ಕಳೆದೆರಡು ದಿನಗಳ ಹಿಂದೆ ರಾಜಸ್ಥಾನದಿಂದ ಬೆಂಗಳೂರಿಗೆ (Bengaluru News) ನಾಯಿ ಮಾಂಸ ಸಾಗಾಟ ಮಾಡುವ ಆರೋಪ ಕೇಳಿಬಂದಿದ್ದು, ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳೀ ಸೇರಿದಂತೆ ಕೆಲವರು ದಾಳಿ ನಡೆಸಿ ಮಾಂಸವನ್ನು ತಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ (Puneeth Kerehalli) ರವರನ್ನು ಪೊಲೀಸರು ಬಂಧನ ಮಾಡಿದ್ದರು. ಇದೀಗ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಪುನೀತ್ ಕೆರೆಹಳ್ಳಿ ರವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರ್ ಆಯುಕ್ತರಿಗೆ ದೂರು ನೀಡಲಾಗಿದೆ.
ರಾಜಸ್ಥಾನದಿಂದ ಬೆಂಗಳೂರಿಗೆ (Bengaluru News) ನಾಯಿ ಮಾಂಸ ಸಾಗಾಟ ಆರೋಪದ ಮೆರೆಗೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ದ ಪ್ರಕರಣ ಸಹ ದಾಖಲಾಗಿದ್ದು, ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಒಕ್ಕೂಟದ ಮೋಹನ್ ಗೌಡ ಎಂಬುವವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ರಾಜಸ್ಥಾನದಿಂದ ಬೆಂಗಳೂರಿಗೆ ಟನ್ ಗಟ್ಟಲೇ ಅಕ್ರಮವಾಗಿ ಮಾಂಸ ಬಂದಿದ್ದು, ಇದನ್ನು ಪುನೀತ್ ಕೆರೆಹಳ್ಳಿ ಪ್ರಶ್ನೆ ಮಾಡಿದ್ದಕ್‌ಎಕ ಅವರ ಮೇಲೆ ಮೂರು ಎಫ್.ಐ.ಆರ್ ದಾಖಲಾಗಿದೆ. ಸಾಮಾಜಿಕ ಕರ್ತವ್ಯ ಮೆರೆದವರ ಮೇಲೆ ದೂರು ದಾಖಲಾಗಿದೆ. ದೂರುದಾರರಿಂದ ರಕ್ಷಣೆ ಇಲ್ಲದಂತಾಗಿದ್ದು, ಈ ಕುರಿತು ಸೂಕ್ತ ತನಿಖೆ ಮಾಡಬೇಕು ದೂರಿನ ಮೂಲಕ ಮನವಿ ಮಾಡಲಾಗಿದೆ.
ಜು.26 ಶುಕ್ರವಾರ ದಂದು ರಾಜಸ್ಥಾನದಿಂದ ಬೆಂಗಳೂರಿಗೆ ಅಕ್ರಮವಾಗಿ ನಾಯಿ ಮಾಂಸ ತರಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಬಳಿಕ ಶುಕ್ರವಾರ ರೈಲಿನ ಮೂಲಕ ಬಂದಂತಹ 90 ಬಾಕ್ಸ್ ಗಳ ಮಾಂಸವನ್ನು ತಡೆಯಲಾಗಿತ್ತು. ಇದು ಪುನೀತ್ ಕೆರೆಹಳ್ಳಿ ಉಸ್ತುವಾರಿಯಲ್ಲಿ ನಡೆದಿತ್ತು ಎನ್ನಲಾಗಿದೆ. ಈ ಸಮಯದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಮುಖಂಡ ಅಬ್ದುಲ್ ರಜಾಕ್ ನಡುವೆ ವಾಗ್ವಾದ ಸಹ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ರವರನ್ನು ಪೊಲೀಸರು ವಶಕ್ಕೆ ಪಡೆದು ಅವರ ವಿರುದ್ದ ಎಫ್.ಐ.ಆರ್ ಸಹ ದಾಖಲಾಗಿದೆ. ಶನಿವಾರ ಪೊಲೀಸರ ವಶದಲ್ಲಿದ್ದ ಪುನೀತ್ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.