RRB Recruitment 2024 – ಡಿಪ್ಲೋಮಾ, ಐಟಿಐ ಮುಗಿಸಿದಂತಹ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಐಟಿಐ, ಡಿಪ್ಲೋಮಾ ಮುಗಿಸಿ ಒಳ್ಳೆಯ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (RRB Recruitment 2024) ಖಾಲಿ ಇರುವ ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸೆ.6 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಈ ಹುದ್ದೆಗಳ ವಿವರಗಳನ್ನು ಮುಂದೆ ತಿಳಿಸಲಾಗಿದೆ.
RRB Recruitment 2024-ಭಾರತೀಯ ರೈಲ್ವೆ ಇಲಾಖೆಯಲ್ಲಿರುವ 14,298 ಹುದ್ದೆಗಳ ಭರ್ತಿಗೆ ರೈಲ್ವೆ ರಿಕ್ರೂಟ್ ಮೆಂಟ್ ಬೋರ್ಡ್ ಅರ್ಜಿ ಆಹ್ವಾನಿಸಿದೆ. ಸುಮಾರು 18 ಕೆಟಗರಿಗಳಲ್ಲಿ 9,144 ಟೆಕ್ನಿಷಿಯನ್ (ಗ್ರೇಡ್ 1, 3) ಹುದ್ದೆಗಳನ್ನು ಭರ್ತಿ ಮಾಡಲು ಫೆಬ್ರವರಿಯಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಆದರೆ ನಂತರದಲ್ಲಿ ಇನ್ನೂ (RRB Recruitment 2024) ಹಲವು ವರ್ಕ್‌ಶಾಪ್, ಡಿವಿಷನ್‌ಗಳಿಂದ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇದೀಗ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆಗಳ ಭರ್ತಿಗೆ ರೈಲ್ವೇ ನೇಮಕಾತಿ ಮಂಡಳಿ ಅರ್ಜಿ ಅಹ್ವಾನಿಸಿದೆ. (RRB Recruitment 2024) ಅಧಿಸೂಚನೆ, ಅರ್ಜಿ ಸಲ್ಲಿಸುವ ವಿಧಾನ, ಹುದ್ದೆಗಳ ವಿವರಗಳನ್ನು ತಿಳಿಯಲು ಮುಂದೆ ಓದಿ.
RRB Recruitment 2024- ಖಾಲಿಯಿರುವ ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:
- ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ (ಓಪನ್ ಲೈನ್)- 1,092 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ, ಬಿ.ಎಸ್‌ಸಿ, ಬಿಇ / ಬಿ.ಟೆಕ್
- ಟೆಕ್ನಿಷಿಯನ್ ಗ್ರೇಡ್ III (ಓಪನ್ ಲೈನ್) 8,052 ಹುದ್ದೆ, ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ
- ಟೆಕ್ನಿಷಿಯನ್ ಗ್ರೇಡ್ III (ವರ್ಕ್ ಶಾಪ್ & ಪಿಯು) 5,154 ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ
RRB Recruitment 2024- ವಯೋಮಿತಿ ಮತ್ತು ಅರ್ಜಿ ಶುಲ್ಕ: ಟೆಕ್ನಿಷಿಯನ್ ಗ್ರೇಡ್ I ಹುದ್ದೆಗೆ ವಯಸ್ಸು 18-36, ಟೆಕ್ನಿಷಿಯನ್ ಗ್ರೇಡ್ III ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-33 ವರ್ಷದೊಳಗಿರಬೇಕು. (RRB Recruitment 2024) ಮೀಸಲಾತಿಗೆ ಅನುಗುಣವಾಗಿ ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ, ಎಸ್‌ಟಿ, ಮಾಜಿ ಯೋಧರು, ಪಿಡಬ್ಲ್ಯುಬಿಡಿ, ಮಹಿಳೆಯರು, ತೃತೀಯ ಲಿಂಗಿಗಳು, ಇಬಿಎಸ್ ಅಭ್ಯರ್ಥಿಗಳು 250 ರೂ. ಉಳಿದ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. (RRB Recruitment 2024) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತಿದೆ. (RRB Recruitment 2024) ಬಳಿಕ ದಾಖಲಾತಿಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಟೆಕ್ನಿಷಿಯನ್ ಗ್ರೇಡ್ I ಹುದ್ದೆಗಳಿಗೆ 29,200 ಹಾಗೂ ಟೆಕ್ನಿಷಿಯನ್ ಗ್ರೇಡ್ III ಹುದ್ದೆಗಳಿಗೆ 19,900 ರೂಪಾಯಿಗಳು ಮಾಹೆಯಾನ ವೇತನ ಸಿಗಲಿದೆ. (RRB Recruitment 2024) ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ indianrailways.gov.in ಭೇಟಿ ನೀಡಬಹುದು.