ನಮ್ಮ ಸುತ್ತಮುತ್ತಲು ಸಿಗುವಂತಹ ಹಣ್ಣುಗಳು, ಸಸಿಗಳಲ್ಲಿ ಅನೇಕ ಔಷಧ ಗುಣಗಳಿರುತ್ತವೆ. ಅದರಂತೆ ಎಲ್ಲರಿಗೂ ಸಿಗುವಂತಹ ದಾಳಿಂಬೆ ಹಣ್ಣಿನಲ್ಲಿ ಸಹ ಅಪಾರವಾದ ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ಕ್ಯಾಲರಿ, ಫೈಬರ್, ವಿಟಮಿನ್, ಖನಿಜಗಳು, ಆಂಟಿ ಆಕ್ಸಿಡೆಂಟ್ ಗಳು ಅತ್ಯಧಿಕವಾಗಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ ಸಿ, ಕೆ, ಫೋಲೆಟ್, ಪೊಟಾಷಿಯಂ, ಫ್ಲೆವನಾಯ್ಡ್ಸ್ ಸಹ ಹೇರಳವಾಗಿರುತ್ತದೆ. ಈ ಹಣ್ಣಿನಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.
ದಾಳಿಂಬೆ ಹಣ್ಣಿನ ಜ್ಯೂಸ್ ಕ್ರಮ ತಪ್ಪದೇ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ದಾಳಿಂಬೆ ಸಂಧಿವಾತ ಮತ್ತು ಕೆಲವು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇರಾನಿನ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ದಾಳಿಂವೆ ಹಣ್ಣಿನಲ್ಲಿ ಹೃದಯದ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಎರಡು ವಾರಗಳ ಕಾಲ 50 ಎಂ.ಎಲ್. ದಾಳಿಂಬೆ ರಸ ಕುಡಿಯುವುದರಿಂದ ರಕ್ತದ ಒತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ದಾಳಿಂಬೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕಣಗಳ ಹರಡುವಿಕೆಯನ್ನು ನಿರೋಧಿಸುತ್ತದೆ ಎನ್ನಲಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ, ಬಿಳಿ ರಕ್ತ ಕಣಗಳ ಉತ್ಪತ್ತಿಯನ್ನು ಸಹ ಹೆಚ್ಚಿಸುತ್ತದೆ ಎಂದು ಕೆಲವೊಂದು ಸಂಶೋಧನೆ ಗಳು ಹೇಳಿದೆ.
ದಾಳಿಂಬೆ ಹಣ್ಣಿನ ಕೆಲವು ಪ್ರಮುಖ ಔಷಧ ಗುಣಗಳು ಈ ಕೆಳಗಿನಂತಿವೆ:
- ಹೃದಯದ ಆರೋಗ್ಯ: ದಾಳಿಂಬೆ ಹಣ್ಣಿನ ರಸವು ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಇದು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.
- ಕೋಲೆಸ್ಟರಾಲ್ ನಿಯಂತ್ರಣ: ದಾಳಿಂಬೆ ಹಣ್ಣು ದೇಹದ ಕೆಟ್ಟ ಕೋಲೆಸ್ಟರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೋಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
- ಕ್ಯಾನ್ಸರ್ ವಿರೋಧಿ ಗುಣಗಳು: ದಾಳಿಂಬೆ ಹಣ್ಣು ಅನೇಕ ರೀತಿಯ ಕ್ಯಾನ್ಸರ್‌ಗಳ, ವಿಶೇಷವಾಗಿ ಸ್ತನ ಕ್ಯಾನ್ಸರ್ ಮತ್ತು ಮೆದುಳಿನ ಕ್ಯಾನ್ಸರ್‌ಗಳ ವಿರುದ್ಧ ರಕ್ಷಕ ಗುಣಗಳನ್ನು ಹೊಂದಿದೆ.
- ಮೂತ್ರಪಿಂಡದ ಆರೋಗ್ಯ: ದಾಳಿಂಬೆ ಹಣ್ಣು ಮತ್ತು ಅದರ ರಸವು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಸಹಕಾರಿ.
- ತ್ವಚೆಯ ಆರೋಗ್ಯ: ದಾಳಿಂಬೆ ಹಣ್ಣು ತ್ವಚೆಗೆ ಚುರುಕಾಗಿ, ಹೊಳಪು ಮತ್ತು ಆರೋಗ್ಯವನ್ನು ನೀಡುತ್ತದೆ.
- ಜೀರ್ಣಕ್ರಿಯೆ: ದಾಳಿಂಬೆ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.