ಸರ್ಕಾರವೇನೋ ಮಕ್ಕಳಿಗೆ ಉಚಿತ ಶಿಕ್ಷಣ ಎಂದು ಘೋಷಣೆ ಮಾಡಿದೆ. ಆದರೆ ಮಕ್ಕಳು ಉಚಿತವಾಗಿ ವಿದ್ಯಾಭ್ಯಾಸ ಪಡೆದುಕೊಳ್ಳು ಸಾರಿಗೆ ಸಮಸ್ಯೆಯನ್ನು ತುಂಬಾನೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುಡಿಬಂಡೆ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳಲು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡೇ (Students Problem) ಓಡಾಡಬೇಕಿದೆ. ಒಂದೇ ಬಸ್ ನಲ್ಲಿ ಸುಮಾರು 120 ಮಂದಿ ವಿದ್ಯಾರ್ಥಿಗಳು ಪಯಣಿಸಬೇಕಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ತಾಲೂಕಿನ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಗೆ ಪ್ರತಿನಿತ್ಯ ಸುಮಾರು 120 ಮಂದಿ ವಿದ್ಯಾರ್ಥಿಗಳು ಸರ್ಕಾರಿ (Students Problem) ಬಸ್ ನಲ್ಲಿ ಸಂಚರಿಸಬೇಕಿದೆ. ಆದರೆ ಶಾಲಾ ಸಮಯಕ್ಕೇ ಕೇವಲ ಒಂದೇ ಬಸ್ ಈ ಮಾರ್ಗದಲ್ಲಿ ಸಂಚರಿಸುತ್ತದೆ. ಈ ಬಸ್ ನಲ್ಲಿಯೇ 120 ಮಂದಿ ವಿದ್ಯಾರ್ಥಿಗಳು ಪ್ರಯಾಣಿಸಬೇಕಿದೆ. ಅವರ ಜೊತೆಗೆ ಈ ಸಮಯದಲ್ಲಿ ಓಡಾಡುವಂತಹ ಸಾರ್ವಜನಿಕರೂ ಸಹ ಸಂಚರಿಸಬೇಕಿದೆ. 60 ಆಸನಗಳ ಸರ್ಕಾರಿ ಬಸ್ ನಲ್ಲಿ ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು ಜನರು ಪ್ರಯಾಣಿಸಬೇಕಿದೆ. ಇದರಿಂದಾಗಿ ತುಂಬಾನೆ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸಬೇಕಿದೆ. ಜೊತೆಗೆ ಅಪಘಾತವಾಗುವ ಭೀತಿ ಸಹ ತುಂಬಾನೆ ಇದೆ ಎಂದು ಹೇಳಲಾಗಿದೆ.
ಇನ್ನೂ ಶಕ್ತಿ ಯೋಜನೆಯಿಂದ ಈ ಸಮಸ್ಯೆ ಉದ್ಬವಿಸಿದೆ ಎಂದರೇ ಇದು ತಪ್ಪಾಗಬಹುದು. ಏಕೆಂದರೇ ಸುಮಾರು ವರ್ಷಗಳಿಂದ ಈ ಭಾಗದಲ್ಲಿ ವಿದ್ಯಾರ್ಥಿಗಳು (Students Problem) ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕ ಬಾರಿ ಈ ಸಂಬಂಧ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಸಹ ದೂರು ನೀಡಲಾಗಿದೆ. ಆದರೂ ಸಹ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ, ಏನಾದರೂ ದೊಡ್ಡ ಅಪಘಾತವಾದರೇ ಯಾರು ಹೊಣೆಯಾಗುತ್ತಾರೆ. ಅಥವಾ ಪ್ರಾಣಗಳು ಹೋಗುವವರೆಗೂ ಈ ಸಮಸ್ಯೆ ಬಗೆಹರಿಸುವುದಿಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ (Students Problem) ಆದರ್ಶ ಶಾಲೆಯ ವಿದ್ಯಾರ್ಥಿಗಳು ಬೀಚಗಾನಹಳ್ಳಿ ಕ್ರಾಸ್ ನಲ್ಲಿರುವ ಶಾಲೆಗೆ ಪ್ರತಿನಿತ್ಯ 120 ವಿದ್ಯಾರ್ಥಿಗಳು ಬಸ್ಸಿನಲ್ಲೇ ಸಂಚರಿಸುತ್ತಿದ್ದೇವೆ. ಈ ಹಿಂದೆ ಗುಡಿಬಂಡೆ ಬೀಚಗಾನಹಳ್ಳಿ ಕ್ರಾಸ್ ಮಾರ್ಗವಾಗಿ ಬೆಳಗ್ಗೆ 9:00 ಕ್ಕೆ ಮಾರ್ಗ ಸಂಖ್ಯೆ 4/5ರ ಬಸ್ಸು ಅಲ್ಲದೇ, 9:15ಕ್ಕೆ ಬಸ್ ಮಾರ್ಗ ಸಂಖ್ಯೆ 27ರ ಬಸ್ಸು ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಿರಿ. ಇದರಿಂದ ನಮಗೆ ಬಹಳ ಅನುಕೂಲವಾಗಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೆಳಗ್ಗೆ 9:00 ಕ್ಕೆ ಸಂಚರಿಸುತ್ತಿದ್ದ ಮಾರ್ಗ ಸಂಖ್ಯೆ 4/5ರ ಬಸ್ಸು ಸಂಚಾರ ರದ್ದುಗೊಳಿಸಿದ್ದು, ಕಳೆದ ಕೆಲವು ದಿನಗಳಿಂದ 9:15ಕ್ಕೆ ಗುಡಿಬಂಡೆಯಿಂದ ಹೊರಡುತ್ತಿದ್ದ ಮಾರ್ಗ ಸಂಖ್ಯೆ 27ರ ಬಸ್ಸು ಮೊದಲಿನಂತೆ ನಿಗದಿತ ಸಮಯಕ್ಕೆ ಸಂಚರಿಸುತ್ತಿಲ್ಲ. ಈ ಬಸ್ಸು ಗುಡಿಬಂಡೆಯಿಂದ 9.40 ಕ್ಕೆ ಗುಡಿಬಂಡೆಯಿಂದ ಹೊರಟು ಬೀಚಗಾನಹಳ್ಳಿ ಕ್ರಾಸ್ ಗೆ 10.20 ಕ್ಕೆ ತಲುಪತ್ತದೆ. ಇದರಿಂದ ಪ್ರತಿನಿತ್ಯ ನಾವು ತಡವಾಗಿ ಶಾಲೆಗೆ ಹೋಗಬೇಕಾಗುತ್ತಿದೆ.
ಇದರ ಜೊತೆಗೆ ನಾವು ಸುಮಾರು (Students Problem) 120 ಮಂದಿ ಒಂದೇ ಬಸ್ ನಲ್ಲಿ ಸಂಚಾರ ಮಾಡುವುದರಿಂದ ನಮಗೆ ಪ್ರಾಣಭೀತಿ ಸಹ ತುಂಬಾನೆ ಇದೆ. ಈ ಸಂಬಂಧ ನಾವು ಈಗಾಗಲೇ ಮನವಿ ಪತ್ರವನ್ನು ಸಹ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ನೀಡಿದ್ದೇವೆ. ಆದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ. ಬೀಚಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ-7 ರಲ್ಲೇ ನಾವೆಲ್ಲರೂ ಪ್ರತಿಭಟನೆ ಕೂರಬೇಕಾಗುತ್ತದೆ ಎಂದು ನೋವಿನಿಂದ ಆಕ್ರೋಷ ಹೊರಹಾಕಿದರು.