ದೇಶದಲ್ಲಿ ಕೆಲವು ದಿನಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL ಕಂಪನಿ ಇದೀಗ 5G ಸೇವೆಯನ್ನು (BSNL 5G Service) ಹೊರತರಲು ಸಿದ್ದೆತೆಗಳನ್ನು ನಡೆಸುತ್ತಿದೆ. ಈಗಾಗಲೇ ಕಡಿಮೆ ದರದಲ್ಲಿ ಹೆಚ್ಚು ದಿನಗಳ ವ್ಯಾಲಿಟಿಡಿ ಹಾಗೂ ಹಲವು ಸೇವೆಗಳನ್ನು ನೀಡುತ್ತಾ ಇತರೆ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಬಿ.ಎಸ್.ಎನ್.ಎಲ್ 5G ಸೇವೆ ಒದಗಿಸಲಿದೆ ಎಂದು ಅಧಿಕೃತವಾಗಿ ತಿಳಿಸಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತರೆ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಆಕರ್ಷಕ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ದೂರ ಸಂಪರ್ಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಬಿ.ಎಸ್.ಎನ್.ಎಲ್. ಹಂತ ಹಂತವಾಗಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಪೈಪೋಟಿಗೆ ಇಳಿಯುತ್ತಿದೆ. ಈಗಾಗಲೇ ಆಕರ್ಷಕ ಪ್ಲಾನ್ ಗಳನ್ನು ಹೊರತರುವ ಮೂಲಕ ಬೇರೆ ಟೆಲಿಕಾಂ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ. ಈಗಾಗಲೇ ದೇಶದ ಹಲವು ನೆಟ್ ವರ್ಕ್‌ಗಳನ್ನು 4Gಗೆ ಅಪ್ ಗ್ರೇಡ್ ಮಾಡಲಾಗುತ್ತಿದೆ. ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ 5G ಸೇವೆಯನ್ನು ಆರಂಭಿಸಲು ಬಿ.ಎಸ್.ಎನ್.ಎಲ್ ಸಿದ್ದತೆಗಳನ್ನು ನಡೆಸುತ್ತಿದೆ.
ಸಂಬಂಧಿತ ಲಿಂಕ್ ಇಲ್ಲಿದೆ ನೋಡಿ: https://x.com/BSNLCorporate/status/1831872092163469507
ಇನ್ನೂ ಈ ಕುರಿತು ಬಿ.ಎಸ್.ಎನ್.ಎಲ್ ನ ಆಂಧ್ರ ಪ್ರದೇಶದ ಚೀಫ್ ಜನರಲ್ ಮ್ಯಾನೇಜರ್ ಎಲ್.ಶ್ರೀನು ಸುದ್ದಿಗೋಷ್ಟಿಯನ್ನು ನಡೆಸಿದ್ದು, ಬಿ.ಎಸ್.ಎನ್.ಎಲ್ ತನ್ನ 5G ಸೇವೆತನ್ನು ಜನವರಿ 2025 ರಲ್ಲಿ ಆರಂಭಿಸಲು ಸಿದ್ದತೆಗಳನ್ನು ನಡೆಸುತ್ತಿದೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಆದಷ್ಟು ಬೇಗ 5G ಸೇವೆ ರೋಲ್ ಔಟ್ ಮಾಡಲು ತನ್ನ ಮೂಲಸೌಕರ್ಯವನ್ನು ಅಪ್ಡೇಟ್ ಮಾಡಲು ಕಂಪನಿ ಒತ್ತು ನೀಡುತ್ತಿದೆ. ಟವರ್ ಗಳು ಹಾಗೂ ಇತರೆ ಅಗತ್ಯ ಉಪಕರಣಗಳನ್ನು ಸಹ ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಸದ್ಯ 4G ಸೇವೆಯನ್ನು 5G ಗೆ ಪರಿವರ್ತನೆ ಮಾಡುವ ಕೆಲಸ ಸಹ ನಡೆಯುತ್ತಿದೆ. ಆದ್ದರಿಂದ 5G ಸೇವೆಯನ್ನು ಪ್ರಾರಂಭಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ. 4G ಸೇವೆಗಳನ್ನು ಆರಂಭಿಸಿದ ನೆಟ್ ವರ್ಕ್ ವ್ಯಾಪ್ತಿಯಲ್ಲಿ 5G ರೋಲ್ ಔಟ್ ಆಗುತ್ತದೆ ಎಂದು ಬಿ.ಎಸ್.ಎನ್.ಎಲ್ ತಿಳಿಸಿದೆ.
ಸಂಬಂಧಿತ ಲಿಂಕ್ ಇಲ್ಲಿದೆ ನೋಡಿ: https://x.com/BSNLCorporate/status/1832010331142438959
ಇನ್ನೂ ಇತ್ತೀಚಿಗಷ್ಟೆ ವಿಡಿಯೋ ಒಂದನ್ನು ಬಿ.ಎಸ್.ಎನ್.ಎಲ್ ಬಿಡುಗಡೆ ಮಾಡಿತ್ತು. ಇದರಲ್ಲಿ ಬಿ.ಎಸ್.ಎನ್.ಎಲ್ ಹಾಗೂ ಎಂ.ಟಿ.ಎನ್.ಎಲ್ ಎರಡೂ ಲೋಗೊಗಳು ಕಂಡುಬಂದಿದೆ. ವಿಡಿಯೋದಲ್ಲಿ ಹೆಚ್ಚಿನ ವೇಗದ ನೆಟ್ ವರ್ಕ್ ಸಂಪರ್ಕದ ಬಗ್ಗೆ ಮಾತನಾಡಲಾಗುತ್ತದೆ. ಬಿ.ಎಸ್.ಎನ್.ಎಲ್ 5G ಸೇವೆಯನ್ನು ಆದಷ್ಟು ಬೇಗ ಪ್ರಾರಂಭವಾಗಲಿ ಎಂದು ಗ್ರಾಹಕರು ಕಾಯುತ್ತಿದ್ದಾರೆ. ಆದರೆ ಯಾವ ಯಾವ ನಗರಗಳಲ್ಲಿ ಬಿ.ಎಸ್.ಎನ್.ಎಲ್. 5G ಸೇವೆ ಆರಂಭವಾಗಲಿದೆ ಎಂಬುದನ್ನು ಇನ್ನೂ ತಿಳಿಸಿಲ್ಲ.