Thursday, November 21, 2024

Local News: ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ, ಬಳಿಕ ಅಭಿವೃದ್ದಿಗೆ ಕೈ ಜೋಡಿಸಿ: ಶಾಸಕ ಸುಬ್ಬಾರೆಡ್ಡಿ

ಯಾರೇ ಆಗಲಿ ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡೋಣ, ಚುನಾವಣೆ ಮುಗಿದ ಬಳಿಕ ಪಕ್ಷಭೇದ ಮರೆತು ಅಭಿವೃದ್ದಿಗಾಗಿ ನನ್ನೊಂದಿಗೆ ಕೈ ಜೋಡಿಸಿ, ನನಗೆ ಅಭಿವೃದ್ದಿ ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ (Local News)ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಯಾವುದೇ ಪಕ್ಷದವರಲಿ ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಬಳಿಕ ಜನರ ಕೆಲಸ ಮಾಡಿಕೊಡಲು ಹಾಗೂ ಗ್ರಾಮಗಳ ಅಭಿವೃದ್ದಿ ಮಾಡಲು ಎಲ್ಲರೂ ನನ್ನೊಂದಿಗೆ ಕೈ ಜೋಡಿಸಬೇಕು. ನಾನು ಆ ಪಕ್ಷದವನು ಎಂದು, ಅವರ ಬಳಿ ನಾನು ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಸಂಕುಚಿತ ಮನೋಭಾವ ಬಿಡಬೇಕು. ತಮ್ಮ ಗ್ರಾಮಗಳಲ್ಲಿನ ಸಮಸ್ಯೆಗಳು, ತಮ್ಮ ಸಮಸ್ಯೆಗಳ ಬಗ್ಗೆ ನೇರವಾಗಿ ನನ್ನ ಬಳಿ ಹೇಳಿ. ಅವುಗಳನ್ನು ಈಡೇರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನೂ ಸಹ ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ ಅಷ್ಟೆ. ಚುನಾವಣೆ ಮುಗಿದ ಬಳಿಕ ನನಗೆ ಅಭಿವೃದ್ದಿ ಹಾಗೂ ಜನರ ಸಮಸ್ಯೆಗಳನ್ನು ಈಡೇರಿಸುವುದೇ ಮುಖ್ಯ ಎಂದರು.

MLA Speach at Gudibande Janaspandana
MLA Speach at Gudibande Janaspandana

ಇನ್ನೂ ಸೋಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗಾಗಿ ಒಟ್ಟು 188 ವಸತಿಗಳನ್ನು ಮಂಜೂರು ಮಾಡಲಾಗಿದೆ, ನಿವೇಶನ ರಹಿತರಿಗಾಗಿ 15 ಎಕರೆ ಪ್ರದೇಶವನ್ನು  ಜಾಗ ಕಾಯ್ದಿರಿಸಲಾಗಿದೆ, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬಾಕಿ ರಸ್ತೆ ನಿರ್ಮಾಣ, ಕೆಲ ಗ್ರಾಮಗಳ ರಸ್ತೆಗಳಿಗೆ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿಸಿದ್ದು, ಇದುವರೆಗೂ ಸರಕಾರ ಅನುದಾನ ನೀಡದಿದ್ದರೂ ಸಹ ಸಿಸಿ ರಸ್ತೆ ಮಾಡಿಸಿದ್ದೇನೆ. ಈ ಭಾಗದ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಅದು ಕೆಲವೊಂದು ತಾಂತ್ರಿಕ ಕಾರಣಗಳಿಂದ ಮಂಜೂರು ಆಗುತ್ತಿಲ್ಲ. ಈ ಅವಧಿಯಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ಅದು ಆಗದೇ ಇದ್ದರೇ ನನ್ನ ಸ್ವಂತ ಖರ್ಚಿನಲ್ಲಿ ಕ್ಲಿನಿಕ್ ತೆರೆದು ಜನರ ಸೇವೆ ಮಾಡುತ್ತೇನೆ ಎಂದರು.

ಬಳಿಕ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ ತಲೆ ತಾಲಂತರಗಳಿಂದ ಅಣ್ಣ-ತಮ್ಮಂದಿರು ಜಮೀನು ಇಬ್ಬಾಗ ಸಮಸ್ಯೆ ಯಿಂದ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಫವತಿ ಖಾತೆ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಿ. ಜೊತೆಗೆ ಜನರು ಸಹ ಜನಸ್ಪಂದನದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

MLA Speach at Gudibande Janaspandana
MLA Speach at Gudibande Janaspandana

ಬಳಿಕ ಗ್ರಾಪಂ ಅಧ್ಯಕ್ಷರಾದ ಸುಮಂಗಳಮ್ಮ ಮಾತನಾಡಿ ಸಾರ್ವಜನಿಕರು ಗ್ರಾಮ ಪಂಚಾಯತಿ ಅಧ್ಯಕ್ಷರ ಬಳಿ ಬಂದು ಚರಂಡಿ ನಿರ್ಮಿಸಿಲ್ಲ, ರಸ್ತೆ ಹಾಕಿಲ್ಲ, ಮನೆ ಕೊಟ್ಟಿಲ್ಲ, ನಿವೇಶನ ಇಲ್ಲ ಎಂದು ಗಲಾಟೆ ಮಾಡುತ್ತೀರಿ, ಸರ್ಕಾರದಿಂದ ಒಂದೇ ಒಂದು ಬಿಡಿಗಾಸು ಅನುದಾನ ಬಂದಿಲ್ಲ ಹೀಗಿದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಹೇಗೆ, ಶಾಸಕರ ಬಳಿ ಬಂದು ನಿಮ್ಮ ಸಮಸ್ಯೆಗಳನ್ನು ಕೇಳಿ ನಾನು ನಿಮ್ಮ ಜೊತೆ ಧ್ವನಿಗೂಡಿಸುತ್ತೇನೆ ಎಂದು ಹೇಳಿದರು.

ಸೋಮೇನಹಳ್ಳಿ ಗ್ರಾಮದ ಮುಖಂಡ ಅಶ್ವತ್ತಪ್ಪ ಮಾತನಾಡಿ ಸೋಮೇನಹಳ್ಳಿ ಹೋಬಳಿ ಕೇಂದ್ರಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ, ಪೊಲೀಸ್ ಹೊರ ಠಾಣೆ, ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಮರು ಸ್ಥಾಪನೆ, ಆಸ್ಪತ್ರೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗಮನ ಚೆಲ್ಲಿದರು. ಸೋಮೇನಹಳ್ಳಿ ಕೆರೆಯಲ್ಲಿದ್ದ ಜಾಲಿ ಮರಗಳನ್ನು ಹರಾಜು ಮಾಡಿದ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯತಿಗೆ ಹಿಂತಿರುಗಿಸಬೇಕಾದ 6 ಲಕ್ಷ ಹಣವನ್ನು ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

MLA Speach at Gudibande Janaspandana
MLA Speach at Gudibande Janaspandana

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಸೋಮಣ್ಣ, ತಹಶೀಲ್ದಾರ್ ಸಿಗ್ಬತ್ ವುಲ್ಲಾ, ವೃತ್ತ ನಿರೀಕ್ಷಕ ನಯಾಜ್ ಬೇಗ್, ಪೆರೇಸಂದ್ರ ಠಾಣೆಯ ಉಪ ನಿರೀಕ್ಷಕ ಜಗದೀಶ್ ರೆಡ್ಡಿ, ಗ್ರಾ.ಪಂ ಸದಸ್ಯರು, ಗ್ರಾಪಂ ಮುಖಂಡರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಪಶು ವೈದ್ಯಾಧಿಕಾರಿ ಡಾ. ರವೀಂದ್ರ, ಸಿಡಿಪಿಓ ರಫೀಕ್, ತೋಟಗಾರಿಕೆ ಅಧಿಕಾರಿ ದಿವಾಕರ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ಬಿ. ಮಂಜುನಾಥ್, ತಾಪಂ ವ್ಯವಸ್ಥಾಪಕ ರಾಮಾಂಜಿನಪ್ಪ,  ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಆಧಿರೆಡ್ಡಿ, ಕೆಡಿಪಿ ಸದಸ್ಯರಾದ ರಿಯಾಜ್ ಪಾಷಾ, ಎಚ್. ಪಿ. ಲಕ್ಷ್ಮಿನಾರಾಯಣ, ಇಂದಿರಾ ಅಶ್ವಥ್ ರೆಡ್ಡಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಹಾಜರಿದ್ದ ನೂರಾರು ಸಾರ್ವಜನಿಕರು ಹಾಜರಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!