BPL Ration Card – ರಾಜ್ಯ ರಾಜಕಾರಣದಲ್ಲಿ ಸದ್ಯ ಗ್ಯಾರಂಟಿ ಯೋಜನೆಗಳ ಜಟಾಪಟಿ ನಡೆಯುತ್ತಿದೆ. ಸರ್ಕಾರದ ಸಚಿವರು, ಶಾಸಕರಿಂದಲೇ ಗ್ಯಾರಂಟಿಗಳ ಬಗ್ಗೆ ಗೊಂದಲದ ಹೇಳಿಕೆಗಳು ಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯನವರು (Siddaramaiah) ಎಲ್ಲಾ ಗ್ಯಾರಂಟಿಗಳು (Congress Guarantee) ಮುಂದುವರೆಯುತ್ತವೆ ಎಂದು ಸ್ವತಂತ್ರ ದಿನಾಚರಣೆಯಂದು ಹೇಳಿದ್ದಾರೆ. ಆದರೂ ಸಹ ಗ್ಯಾರಂಟಿಗಳನ್ನು ನೀಡುವುದರಲ್ಲಿ ಬದಲಾವಣೆಯಾಗಬೇಕೆಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ಅಧಿಕೃತ ಮಾಹಿತಿಯಿಲ್ಲದೇ ಇದ್ದರೂ ಇದು ನಮ್ಮ ವೈಯುಕ್ತಿಕ ಅಭಿಪ್ರಾಯ ಎಂಬ ವಾದವನ್ನು ಕೆಲ ಸಚಿವರು ಮುಂದಿಡುತ್ತಿದ್ದಾರೆ.
BPL Ration Card – ಇದೀಗ ಕೆಲವೊಂದು ಮೂಲಗಳಿಂದ ಬಿಪಿಎಲ್ ಕಾರ್ಡ್ ಗೆ ಆಪರೇಷನ್ ಮಾಡಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್‌ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ 25 ಸಾವಿರ ಕೋಟಿ ಉಳಿತಾಯ ಮಾಡುವ ಲೆಕ್ಕಾಚಾರ ಹಾಕಿಕೊಂಡಿದೆಯಂತೆ. ಅಕ್ಟೋಬರ್ ಮಾಹೆಯ ವೇಳೆಗೆ ಬಿಪಿಎಲ್ (BPL Ration Card) ರೇಷನ್ ಕಾರ್ಡ್‌ಗೆ ಮೇಜರ್ ಸರ್ಜರಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಕೆಲಸ ನಡೆದರೇ ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಾರೆ. ಗ್ಯಾರಂಟಿ ಯೋಜನೆಗಳಿಂದ (BPL Ration Card) ಅನರ್ಹರು ಹೊರಗುಳಿಯುತ್ತಾರೆ ಎಂಬುದು ಈ ಕ್ರಮದ ಲೆಕ್ಕಾಚಾರವಂತೆ. ಸದ್ಯ ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಅಕ್ರಮ ಬಿಪಿಎಲ್ ಕಾರ್ಡ್ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಅನರ್ಹ ಹಾಗೂ ಅಕ್ರಮವಾಗಿ ಬಿಪಿಎಲ್ ಕಾರ್ಡ್ (BPL Ration Card) ಪಡೆದಂತಹವರನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇತರೆ ನಾಲ್ಕು ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆಯಂತೆ. ಬಿಪಿಎಲ್ ಕಾರ್ಡ್ ದಾರರ ಹೆಸರಲ್ಲಿ ಸ್ವಂತ ಬಳಕೆಯ ವಾಹನಗಳಿವೆಯೇ ಎಂಬುದನ್ನು ತಿಳಿಯಲು ಸಾರಿಗೆ ಇಲಾಖೆ, ಜಮೀನು ಎಷ್ಟು ಹೊಂದಿದ್ದಾರೆ ಎಂಬುದನ್ನು ತಿಳಿಯೋಕೆ ಕಂದಾಯ ಇಲಾಖೆ, ಆದಾಯ ತೆರಿಗೆ ಇಲಾಖೆಯ ಮೂಲಕ ತೆರಿಗೆ ಪಾವತಿ ಮಾಡುವವರೇ (BPL Ration Card) ಎಂಬುದನ್ನು ಪತ್ತೆ ಹಚ್ಚಲು ಆಹಾರ ಇಲಾಖೆ ಸಿದ್ದತೆಗಳನ್ನು ನಡೆಸುತ್ತಿದೆಯಂತೆ.
ಇನ್ನೂ ಎಂತಹವರ ಬಿಪಿಎಲ್ ಕಾರ್ಡ್ (BPL Ration Card) ರದ್ದಾಗಲಿದೆ ಎಂಬ ವಿಚಾರಕ್ಕೆ ಬಂದರೇ, ಬಿಪಿಎಲ್ ಕುಟುಂಬದಾರರ ವಾರ್ಷಿಕ ಆದಾಯ 1.20 ಲಕ್ಷಕ್ಕೂ ಹೆಚ್ಚಿದ್ದರೇ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೇ, ನಗರ ವ್ಯಾಪ್ತಿಯಲ್ಲಿ ಸಾವಿರ ಚದರಡಿ ಪಕ್ಕಾ ಮನೆಯಿದ್ದರೇ, ವೈಟ್ ಬೋರ್ಡ್‌ನ ಕಾರಿದ್ದರೇ, (BPL Ration Card) ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೇ ಅಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇನ್ನೂ ಈ ಕುರಿತು ಯಾವ ರೀತಿಯ ಕ್ರಮ ಜರುಗಲಿದೆ, ಈ ಆಪರೇಷನ್ (BPL Ration Card) ಬಿಪಿಎಲ್ ಕಾರ್ಡ್ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.