಗಗಳ ಪರಿಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ (Local News) ಹಿಂದಿ ದಿವಸ್ ಬಲವಂತವಾಗಿ ಹೇರಿಕೆ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಕರವೇ ತೀವ್ರವಾಗಿ ಖಂಡಿಸುವುದಲ್ಲದೆ (Local News) ಹಿಂದಿ ದಿವಸ್ ಕಾರ್ಯಕ್ರಮವನ್ನು ಧಿಕ್ಕರಿಸಿ ಕರವೇ ವತಿಯಿಂದ  ಕಪ್ಪು ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.

ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ (Local News) ವ್ಯವಹಾರ ನಡೆಸುವಾಗ ಕನ್ನಡ ಭಾಷೆ ಬಳಕೆಗೆ ಮೊದಲ ಆದ್ಯತೆ ನೀಡಬೇಕು.  ಹಿಂದಿ ಭಾಷೆ ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರುತ್ತಿರುವುದರಿಂದ ಕನ್ನಡಿಗರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ, ಬ್ಯಾಂಕಿನ ಡಿಜಿಟಲ್ ನಾಮಫಲಕಗಳು, (Local News) ಎಟಿಎಂ ಯಂತ್ರಗಳು, ಅರ್ಜಿ ಪ್ರತಿಗಳು ಎಲ್ಲೆಡೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

KARAVE Protest in Bagepalli 0

ಈ ಸಂದರ್ಭದಲ್ಲಿ (Local News) ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ ವುಲ್ಲಾ, ನಗರ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಕೆ, ಮಹಿಳಾ ತಾಲೂಕು ಅಧ್ಯಕ್ಷರಾದ ಗಂಗರತ್ನಮ್ಮ,  ಸಂಚಾಲಕರಾದ ಶಿವಕುಮಾರ್ ಕೆ.ಎನ್ , ಕಾರ್ಯದರ್ಶಿಗಳಾದ ಶಂಕರ್ ಕಾರ್ಮಿಕ ಘಟಕದ ಕೃಷ್ಣಪ್ಪ , ಖಜಾಂಚಿ ನಾರಾಯಣಸ್ವಾಮಿ, ವಕ್ತಾರದ ಕೃಷ್ಣ ನಾಯಕ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಗಂಗರಾಜ್ ಎಂ.ಸಿ ರಾಜು, ಗಗನ್ ಮತ್ತಿತರರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular