HomeStateSuicide News: ರೈಲು ಹಳಿಗೆ ತಲೆಕೊಟ್ಟು ಒಂದೇ ಕುಟುಂಬದ ಅಕ್ಕ ತಮ್ಮ ಆತ್ಮಹತ್ಯೆ

Suicide News: ರೈಲು ಹಳಿಗೆ ತಲೆಕೊಟ್ಟು ಒಂದೇ ಕುಟುಂಬದ ಅಕ್ಕ ತಮ್ಮ ಆತ್ಮಹತ್ಯೆ

Suicide News – ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಸಮೀಪ ರೈಲಿನ ಹಳಿಗೆ ತಲೆಕೊಟ್ಟು ಒಂದೆ ಕುಟುಂಬದ ಅಕ್ಕ-ತಮ್ಮ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ (Suicide News) ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಶಿಡ್ಲಘಟ್ಟ ನಗರದ ಪ್ರೇಮನಗರದ ನಿವಾಸಿಗಳಾದ ತಮ್ಮ ಪ್ರಭು(30ವರ್ಷ) ತಂಗಿ ಶಿಲ್ಪ (32 ವರ್ಷ) ಎಂದು ತಿಳಿದು ಬಂದಿದೆ.

ಆ.2ರ ಬೆಳಗ್ಗೆ ರೈಲ್ವೆ ಹಳಿಗಳ ಮೇಲೆ ರುಂಡ- ಮುಂಡ ಬೇರೆ ಬೇರೆಯಾಗಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು ನಗರ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಮೊದಲಿಗೆ ಯಾರೋ ಪ್ರೇಮಿಗಳು ಇರಬಹುದು ಎಂದು ಊಹೆ ಮಾಡಲಾಗಿತ್ತು. ಬಳಿಕ ಅವರು ಒಡಹುಟ್ಟಿದವರು ಎಂದು ತಿಳಿದು ಬಂದಿದ್ದು ಎಲ್ಲರ ಒದ್ದೆಯಾಗುವಂತೆ (Suicide News) ಮಾಡಿದೆ

ಇನ್ನೂ ಕಳೆದ ರಾತ್ರಿ ರೈಲಿಗೆ ತಲೆಗೆ ಕೊಟ್ಟು ಇಬ್ಬರು ಜೀವ ಕಳೆದುಕೊಂಡಿದ್ದು ಇಂದು ಬೆಳಗ್ಗೆ ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ವಾಯು ವಿಹಾರಕ್ಕೆ ಹೋದಂತದ ಸಂದರ್ಭದಲ್ಲಿ ಎರಡು ಮೃತ ದೇಹಗಳು ರೈಲು ಹಳಿಗಳ ಮೇಲೆ ಕಂಡುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಮಾಹಿತಿಯನ್ನು ತಿಳಿಸಿದ್ದಾರೆ. ಇನ್ನೂ ಮೃತ ಅಕ್ಕ-ತಮ್ಮ ಕಳೆದ ಎರಡು ತಿಂಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಇದರಿಂದ ಸಾಕಷ್ಟು ಮನನೊಂದಿದ್ದ ಮಕ್ಕಳು ಆತ್ಮಹತ್ಯೆ (Suicide News) ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಿಂದ-ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆ (Suicide News) ನಿಖರ ಕಾರಣ ಏನು ಎಂಬುವುರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular