ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ: ಮಹದೇವಯ್ಯ

ಬಾಗೇಪಲ್ಲಿ:  ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು.

ಪಟ್ಟಣದ ವಿಕಾಸ್  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಕರ್ನಾಟಕ ಸರ್ಕಾರಿ ನೌಕರ ಒಕ್ಕೂಟದ ತಾಲೂಕು ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  5 ವರ್ಷಗಳಿಗೆ ಒಮ್ಮೆ ರಚನೆಯಾಗುತ್ತಿದ್ದ  ವೇತನ ಆಯೋಗವು  ಸಕಾಲದಲ್ಲಿ ರಚನೆಯಾಗದಿದ್ದಾಗ, ಹಾರ್ನಳ್ಳಿ ರಾಮಸ್ವಾಮಿ ಆಓಗದ ಶಿಫಾರಸ್ಸಿನಂತೆ  ಸರ್ಕಾರದಲ್ಲಿ ಲಕ್ಷಾಂತಾರ ಹುದ್ದೆಗಳು ಕಡಿತವಾದಾಗ ರಾಷ್ಟ್ರಮಟ್ಟದ ಕರೆಗಳನ್ನು  ರಾಜ್ಯದಲ್ಲಿ ಅನುಷ್ಠಾನಗೊಳಿಸದೆ  ವಿಫಲವಾದಾಗ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಅನೇಕ ಸೌಲಭ್ಯಗಳಿಂದ ರಾಜ್ಯ ಸಕಾರಿ ನೌಕರರು ವಂಚಿತಾಗುತ್ತಿದ್ದರು ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರ  ಹಿತಕ್ಕಾಗಿ  ರಾಜ್ಯದ ಸರ್ಕಾರಿ ನೌಕರರ ಪ್ರತಿನಿಧಿಯಾಗಿ  ಉಗಮಗೊಂಡಿದ್ದೇ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಎಂದರು.

govt employyes news

ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಎಸ್. ಜಯಕುಮಾರ್ ಮಾತನಾಡಿ, ಪಿಂಚಣಿ ಸರ್ಕಾರಿ ನೌಕರರ ಹಕ್ಕು, ನೌಕರರು ಪಿಎಫ್‍ಆರ್‍ಡಿಎ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ  ನಿಶ್ಚಿತ ಪಿಂಚಿಣಿ ಒದಗಿಸಬೇಕೆಂದ ಅವರು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಬೇಕು, 26 ಲಕ್ಷ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ತುಂಬಬೇಕು ಹಾಗೂ 7ನೇ ವೇತನ ಜಾರಿಗೊಳಿಸಬೇಕು ಮತ್ತು 2006 ರ ನಂತರ  ನೇಮಕಗೊಂಡಿರುವ  ನೌಕರರಿಗೆ ನಿಶಚಿತ ಪಿಂಚಣಿ ಸಿಗಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮತ್ತೊಂದು ಅವಧಿಗೆ ತಾಲೂಕು ಅಧ್ಯಕ್ಷರನ್ನಾಗಿ  ಡಿ.ಟಿ.ಮುನಿಸ್ವಾಮಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಎ.ಎನ್ಸುರೇಶ್ ಬಾಬು,  ಸಂಘಟನಾ ಕಾರ್ಯದರ್ಶಿ ನಾಗಮಲ್ಲರೆಡ್ಡಿ, ಖಜಾಂಚಿ ಸುಬ್ರಮಣ್ಯಂ, ಜಂಟಿಕಾರ್ಯದರ್ಶಿಯಾಗಿ ಈಶ್ವರಪ್ಪ, ವಿನೋಧ್ ಬಾಬು,  ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯದರ್ಶಿ ಬಿ.ಎನ್ ಮುರಳೀ ರವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಶೋಭಲೋನ ನಾಗಣ್ಣ, ತಾಲೂಕು ಅಧ್ಯಕ್ಷ ಮುನಿಸ್ವಾಮಿ, ನಾಗಮಲ್ಲರೆಡ್ಡಿ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Scroll to Top