ಗುಡಿಬಂಡೆ: ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುವ ಕಾರಣದಿಂದ ಅಂಗಡಿ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನೇತೃತ್ವದಲ್ಲಿ ಧಾಳಿ ನಡೆಸಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿವೆ. ಜೊತೆಗೆ ಮನುಷ್ಯರ ಆರೋಗ್ಯ ಸಹ ಕ್ಷೀಣಿಸುತ್ತಿದೆ. ಇದನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಪ್ರತಿನಿತ್ಯ ಅರಿವು ಮೂಡಿಸುವ ಕೆಲಸ ಸಹ ಮಾಡಲಾಗುತ್ತಿದೆ. ಆದರೂ ಸಹ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಕಾರಣ ಧಾಳಿ ನಡೆಸಲಾಗಿದೆ. ಪರಿಸರ ಮಾಲೀನ್ಯ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಾರ್ವಜನಿಕರೂ ಸಹ ಸಹಕರಿಸಬೇಕೆಂದರು.
ಬಳಿಕ ಮಾತನಾಡಿದ ಪ.ಪಂ. ಆರೋಗ್ಯ ನಿರೀಕ್ಷಕ ಶಿವಣ್ಣ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಲಿದೆ. ಈ ಪ್ಲಾಸ್ಟಿಕ್ ಕೊಳಯದೇ ಇದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಜೊತೆಗೆ ಪ್ಲಾಸ್ಟಿಕ್ ವಿತರಕರು ಬಂದರೇ ನಮ್ಮ ಗಮನಕ್ಕೆ ತರಬೇಕೆಂದರು. ಈ ವೇಳೆ ಪಟ್ಟಣದ ವಿವಿಧ ಅಂಗಡಿ ಮಳಿಗೆಗಳ ಮೇಲೆ ಧಾಳಿ ನಡೆಸಿದ ಅಧಿಕಾರಿಗಳು 25 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, 1500 ದಂಡ ವಿಧಿಸಲಾಯಿತು. ಈ ಸಮಯದಲ್ಲಿ ಪ.ಪಂ ಸಿಬ್ಬಂದಿ ಹಾಜರಿದ್ದರು.