Friday, November 22, 2024

Gruhalakshmi Scheme : ಗೃಹಲಕ್ಷ್ಮಿ ಹಣದಿಂದ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ….!

Gruhalakshmi Scheme –  ಕರ್ನಾಟಕ ರಾಜ್ಯ ಸರ್ಕಾರದ ಮಹತ್ತರ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ  ಹಣದಿಂದ ವೃದ್ದೆಯೊಬ್ಬಳು ಊರಿನ ಮಂದಿಗೆ ಹೋಳಿಗೆ ಊಟ ಹಾಕಿಸಿದ್ದರು. ಈ ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್ (Gruhalakshmi Scheme) ಸಂತಸ ವ್ಯಕ್ತಪಡಿಸಿದ್ದಾರೆ. ಅಜ್ಜಿಗೆ ಪೋನ್ ಮೂಲಕ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು ಸಾರ್ಥಕತೆಯಾಗಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ (Gruhalakshmi Scheme) ಸಂತಸ ಹಂಚಿಕೊಂಡಿದ್ದಾರೆ.

Lakshmi Hebbalkar prised akka thayi langoti

ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಜನರಿಗೆ ಅಜ್ಜಿ ಹೋಳಿಗೆ ಊಟ ಹಾಕಿಸಿದ್ದಾರೆ. (Gruhalakshmi Scheme) ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ ಗೃಹಲಕ್ಷ್ಮೀ ಹಣದಿಂದ ಊರಿಗೆಲ್ಲಾ ಊಟ ಹಾಕಿಸಿದ್ದಾರೆ. (Gruhalakshmi Scheme) ಸಿದ್ದರಾಮಯ್ಯನವರು ಪ್ರತಿ ತಿಂಗಳು ನಮಗೆಲ್ಲಾ 2,000 ಹಣ ನೀಡುತ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿನ ಮಂದಿಗೆ ಹೋಳಿಗೆ ಊಟ ಹಾಕಿಸಿದ್ದರು. (Gruhalakshmi Scheme)ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಿಸಿದ್ದರು. ಅಜ್ಜಿಯ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದರು. ಈ ಸುದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Gruhalakshmi Scheme) ರವರವರೆಗೂ ತಲುಪಿದ್ದು, ಅಜ್ಜಿಗೆ ದೂರವಾಣಿ ಮೂಲಕ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಊರಿನ ಮಂದಿಗೆ ಹೋಳಿಗೆ ಊಟ (Gruhalakshmi Scheme)ಹಾಕಿಸಿದ್ದ ಅಜ್ಜಿ ಅಕ್ಕಾತಾಯಿ ಲಂಗೋಟಿ ರವರಿಗೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‍ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. (Gruhalakshmi Scheme)ಕೆಲಹೊತ್ತು ಅಜ್ಜಿಯೊಂದಿಗೆ ಸಚಿವೆ ಮಾತನಾಡಿದ್ದಾರೆ. ಬೆಳಗಾವಿ ಶೈಲಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‍ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ, (Gruhalakshmi Scheme)ನಿನ್ನ ಮಗಳಾದ ನನಗೆ ಯಾವಾಗ ಊಟ ಹಾಕಿಸುತ್ತೀ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಜ್ಜಿ ಜರೂರೇ ಬಾ ನಿನಗೂ ಊಟ ಹಾಕಿಸ್ತೀನಿ, ನೀನೆ ನಮಗೆಲ್ಲಾ ಗೃಹಲಕ್ಷ್ಮೀ ಹಣ ಕೊಡುವ ಮನಗೆ ಮಗಳು, (Gruhalakshmi Scheme)ನಿನಗೆ ಇಲ್ಲ ಎನ್ನಲಾಗುವುದೇ ಎಂದು ಅಜ್ಜಿ ಹೇಳಿದ್ದಾರೆ. ಬಳಿಕ ಸಂತಸಗೊಂಡ ಸಚಿವೆ ನಿನಗೊಂದು ರೇಷ್ಮೆ ಸೀರೆ ಕಳುಹಿಸಿರುವುದಾಗಿ ಹೇಳಿದ್ದಾರೆ.

https://x.com/laxmi_hebbalkar/status/1827684291330838614

ಇನ್ನೂ ಗೃಹಲಕ್ಷ್ಮೀ ಯೋಜನೆಯಿಂದ (Gruhalakshmi Scheme) ನಿಮ್ಮಂತವರಿಗೆಲ್ಲಾ ಎಷ್ಟೆಲ್ಲಾ ಅನುಕೂಲವಾಗುತ್ತಿದೆ ಎಂದು ತಿಳಿದು ಸಂತಸವಾಗುತ್ತಿದೆ. ಬಡ ಜನರ ಬದುಕಿನಲ್ಲಿ ನೆರವಾಗಬೇಕು, ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ಸರ್ಕಾರದ ಉದ್ದೇಶವನ್ನು (Gruhalakshmi Scheme)ಗೃಹಲಕ್ಷ್ಮೀ ಯೋಜನೆ ಈಡೇರಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ರವರಿಗೆ ನಿಮ್ಮೆಲ್ಲರ ಆಶಿರ್ವಾದ ಇರಲಿ ಎಂದು ಸಚಿವೆ (Gruhalakshmi Scheme)ಲಕ್ಷ್ಮೀ ಹೆಬ್ಬಾಳ್ಕರ್‍ ತಿಳಿಸಿದ್ದಾರೆ. ಇನ್ನೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂಲಕ ಅಜ್ಜಿಗೆ ರೇಷ್ಮೇ ಸೀರೆ ಮತ್ತು (Gruhalakshmi Scheme) ಹೋಳಿಗೆ ಕಳುಹಿಸಿಕೊಟ್ಟಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಪರವಾಗಿ ಅಜ್ಜಿಗೆ ಶಾಲು ಹೊದಿಸಿ ಸನ್ಮಾನ ಸಹ ಮಾಡಲಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!