Saturday, August 30, 2025
HomeStateD K Shivakumar : ರಾಜ್ಯಪಾಲರ ವಿರುದ್ದ ಗಂಭೀರ ಆರೋಪ ಮಾಡಿದ ಡಿಕೆಶಿ, ಕೇಂದ್ರ ಸರ್ಕಾರ...

D K Shivakumar : ರಾಜ್ಯಪಾಲರ ವಿರುದ್ದ ಗಂಭೀರ ಆರೋಪ ಮಾಡಿದ ಡಿಕೆಶಿ, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದ ಡಿಕೆ….!

ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಕೇಳಿಬರುತ್ತಿರುವ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ಸಿಎಂ ಗೆ ರಾಜ್ಯಪಾಲರು ನೊಟೀಸ್ ನೀಡಿದ್ದು, ಈ ಸಂಬಂಧ ನಿನ್ನೆ ಕ್ಯಾಬಿನೆಟ್ ಸಭೆ ಸಹ ನಡೆದಿದೆ. ಸಭೆಯ ಬಳಿಕ (D K Shivakumar) ಡಿ.ಕೆ.ಶಿವಕುಮಾರ್‍ ಸುದ್ದಿಗೋಷ್ಟಿಯನ್ನು ನಡೆಸಿದರು. ಈ ವೇಳೆ ನಾವು ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು ಡಿ.ಕೆ.ಶಿವಕುಮಾರ್‍ (D K Shivakumar) ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೊಟೀಸ್ ನೀಡಿದ್ದರು. ಈ ಸಂಬಂಧ ಡಿಕೆಶಿ (D K Shivakumar) ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ಸಹ ನಡೆಯಿತು. ಬಳಿಕ ಸುದ್ದಿಗೋಷ್ಟಿಯನ್ನು ನಡೆಸಿದ ಡಿ.ಕೆ.ಶಿವಕುಮಾರ್‍ ಸಿದ್ದರಾಮಯ್ಯನವರ ಪರ ನಡೆಸಿದರು. ಜೊತೆಗೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕಿದರು. ರಾಜ್ಯಪಾಲರಿಗೆ ಅಬ್ರಾಹಂ ಎಂಬುವವರು ದೂರು ಕೊಟ್ಟಿದ್ದರು.  ಅವರು ದೂರು ಕೊಟ್ಟ ದಿನವೇ ರಾಜ್ಯಪಾಲರು ಸಿ.ಎಸ್. ಬಳಿ ವರದಿ ಕೇಳಿದ್ದಾರೆ. ಸಂವಿಧಾನದ ಕಗ್ಗೊಲೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಮಾದರಿಯಲ್ಲಿ ಕೇಂದ್ರ ಸರ್ಕಾರ ಮಾಡುತ್ತಿದೆ. ನಾವು ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು (D K Shivakumar)  ಆರೋಪಿಸಿದರು.

D K Shivakumar press meet on Governer notice 0

ಅಬ್ರಾಹಂ ಎಂಬ ವ್ಯಕ್ತಿ ಯಾರು ಹಾಗೂ ಆತನ ಬಗ್ಗೆ ಎಲ್ಲವೂ ತಿಳಿದಿದೆ. ಜು.26 ರಂದು ಅಬ್ರಾಹಂ ದೂರು ಕೊಡ್ತಾರೆ. ಜು.5 ರಂದು ಸಿ.ಎಸ್ ಗೆ ವರದಿ ಕೇಳುತ್ತಾರೆ. ಜು.15 ರಂದು ಮತ್ತೆ ಸಿ.ಎಸ್. ಗೆ ಪತ್ರ ಬರೆಯುತ್ತಾರೆ. ಮುಡಾದಿಂದ ಸೈಟ್ ಗಳ ಅನಧಿಕೃತ ಹಂಚಿಕೆ ಬಗ್ಗೆ ದೂರು ಕೊಡ್ತಾರೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದೂರು ಕೊಡುತ್ತಾರೆ. ಅದಕ್ಕೆ ವಿವರಣೆ ಕೇಳಿ ಪತ್ರ ಬರೆಯುತ್ತಾರೆ. ರಾಜ್ಯಪಾಲರಿಗೆ ಡಿಟೇಲ್ ವರದಿ ಕೊಟ್ಟು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸುತ್ತಾರೆ. ಇದಾದ ಬಳಿಕ ಅಬ್ರಾಹಂ ಜು.26 ರಂದು ಅರ್ಜಿ ಕೊಡ್ತಾರೆ. 7 ದಿನಗಳ ಒಳಗಾಗಿ ಸಿದ್ದರಾಮಯ್ಯನವರು ಉತ್ತರ ನೀಡುವಂತೆ ನೊಟೀಸ್ ಸಹ ಕೊಡುತ್ತಾರೆ. ಇನ್ನೂ ಅಬ್ರಾಹಂ 150 ಪುಟಗಳ ದೂರು ಕೊಟ್ಟಿರುತ್ತಾರೆ. ಆದರೆ ಇಷ್ಟೊಂದು ಬೇಗ ನೊಟೀಸ್ ಕೊಡ್ತಾರೆ ಅಂದರೇ ಏನು ಅರ್ಥ, 7 ದಿನ ಆಗಿದೆ ನೊಟೀಸ್ ಕೊಟ್ಟು, ನಿಮ್ಮ ಮೇಲೆ ಏಕೆ ಪ್ರಾಸಿಕ್ಯೂಷನ್ ಗೆ ಕೊಡಬಾರದು ಎಂದು ನೊಟೀಸ್ (D K Shivakumar) ಕೊಟ್ಟಿದ್ದಾರೆ.

ಇನ್ನೂ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ವಿರುದ್ದ ಅಕ್ರಮದ ಆರೋಪವಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕೆಂದು ದೂರು ಬಂದಿದೆ, ವಿವರಣೆ ಕೊಡಿ ಅಂತಾ ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿ ವರದಿ ಪರಿಶೀಲನೆ ಮಾಡದೇ ಅವತ್ತೆ ನೊಟೀಸ್ ಹೇಗೆ ಕೊಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ ಡಿಕೆಶಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹಾಗೂ ಅಧಿಕಾರಿಗಳ ತಂಡ ತನಿಖೆ ಮಾಡುತ್ತಿದ್ದಾರೆ. ಇಷ್ಟೊಂದು ಆತುರವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಮ್ಮ ಮೇಲೆ ಕೇಸ್ ಹಾಕಬೇಕು ಎಂದು ಶೋಕಾಸ್ ನೊಟೀಸ್ ಕೊಡೋದು ಅಂದರೇ ಏನು, ರಾಜ್ಯಪಾಲರ ಶೋಕಾಸ್ ನೊಟೀಸ್ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಸಿಎಂಗೆ ನೀಡಿದ ಶೋಕಾಸ್ ನೊಟೀಸ್ ವಾಪಸ್ ಪಡೆಯಬೇಕು ಹಾಗೂ ಟಿ.ಜೆ.ಅಬ್ರಾಹಂ ದೂರನ್ನು ವಜಾಗೊಳಿಸಬೇಕು ಎಂಬ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು (D K Shivakumar) ತಿಳಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular