Tuesday, November 5, 2024

Aadhaar Card: ನಿಮ್ಮ ಆಧಾರ್ ಕಳೆದುಹೋಗಿದೆಯಾ, ನಂಬರ್ ಸಹ ನೆನಪಿಲ್ಲವೇ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…..!

Aadhaar Card – ಭಾರತದಲ್ಲಿ ಆಧಾರ್‍ ಕಾರ್ಡ್ ತುಂಬಾನೆ ಅವಶ್ಯಕತೆಯನ್ನು ಸೃಷ್ಟಿಸಿದೆ ಎಂದೇ ಹೇಳಬಹುದು. ಸರ್ಕಾರದ ಯೋಜನೆಗಳು, ಸೌಲಭ್ಯಗಳು, ಸಿಮ್ ಕಾಡ್ ಖರೀದಿ, ಬ್ಯಾಂಕಿಂಗ್ ಸೇರಿದಂತೆ ಅನೇಕ ಕೆಲಸಗಳಿಗಾಗಿ ಆಧಾರ್‍ ಬೇಕಾಗುತ್ತದೆ. ಕೆಲವೊಂದು ಕೆಲಸಗಳಿಗೆ ಆಧಾರ್‍ ಬೇಕೆ ಬೇಕಾಗಿದೆ. (Aadhaar Card) ಆಧಾರ್‍ ಕಾರ್ಡ್ ಪಡೆದುಕೊಳ್ಳಲು, ಅಪ್ಡೇಟ್ ಮಾಡಲು ಇಂದಿಗೂ ಸಹ ಜನರು ಪರದಾಡುವುದನ್ನು ನೋಡಿದ್ದೇವೆ. ಇದೀಗ ಕಳೆದು ಹೋದ (Aadhaar Card) ಆಧಾರ್‍ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

retrieve aadhaar card

ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ (Aadhaar Card) ಆಧಾರ್‍ ಒಮ್ಮೆ ಕಳೆದುಹೋದರೇ, ಆ ಆಧಾರ್‍ ಸಂಖ್ಯೆ ನಿಮಗೆ ಮರೆತು ಹೋಗಿದ್ದರೇ, ಈ ಕ್ರಮಗಳನ್ನು ಅನುಸರಿಸಿ ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ನೀವು ತಮ್ಮ ಸರ್ಚ್ ಇಂಜಿನ್ (Google) ನಲ್ಲಿ UIDAI ಎಂದು ಸರ್ಚ್ ಮಾಡಬೇಕು. (Aadhaar Card) ಬಳಿಕ ವೆಬ್ ಸೈಟ್ ತೆರೆಯುತ್ತದೆ. ಕೆಳಗೆ ಸ್ಕ್ರೋಲ್ ಮಾಡಿದರೇ, ಅಲ್ಲಿ ಆಧಾರ್‍ ಸರ್ವಿಸ್ ಆಯ್ಕೆ ಸಿಗುತ್ತದೆ. ಆಧಾರ್‍ ಸರ್ವಿಸ್ ಆಯ್ಕೆ ಮಾಡಿದ ಬಳಿಕ ಕ್ಲಿಕ್ ಸ್ಕ್ರೋಲ್ ಮಾಡಿ. ಅಲ್ಲಿ ನಿಮಗೆ (Aadhaar Card) ಆಧಾರ್‍ ರಿಟ್ರೀವ್ ಆಪ್ಷನ್ ಕಾಣಿಸುತ್ತದೆ. ಬಳಿಕ ಬರುವ ಪೇಜ್ ನಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್‍, ಇ-ಮೇಲ್ ನಮೂದಿಸಬೇಕು. ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ, ಸೆಂಡ್ ಒಟಿಪಿ ಕ್ಲಿಕ್ ಮಾಡಿ, ಒಟಿಪಿ ನಮೂದಿಸಿದ ಬಳಿಕ (Aadhaar Card) ಆಧಾರ್‍ ನಂಬರ್‍ ಕಾಣಿಸಿಕೊಳ್ಳುತ್ತದೆ.

ಇನ್ನೂ ಆನ್ ಲೈನ್ ನಲ್ಲಿ ನಿಮ್ಮ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ:

  1. UIDAI ಅಧಿಕೃತ ವೆಬ್‌ಸೈಟ್‌ಗೆ ಹೋಗಿ: UIDAI ವೆಬ್‌ಸೈಟ್
  2. ‘Update Your Aadhaar’ ಕ್ಲಿಕ್ ಮಾಡಿ: ಮುಖ್ಯ ಪುಟದಲ್ಲಿ ‘Update Your Aadhaar’ ಅಥವಾ ‘Update Demographics Data Online’ ಆಯ್ಕೆಯನ್ನು ಆಯ್ಕೆಮಾಡಿ.
  3. ಮೈ ಆಧಾರ್ ಲಾಗಿನ್: ನಿಮ್ಮ ಆಧಾರ್ ಸಂಖ್ಯೆಯನ್ನು ಮತ್ತು CAPTCHA ಕೋಡ್ ಅನ್ನು ನಮೂದಿಸಿ. ನೀವು OTP ಪಡೆಯುವಿರಿ, ಅದನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
  4. ವಿವರಗಳನ್ನು ಅಪ್ಡೇಟ್ ಮಾಡಿ: ಆನಂತರ ನೀವು ಅಪ್ಡೇಟ್ ಮಾಡಲು ಬಯಸುವ ವಿವರಗಳನ್ನು ಆಯ್ಕೆ ಮಾಡಿ (ಮನೆಯ ವಿಳಾಸ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಇತ್ಯಾದಿ). ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
  5. ಪಾವತಿ ಮಾಡಿ: ಕೆಲವು ಅಪ್ಡೇಟ್‌ಗಳಿಗೆ ಸಣ್ಣ ಪಾವತಿಯನ್ನು (ನೋಮಿನಲ್ ಚಾರ್ಜ್) ಪಾವತಿಸಲು ಅಗತ್ಯವಿರಬಹುದು. ಪಾವತಿ ಮಾಡಲು ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳು ಲಭ್ಯವಿದೆ.
  6. ಅಪ್ಡೇಟ್ ರಿಕ್ವೆಸ್ಟ್: ಪಾವತಿ ಪೂರ್ಣಗೊಂಡ ನಂತರ, ನಿಮ್ಮ ಅಪ್ಡೇಟ್ ಮನವಿ ಪ್ರಕ್ರಿಯೆಗೊಳ್ಳುತ್ತದೆ ಮತ್ತು URN ಪಡೆಯುತ್ತೀರಿ, ಇದರಿಂದ ನೀವು ಅಪ್ಡೇಟ್ ಸ್ಥಿತಿಯನ್ನು ಟ್ರಾಕ್ ಮಾಡಬಹುದು.
by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!