HomeEntertainmentDrone Prathap: ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಕಾರ್ಯಕ್ಕೆ ಹರಿದುಬಂದ ಮೆಚ್ಚುಗೆಯ ಮಹಾಪೂರ…..!

Drone Prathap: ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಕಾರ್ಯಕ್ಕೆ ಹರಿದುಬಂದ ಮೆಚ್ಚುಗೆಯ ಮಹಾಪೂರ…..!

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Kannada Bigg Boss) ತುಂಬಾನೆ ಸದ್ದು ಮಾಡಿತ್ತು. ತುಂಬಾನೆ ಟಿ.ಆರ್‍.ಪಿ ಸಹ ಪಡೆದುಕೊಂಡಿತ್ತು ಎನ್ನಬಹುದಾಗಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಶೋ ನಲ್ಲಿ ಭಾಗಿಯಾಗಿ ಬಂದ ಬಳಿಕ ಸ್ಪರ್ಧಿಗಳು ತುಂಬಾನೆ ಫೇಮಸ್ ಸಹ ಆಗಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ (Drone Prathap) ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಡ್ರೋನ್ ಪ್ರತಾಪ್ (Drone Prathap) ಕೆಲವೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಮಾಡಿದ ಕಾರ್ಯಕ್ಕೆ ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ ಡ್ರೋನ್ ಪ್ರತಾಪ್.

Drone prathap helped poor old lady 0

ಕನ್ನಡದ ಬಿಗ್ ಬಾಸ್ ಸೀಸನ್ 10 ರ ಎಲ್ಲಾ ಸ್ಪರ್ಧಿಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ಅದರಂತೆ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap)  ಸಹ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ಶೋ ಮೂಲಕ ಅದರಲ್ಲಿ ಭಾಗಿಯಾದ ಸ್ಪರ್ಧಿಗಳ ಬದುಕಿಗೆ ಹೊಸ ಸ್ಪರ್ಶ ಹಾಗೂ ಭರವಸೆ ದೊರೆಯುತ್ತದೆ. ಅದಕ್ಕೆ ಒಳ್ಳೆಯ ಉದಾಹರಣೆ ಡ್ರೋನ್ ಪ್ರತಾಪ್ (Drone Prathap) ಎಂದೇ ಹೇಳಬಹುದು.  ಶೋ ಆರಂಭದಲ್ಲಿ ತುಂಬಾನೆ ನೆಗೆಟಿವಿಟಿ ಹೊಂದಿದ್ದ ಡ್ರೋನ್ ಪ್ರತಾಪ್, ತಮ್ಮ ವಿಭಿನ್ನವಾದ ವ್ಯಕ್ತಿತ್ವದ ಮೂಲಕ ಜನರ ಅಭಿಪ್ರಾಯಗಳನ್ನೆ ಬದಲಾಗುವಂತೆ ಮಾಡಿದ್ದಾರೆ. ತಮ್ಮ (Drone Prathap) ಮುಗ್ದ ನಗುವಿನಿಂದಲೇ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಪಡೆದುಕೊಂಡರು.

ವಿಡಿಯೋ ಇಲ್ಲಿದೆ ನೋಡಿ:https://www.instagram.com/p/C96bG7YvNLo/

ಇನ್ನೂ ಬಿಗ್ ಬಾಸ್ ಮೂಲಕ ಡ್ರೋನ್ ಪ್ರತಾಪ್ (Drone Prathap) ಸಂಪಾದನೆ ಮಾಡಿದ ಹಣದಿಂದ ಸಾಕಷ್ಟ ಜನರಿಗೆ ಸಹಾಯ ಮಾಡಿದ್ದಾರೆ. ಈ ಹಿಂದೆ ತಮ್ಮ (Drone Prathap) ಹುಟ್ಟುಹಬ್ಬದಂದು ಒಂದು ಹೊಸ ಕೆಲಸಕ್ಕೆ ಕೈ ಹಾಕಿದ್ದರು. ಅವರ ಹುಟ್ಟುಹಬ್ಬದಂದು ಯಾರಾದರೂ ಐದು ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಯೊಬ್ಬರಿಗೆ ಡ್ರೋನ್ ಪ್ರತಾಪ್ (Drone Prathap)  ಚಿಕಿತ್ಸೆ ಮಾಡಿಸಿದ್ದಾರೆ. ಜೊತೆಗೆ ಆ ಅಜ್ಜಿಗೆ ಮನೆಯೊಂದನ್ನು ಕಟ್ಟಿಸಿಕೊಡಲು ಸಹ ತೀರ್ಮಾನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, (Drone Prathap)  ನೆಟ್ಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿದುಬಿಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular