Friday, August 1, 2025
HomeStateAward Program: ಜು.28 ರಂದು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ…..!

Award Program: ಜು.28 ರಂದು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ…..!

ಬಾಗೇಪಲ್ಲಿ:  ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ  ಜು.28ರಂದು 18ನೇ ವರ್ಷದ ಪ್ರತಿಭಾ ಪುರಸ್ಕಾರ (Award Program) ಕಾರ್ಯಕ್ರಮವನ್ನು ಪಟ್ಟಣದ ಹೊರವಲಯದ ಸೂರ್ಯ ಕನ್ವೆಕ್ಷನ್ ಹಾಲಿನಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುವುದು ಈ ಕಾರ್ಯಕ್ರಮದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಎಂ.ಸಿ.ನಂಜುಂಡಪ್ಪ ಮನವಿ ಮಾಡಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ವಾಲ್ಮೀಕಿ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಯಿತು. ಕಳೆದ 17 ವರ್ಷಗಳಿಂದ ಎಸ್.ಎಸ್.ಎಲ್.ಸಿ,ಪಿಯು ಮತ್ತು ಪದವಿಯಲ್ಲಿ ಶೇ. 80ರಷ್ಟು ಅಂಕಗಳನ್ನು ಪಡೆದ  ಸಮುದಾಯದ ವಿದ್ಯಾರ್ಥಿಗಳನ್ನು ಗುರ್ತಿಸಿ ಪ್ರತಿಭಾ ಪುರಸ್ಕಾರ (Program) ಮಾಡುವ ಮೂಲಕ ಪ್ರೋತ್ಸಾಹಿಸುವಂತಹ ಕೆಲಸವನ್ನು ಸಂಘ ಮಾಡುತ್ತಾ ಬಂದಿದೆ ಎಂದರು. ಈ  ಕಾರ್ಯಕ್ರಮದ ಸಾನ್ನಿದ್ಯವನ್ನು ವಾಲ್ಮಿಕಿ ಸಮುದಾಯದ ಪ್ರಸನ್ನನಂದ  ವಾಲ್ಮೀಕಿ ಮಹಾ ಸ್ವಾಮೀಜಿಗಳು ವಹಿಸಲಿದ್ದಾರೆ.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮುಖ್ಯ ಅತಿಥಿಗಳಾಗಿ ಐಪಿಎಸ್ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸೇರಿದಂತೆ ಸಮುದಾಯದ ರಾಜಕಾರಣಿಗಳು ಹಾಗೂ ಗಣ್ಯರು ಭಾಗವಹಿಸಲಿರುವುದಾಗಿ ತಿಳಿಸಿದರು. ಸಂಘದ ವತಿಯಿಂದ ಇದೇ 28ರಂದು ನಡೆಯಲಿರುವ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯು ಮತ್ತು  ಪದವಿಯಲ್ಲಿ ಶೇ. 80 ರಷ್ಟು ಅಂಕಗಳನ್ನು ಪಡೆದಿರುವ ಸಮುದಾಯದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ  (Talent Award Program)  ಮಾಡಿ ಸನ್ಮಾನಿಸಲು ಸಂಘ ತೀರ್ಮಾನಿಸಿದ್ದು,  ಬಾಗೇಪಲ್ಲಿ ತಾಲೂಕಿಗೆ ಸೇರಿದ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯೊಂದಿಗೆ  ದೃಢಿಕೃತ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ದಿನಾಂಕ 21/7/2024ರ ಸಂಜೆ 5 ಘಂಟೆಯೊಳಗೆ  ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ.ಕೃಷ್ಣಮೂರ್ತಿ ರವರಿಗೆ ಸಲ್ಲಿಸುವಂತೆ ತಿಳಿಸಿದ ಅವರು ಹೆಚ್ಚಿನ ವಿವರಗಳಿಗೆ ಆದಿನಾರಾಯಣಪ್ಪ ಕೆ.ವಿ. ಮುಖ್ಯ ಶಿಕ್ಷಕರು ಸರ್ಕಾರಿ ಬಾಲಕಿಯರ ಫ್ರೌಢಶಾಲೆ-ಮೊ.ನಂ- 9880991369, ಶಿವಪ್ಪ ಎನ್. ಬಿಆರ್.ಸಿ- ಮೊ.ನಂ 9480551102, ಬಿ.ಜಿ.ವೆಂಕಟೇಶ್ ಶ್ರೀ ಚೈತ್ರ ಟೈಮ್ಸ್ –ಮೊ.ನಂ: 9880074649, ಶರಣಪ್ಪ, ತಾ.ಪಂ ಕಚೇರಿ- ಮೊ.ನಂ: 9443884356 ರವರನ್ನು ಸಂಪರ್ಕಿಸುವಂತೆ ತಿಳಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular