Tuesday, July 1, 2025
HomeStateProtest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟೋಲ್ ಪ್ಲಾಜಾ ಮುಂಭಾಗ ಪ್ರತಿಭಟನೆ….!

Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟೋಲ್ ಪ್ಲಾಜಾ ಮುಂಭಾಗ ಪ್ರತಿಭಟನೆ….!

ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ (Protest) ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಟೋಲ್‍ ಟ್ ಯುನಿಯನ್ ಮತ್ತು ಸಿಐಟಿಯು ಕಾರ್ಯಕರ್ತರು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾ.ಹೆ.44ರ ನಾರೇಪಲ್ಲಿ ಟೋಲ್ ಪ್ಲಾಜಾ ಮುಂದೆ ಪ್ರತಿಭಟನೆ ನಡೆಸಿದರು.

Toll Plaza employees protest in Bagepalli
Toll Plaza employees protest in Bagepalli

ಈ ಸಂದರ್ಭದಲ್ಲಿ  ಪ್ರತಿಭಟನಕಾರರನ್ನು (Protest) ಉದ್ದೇಶಿಸಿ ಸಿಐಟಿಯು ತಾಲೂಕು ಕಾರ್ಯದರ್ಶಿ ಮುಸ್ತಾಫ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಟೋಲ್ ಗೇಟ್‍ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವೇತನ ಹೆಚ್ಚಳ ಮಾಡುವಲ್ಲಿ ಹಾಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ (Protest)ಅವರು ತಕ್ಷಣ ಸಂಬಂಧಪಟ್ಟ ಟೋಲ್ ಪ್ಲಾಜಾ ಕಂಪನಿ ಗುತ್ತಿಗೆದಾರರು ಇಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಹೆಚ್ಳ ಮಾಡಬೇಕು, ಉದ್ಯೋಗ ಭದ್ರತೆ ಕಲ್ಪಿಸಬೇಕು, ಪಿ.ಎಫ್ ಸೌಲಭ್ಯ ಕಲ್ಪಿಸಬೇಕು, ಸಾಮಾಜಿಕ ಬದ್ರತೆ, ಗುಣಮಟ್ಟದ ಸಮವಸ್ತ್ರ, ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ (Protest) ಟೋಲ್ ಪ್ಲಾಜಾ ವ್ಯವಸ್ಥಾಪಕ ಆಗಮಿಸಿ ಇಲ್ಲಿ ಕೆಲಸ ನೀಡುತ್ತಿರುವ ನೌಕರರ ಎಲ್ಲಾ ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. (Protest) ಈ ಸಂದರ್ಭದಲ್ಲಿ ಟೋಲ್‍ಗೇಟ್ ನೌಕರರ ಸಂಘದ ಅಧ್ಯಕ್ಷ ಶಂಕರರೆಡ್ಡಿ, ಸಿಐಟಿಯು ಮುಖಂಡ ಓಬಳರಾಜು, ಟೋಲ್ ಗೇಟ್ ನೌಕರರಾದ  ಇರ್ಫಾನ್, ಸುರೇಶ್, ವೆಂಕಟರೆಡ್ಡಿ, ಶ್ರೀನಿವಾಸ್, ಸೋಮಶೇಖರ್, ಗಂಗರಾಜು, ಶ್ರೀನಿವಾಸರೆಡ್ಡಿ, ಮತ್ತಿತರರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular