Sunday, November 24, 2024

Wetland Virus: ಕೋವಿಡ್ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ, ಇದು ಮೆದುಳಿನ ಮೇಲೆ ಧಾಳಿ ಮಾಡುತ್ತಂತೆ….!

ಇಡೀ ವಿಶ್ವದ ಜನತೆ ಇನ್ನೂ ಕೋವಿಡ್ ಹೊಡೆತದಿಂದ ಹೊರಬಂದಿಲ್ಲ ಎಂದು ಹೇಳಬಹುದು. ಈ ಕೊರೋನಾ ವೈರಲ್ ಮೊದಲಿಗೆ ಕಂಡು ಬಂದಿದ್ದು ಚೀನಾದಲ್ಲಿ. ಇದೀಗ ಅದೇ ಚೀನಾದಲ್ಲಿ ಮತ್ತೊಂದು ವೈರಲ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸೋಂಕಿತನ ರಕ್ತ ಪರೀಕ್ಷೆಯಲ್ಲಿ ಈ ಹೊಸ ವೈರಸ್ ಕಂಡುಬಂದಿದೆ. ಚೀನಾದಲ್ಲಿ ಈ ಹೊಸ ವೈರಸ್ ಕಂಡುಬಂದಿದೆ. ಈ ವೈರಸ್ ಗೆ ವೆಟ್ ಲ್ಯಾಂಡ್ (Wetland Virus) ವೈರಸ್ ಎಂದು ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ.

ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದಂತಹ ಕೊರೋನಾ ವೈರಸ್ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ವಿಶ್ವದ ಹಲವು ಕಡೆ ಇನ್ನೂ ಈ ವೈರಸ್ ಇದೆ ಎಂದು ತಿಳಿದುಬಂದಿದೆ. ಇದೀಗ ಚೀನಾದಲ್ಲಿ ಮತ್ತೊಂದು ಹೊ ರೀತಿಯ ವೈರಸ್ ಅನ್ನು ಪತ್ತೆಹಚ್ಚಲಾಗಿದೆ. ಪ್ರಾಣಿಗಳಲ್ಲಿ ರಕ್ತ ಹೀರುವ ಕೀಟಗಳಿಂದ ಮನುಷ್ಯರಿಗೆ ಹರಡುವ ವೈರಸ್ ಗುರ್ತಿಸಿದ್ದು, ಅದಕ್ಕೆ ವೆಟ್ ಲ್ಯಾಂಡ್ ವೈರಸ್ ಎಂದು ಹೆಸರಿಡಲಾಗಿದೆ. ಈ ವೈರಸ್ ಮೆದುಳು ಹಾಗೂ ನರವೈಜ್ಞಾನಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಚೀನಾದ ಕ್ಸಿನ್ಜುವೊ ಎಂಬ ನಗರದಲ್ಲಿ ಕಳೆದ 2019 ರಲ್ಲಿ 61 ವರ್ಷದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.

Wetland Virus found in china 0

ಮಂಗೋಲಿಯಾದ ಗದ್ದೆ ಪ್ರದೇಶದಿಂದ ಬಂದ ಅವರು ಪರಾವಲಂಬಿ ಕಡಿತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗೋಲಿಯಾದ ಜೌಗು ಪ್ರದೇಶದಲ್ಲಿ ಉಣ್ಣೆ ಹುಳದ ಕಡಿತಕ್ಕೆ ಒಳಗಾದ ಬಳಿಕ ಜ್ವರ, ತಲೆನೋವು ಮತ್ತು ವಾಂತಿಯನ್ನು ಅನುಭವಿಸಿದರು. ಬಳಿಕ ಅವರನ್ನು ಪರೀಕ್ಷೆ ಮಾಡಿದಾಗ ವೈರಸ್ ಇರುವುದು ಪತ್ತೆಯಾಯಿತು. ಈ ರೋಗಿಗೆ ಮೊದಲು ಆ್ಯಂಟಿಬಯಾಟಿಕ್‌ಗಳನ್ನು ನೀಡಿದರೂ ಯಾವುದೇ ಫಲಿತಾಂಶ ಸಿಗಲಿಲ್ಲ. ಏಕೆಂದರೆ ಇದು ಬ್ಯಾಕ್ಟೀರಿಯಾದಿಂದ ಬರುವ ರೋಗವಲ್ಲ, ವೈರಸ್‌ನಿಂದ ಬರುವ ಕಾಯಿಲೆ ಎಂಬುದು ಗೊತ್ತಾಯಿತು. ಈ ಪ್ರದೇಶದ ವ್ಯಾಪ್ತಿಯ 640 ಅರಣ್ಯ ಅಧಿಕಾರಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ 12 ಜನರಿಗೆ ಈ ವೈರಸ್ ಸೋಂಕು ತಗುಲಿರುವುದು ಕಂಡು ಬಂದಿದೆ. ಆದರೆ ಚಿಕಿತ್ಸೆಯ ಬಳಿಕ ಎಲ್ಲಾ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದಿ ನ್ಯೂ ಇಂಗ್ಲೆಂಡ್​ ಜರ್ನಲ್ ಆಫ್ ಮೆಡಿಸಿನ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚೀನಾದಲ್ಲಿ ಈಗಾಗಲೇ 17 ಜನರು ಈ ವೆಟ್‌ಲ್ಯಾಂಡ್ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ. ಜ್ವರ, ತಲೆಸುತ್ತು, ತಲೆನೋವು, ಕೀಲು ನೋವು ಹಾಗೂ ಸುಸ್ತು ಮುಂತಾದ ಲಕ್ಷಣಗಳು ಸಾಮಾನ್ಯವಾಗಿವೆ. ಕೋಮಾದಂತಹ ನರಮಂಡಲದ ಲಕ್ಷಣಗಳು ಸಹ ಕಂಡುಬರುತ್ತವೆ. ಈ ವೈರಸ್ ಗೆ ತುತ್ತಾಗಿದ್ದವರಿಗೆ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಈ ವೈರಸ್ ತುಂಬಾ ಅಪಾಯಕಾರಿಯಾಗುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಉತ್ತರ ಚೀನಾದಲ್ಲಿ ಪ್ರಾಣಿಗಳು ಮತ್ತು ಮನುಷ್ಯರಲ್ಲಿಯೂ WELV ವೈರಸ್ ಕಂಡುಬಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವೈರಸ್ ಕುರುಹುಗಳು ಕುದುರೆಗಳು, ಹಂದಿಗಳು ಮತ್ತು ಇಲಿಗಳಂತಹ ಪ್ರಾಣಿಗಳಲ್ಲಿಯೂ ಕಂಡುಬಂದಿವೆ. ಸದ್ಯ ಈ ವೈರಸ್ ಹೇಗೆ ಹರಡುತ್ತದೆ ಹಾಗೂ ಅದರ ಪರಿಣಾಮಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗುತ್ತದೆಯಂತೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!