ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ಉದ್ದೇಶದಿಂದ ಅನೇಕ ಕ್ರಿಯೇಟರ್ ಗಳು ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ (Reels) ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ಅನೇಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ನಡೆದರೂ ಸಹ ಇನ್ನೂ ರೀಲ್ಸ್ ಹುಚ್ಚರಿಗೆ ಬುದ್ದಿ ಬಂದಿಲ್ಲ ಎಂದೇ ಹೇಳಬಹುದು. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ದಂಪತಿ ರೀಲ್ಸ್ ಮಾಡೋಕೆ (Reels) ಹೋಗಿ ಸತ್ತಿದ್ದಾರೆ. ಜೊತೆಗೆ ತಮ್ಮ ಜೊತೆಗೆ ಏನು ಅರಿಯದಂತಹ 2 ವರ್ಷದ ಮಗು ಸಹ ಸಾವನ್ನಪ್ಪಿದೆ.
ರೀಲ್ಸ್ (Reels) ಮಾಡಿ ಫೇಮಸ್ ಆಗಲು ಹೋದಂತಹ ದಂಪತಿ ಹಾಗೂ 2 ವರ್ಷದ ಮಗು ಮೃತಪಟ್ಟ ಘಟನೆ ಉತ್ತರ ಪ್ರದೇಶ ಲಖೀಂಪುರ ಖೇರಿಯಲ್ಲಿ ನಡೆದಿದೆ. ಮೃತರನ್ನು 26 ವರ್ಷದ ಮೊಹಮ್ಮದ್ ಅಹ್ಮದ್, 24 ವರ್ಷದ ನಜ್ನೀನ್ ಹಾಗೂ ಇವರ ಎರಡು ವರ್ಷದ ಕಂದ ಅಕ್ರಂ ಎಂದು ಗುರುತಿಸಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ಉದ್ದೇಶದಿಂದ (Reels) ಮೃತ ಜೋಡಿ ರೈಲ್ವೆ ಟ್ಯ್ರಾಕ್ ನಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದಾರೆ. ಆದರೆ ಈ ಸಮಯದಲ್ಲಿ ರೈಲು ಬರುತ್ತಿರುವದನ್ನು ಗಮನಿಸಿಲ್ಲ. (Reels) ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಅವರ ಮೇಲೆ ಹರಿದುಹೋಗಿದೆ.
ಮೃತ ದಂಪತಿ ಸೀತಾಪುರ ಜಿಲ್ಲೆಯ ಸಮೀಪವಿರುವ ಲಹರ್ ಪುರ ನಿವಾಸಿಗಳಾಗಿದ್ದಾರೆ. (Reels) ಹರಗಾಂವ್ ಗ್ರಾಮದ ಕ್ಯೋಟಿ ಗ್ರಾಮದಲ್ಲಿ ನಡೆದ ಜಾತ್ರೆಗೆ ಬಂದ ಇವರು ಜಾತ್ರೆ ಮುಗಿಸಿ ವಾಪಸ್ ಬರುವ ವೇಳೆ ಓಲೇ-ಲಖೀಂಪುರ ಬಳಿಯ ರೈಲ್ವೆ ಬ್ರಿಡ್ಜ್ ಕೆಳಗೆ ತಮ್ಮ ಬೈಕ್ ಪಾರ್ಕ್ ಮಾಡಿ ಬಳಿಕ (Reels) 50 ಮೀಟರ್ ನಡೆದುಕೊಂಡು ಬಂದು ರೈಲ್ವೆ ಟ್ಯ್ರಾಕ್ ಗೆ ಬಂದು ರೀಲ್ಸ್ ಮಾಡುತ್ತಿದ್ದಾಗ ಈ ಟ್ಯ್ರಾಕ್ ನಲ್ಲಿ ಬರುತ್ತಿದ್ದ ರೈಲು ಅವರ ಮೇಲೆ ಹರಿದು ಹೋಗಿದೆ. (Reels) ರೈಲು ಬರುತ್ತಿರುವುದನ್ನು ಗಮನಿಸಿದ ದಂಪತಿ ಹಳಿಯಿಂದ ಬೇರೆಡೆಗೆ ಓಡುವ ಪ್ರಯತ್ನ ಮಾಡಿದ್ದಾರೆ. ಅದಾಗಲೇ ರೈಲು ಅವರ ಹತ್ತಿರ ಬಂದುಬಿಟ್ಟಿದೆ. (Reels) ರೈಲು ಹರಿದು ದಂಪತಿ ಹಾಗೂ ಮಗು ಮೃತಪಟ್ಟಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,ಪೊಲೀಸರು ಸ್ಥಳಕ್ಕೆ ಬಂದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ (Reels) ರೀಲ್ಸ್ ಮಾಡೋಕೆ ಹೋಗಿ ತಮ್ಮ ಜೀವನವನ್ನೆ ಕಳೆದುಕೊಂಡಿದ್ದಾರೆ.