Loan Recovery Rules 2026 : ಇಎಂಐ ಕಟ್ಟಲು ತಡವಾದರೆ ಇನ್ಮುಂದೆ ಟೆನ್ಷನ್ ಬೇಡ: ಸಾಲ ವಸೂಲಾತಿಗೆ ಆರ್‌ಬಿಐ ತಂದಿದೆ ಹೊಸ ರೂಲ್ಸ್!

ಸಾಲದ ಕಂತು (EMI) ಕಟ್ಟಲು ಸ್ವಲ್ಪ ತಡವಾದರೆ ಸಾಕು, ರಿಕವರಿ ಏಜೆಂಟರ ಕರೆಗಳು, ಮನೆ ಬಾಗಿಲಿಗೆ ಬಂದು ಬೆದರಿಸುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ, ಇನ್ಮುಂದೆ ಈ ರೀತಿಯ (Loan Recovery Rules 2026) ಕಿರುಕುಳಗಳಿಗೆ ಬ್ರೇಕ್ ಬೀಳಲಿದೆ. ಗ್ರಾಹಕರ ಮಾನಸಿಕ ನೆಮ್ಮದಿ ಕಾಪಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.

Loan Recovery Rules 2026 RBI guidelines for borrowers

ಈ ಹೊಸ ನಿಯಮಗಳು 2027ಜನವರಿ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಸಾಲದಾತ ಸಂಸ್ಥೆಗಳು ಹಾಗೂ ವಸೂಲಾತಿ ಏಜೆಂಟರು ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಿವೆ.

Loan Recovery Rules 2026 – ಆರ್‌ಬಿಐನ ಹೊಸ ಸಾಲ ವಸೂಲಾತಿ ನಿಯಮಗಳು

ಬ್ಯಾಂಕ್‌ಗಳು ಅಥವಾ ಲೋನ್ ಆ್ಯಪ್‌ಗಳಿಂದ ಸಾಲ ಪಡೆದ ಗ್ರಾಹಕರಿಗೆ ಕಿರುಕುಳ ನೀಡುವುದನ್ನು ತಡೆಯಲು ಆರ್‌ಬಿಐ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಮುಖ ಅಂಶಗಳು ಇಲ್ಲಿವೆ:

ಕರೆ ಮಾಡಲು ನಿಗದಿತ ಸಮಯ: ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಮಾತ್ರ

ಇನ್ಮುಂದೆ ರಿಕವರಿ ಏಜೆಂಟರು ಮನಬಂದಂತೆ ಕರೆ ಮಾಡುವಂತಿಲ್ಲ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯ ಒಳಗೆ ಮಾತ್ರ ಗ್ರಾಹಕರನ್ನು ಸಂಪರ್ಕಿಸಬೇಕು.

  • ಗ್ರಾಹಕರು ಒಪ್ಪಿಗೆ ನೀಡಿದರೆ ಮಾತ್ರ ಬೇರೆ ಸಮಯದಲ್ಲಿ ಕರೆ ಮಾಡಬಹುದು.
  • ಮನೆಯಲ್ಲಿ ಸಾವು-ನೋವು, ಮದುವೆ ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ಇದ್ದಾಗ ಕರೆ ಮಾಡುವಂತಿಲ್ಲ.
  • ವಸೂಲಾತಿಗಾಗಿ ಮಾಡುವ ಪ್ರತಿಯೊಂದು ಕರೆಯನ್ನೂ ಕಡ್ಡಾಯವಾಗಿ ರೆಕಾರ್ಡ್ ಮಾಡಬೇಕು ಮತ್ತು ಈ ದಾಖಲೆಗಳನ್ನು ಕನಿಷ್ಠ 6 ತಿಂಗಳು ಸುರಕ್ಷಿತವಾಗಿಡಬೇಕು.

ಮನೆಗೆ ಬರುವ ಮುನ್ನ ಕಡ್ಡಾಯವಾಗಿ ಬೇಕು 1 ದಿನದ ನೋಟಿಸ್!

ಗ್ರಾಹಕರ ಮನೆ ಅಥವಾ ಕಚೇರಿಗೆ ಏಕಾಏಕಿ ನುಗ್ಗುವಂತಿಲ್ಲ. ಭೌತಿಕವಾಗಿ ಭೇಟಿಯಾಗುವ ಮುನ್ನ ಕನಿಷ್ಠ 1 ದಿನ ಮುಂಚಿತವಾಗಿ ನೋಟಿಸ್ ನೀಡಲೇಬೇಕು.

Loan Recovery Rules 2026 RBI guidelines for borrowers

  • ಗ್ರಾಹಕರು ಸೂಚಿಸಿದ ಸ್ಥಳದಲ್ಲೇ ಭೇಟಿಯಾಗಬೇಕು.
  • ಭೇಟಿಗೆ ಬರುವ ಏಜೆಂಟರ ಬಳಿ ಅಧಿಕೃತ ಗುರುತಿನ ಚೀಟಿ (ID Card) ಹಾಗೂ ಬ್ಯಾಂಕಿನಿಂದ ನೀಡಲಾದ ಅಧಿಕಾರ ಪತ್ರ (Authorisation Letter) ಇರುವುದು ಕಡ್ಡಾಯ.
  • ಈ ಪತ್ರದಲ್ಲಿ ಬ್ಯಾಂಕಿನ ದೂರು ಪರಿಹಾರ ಅಧಿಕಾರಿಯ (Grievance Officer) ಸಂಪರ್ಕ ಸಂಖ್ಯೆ ಇರಲೇಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡುವಂತಿಲ್ಲ

ಸಾಲ ತೀರಿಸಿಲ್ಲ ಎಂದು ಸಾರ್ವಜನಿಕವಾಗಿ ಅಪಮಾನಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದನ್ನು ಆರ್‌ಬಿಐ ಸಂಪೂರ್ಣವಾಗಿ ನಿಷೇಧಿಸಿದೆ. ನಿಂದನೀಯ ಭಾಷೆ ಬಳಕೆ, ಅನಾಮಧೇಯ ಕರೆಗಳು ಹಾಗೂ ಕುಟುಂಬಸ್ಥರಿಗೆ ಬೆದರಿಕೆ ಒಡ್ಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಏಜೆನ್ಸಿಗಳ ತಪ್ಪುಗಳಿಗೆ ಬ್ಯಾಂಕ್‌ಗಳೇ ಹೊಣೆ

ಹೊರಗುತ್ತಿಗೆ (Outsourcing) ಆಧಾರದ ಮೇಲೆ ವಸೂಲಾತಿ ಏಜೆನ್ಸಿಗಳನ್ನು ನೇಮಿಸಿದರೂ, ಅವರ ವರ್ತನೆಗೆ ನೇರವಾಗಿ ಸಾಲ ನೀಡಿದ ಬ್ಯಾಂಕ್ ಅಥವಾ ಸಂಸ್ಥೆಗಳೇ ಹೊಣೆಯಾಗುತ್ತವೆ. ಏಜೆಂಟರಿಗೆ ನೀಡುವ ಇನ್ಸೆಂಟಿವ್ (Incentives) ಅವರನ್ನು ಆಕ್ರಮಣಕಾರಿ ವಸೂಲಾತಿಗೆ ಪ್ರೇರೇಪಿಸುವಂತಿರಬಾರದು ಎಂದು ಆರ್‌ಬಿಐ ಎಚ್ಚರಿಸಿದೆ. Read this also : ಲೋನ್ (Loan) ಪಡೆಯುವವರಿಗೆ ಆರ್‌ಬಿಐ ಶಾಕ್! ಜಾರಿಗೆ ಬರಲಿದೆ ಕಠಿಣ ನಿಯಮ.. ಸಿಬಿಲ್ ಸ್ಕೋನ್ ಕಮ್ಮಿ ಇದ್ದರೆ ಕಷ್ಟ ಗ್ಯಾರಂಟಿ!

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಇಎಂಐ ಕಟ್ಟದಿದ್ದರೆ ಏನಾಗುತ್ತೆ? (Device Lock Rules)

ಇದೇ ಮೊದಲ ಬಾರಿಗೆ ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳ ಇಎಂಐ (EMI on Electronics) ವಸೂಲಾತಿಗೂ ಆರ್‌ಬಿಐ ಹೊಸ ಚೌಕಟ್ಟು ರೂಪಿಸಿದೆ. ಇಎಂಐ ಕಟ್ಟಿಲ್ಲ ಎಂದು ಇನ್ಮುಂದೆ ಏಕಾಏಕಿ ಡಿವೈಸ್ ಲಾಕ್ ಮಾಡುವಂತಿಲ್ಲ.

ಡಿವೈಸ್ ಲಾಕ್ ಮಾಡುವುದಕ್ಕೂ ಇದೆ ಷರತ್ತು
  • ವೈಯಕ್ತಿಕ ಸಾಲಕ್ಕೆ ಲಾಕ್ ಇಲ್ಲ: ಕೇವಲ ಆ ನಿರ್ದಿಷ್ಟ ಡಿವೈಸ್ ಖರೀದಿಸಲು ಸಾಲ ಪಡೆದಿದ್ದರೆ ಮಾತ್ರ ಲಾಕ್ ಮಾಡಬಹುದು. ಪರ್ಸನಲ್ ಲೋನ್ ಪಡೆದು ಮೊಬೈಲ್ ಖರೀದಿಸಿದ್ದರೆ, ಅದನ್ನು ಲಾಕ್ ಮಾಡುವ ಅಧಿಕಾರ ಬ್ಯಾಂಕ್‌ಗಳಿಗೆ ಇಲ್ಲ.
  • ಹಂತ ಹಂತದ ನಿರ್ಬಂಧ: ಇಎಂಐ ಬಾಕಿ ಉಳಿದ ತಕ್ಷಣ ಮೊಬೈಲ್ ಲಾಕ್ ಮಾಡುವಂತಿಲ್ಲ. ಕನಿಷ್ಠ 30 ದಿನಗಳ ಕಾಲ ಬಾಕಿ ಇದ್ದರೆ ಮಾತ್ರ ಕೆಲವು ಫೀಚರ್‌ಗಳನ್ನು ಸೀಮಿತಗೊಳಿಸಬಹುದು. ಸಂಪೂರ್ಣ ಡಿವೈಸ್ ಲಾಕ್ ಮಾಡಲು 60 ದಿನ ಕಾಯಲೇಬೇಕು.

ಲಾಕ್ ಆದರೂ ಈ ಸೇವೆಗಳು ಇರಲಿವೆ!

ಮೊಬೈಲ್ ಸಂಪೂರ್ಣ ಲಾಕ್ ಆದರೂ ಗ್ರಾಹಕರ ತುರ್ತು ಸೇವೆಗಳಿಗೆ ತೊಂದರೆಯಾಗಬಾರದು.

  • ಇನ್‌ಕಮಿಂಗ್ ಕರೆಗಳು (Incoming Calls)
  • ಎಸ್‌ಎಂಎಸ್ (SMS)
  • ತುರ್ತು ಕರೆಗಳು (Emergency Services) ಸಕ್ರಿಯವಾಗಿರಬೇಕು.
  • ಯಾವುದೇ ಕಾರಣಕ್ಕೂ ಗ್ರಾಹಕರ ಫೋನ್‌ನಲ್ಲಿರುವ ಫೋಟೋ, ಕಾಂಟ್ಯಾಕ್ಟ್, ಲೊಕೇಶನ್ ಅಥವಾ ಮೆಸೇಜ್‌ಗಳನ್ನು ಬ್ಯಾಂಕ್‌ಗಳು ಆಕ್ಸೆಸ್ ಮಾಡುವಂತಿಲ್ಲ (Data Privacy).

Loan Recovery Rules 2026 RBI guidelines for borrowers

ಅನ್‌ಲಾಕ್ ಮಾಡಲು ತಡವಾದರೆ ಬ್ಯಾಂಕ್‌ಗೇ ದಂಡ!

ಒಮ್ಮೆ ಗ್ರಾಹಕರು ಬಾಕಿ ಹಣ ಪಾವತಿಸಿದರೆ, ಕೇವಲ 1 ಗಂಟೆಯ ಒಳಗೆ ಡಿವೈಸ್ ಅನ್‌ಲಾಕ್ ಮಾಡಬೇಕು. ಒಂದು ವೇಳೆ ಬ್ಯಾಂಕ್ ವಿಫಲವಾದರೆ, ವಿಳಂಬವಾಗುವ ಪ್ರತಿ ಗಂಟೆಗೆ ಗ್ರಾಹಕರಿಗೆ ₹250 ರಂತೆ ನಷ್ಟಪರಿಹಾರ ಪಾವತಿಸಬೇಕಾಗುತ್ತದೆ! (ಇದು ಬಾಕಿ ಉಳಿದ ಸಾಲದ ಮೊತ್ತಕ್ಕೆ ಒಳಪಟ್ಟಿರುತ್ತದೆ). ಡಿವೈಸ್ ಲಾಕ್ ಮಾಡುವ ನಿಯಮಗಳನ್ನು ಸಾಲ ನೀಡುವಾಗಲೇ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವುದು ಕಡ್ಡಾಯವಾಗಿದೆ.

ಆರ್‌ಬಿಐ ನೂತನ ನಿಯಮಗಳ ಒಂದು ನೋಟ (Quick Overview)
ಪ್ರಮುಖ ವಿಷಯಗಳು ಹೊಸ ಮಾರ್ಗದರ್ಶಿ ನಿಯಮ
ಸಂಪರ್ಕ ಸಮಯ ಬೆಳಿಗ್ಗೆ 8:00 ರಿಂದ ಸಂಜೆ 7:00 ರವರೆಗೆ ಮಾತ್ರ
ನೇರ ಭೇಟಿ ನೋಟಿಸ್ ಕನಿಷ್ಠ 1 ದಿನ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯ
ಕಾಲ್ ರೆಕಾರ್ಡಿಂಗ್ ಎಲ್ಲಾ ಕರೆಗಳ ರೆಕಾರ್ಡಿಂಗ್ ಕನಿಷ್ಠ 6 ತಿಂಗಳು ಇಡಬೇಕು
ಡಿವೈಸ್ ಲಾಕಿಂಗ್ 60 ದಿನಗಳ ಬಾಕಿ ನಂತರವಷ್ಟೇ ಸಂಪೂರ್ಣ ಲಾಕ್ ಸಾಧ್ಯ
ವಿಳಂಬಕ್ಕೆ ದಂಡ ಪಾವತಿಯಾದ 1 ಗಂಟೆಯಲ್ಲಿ ಲಾಕ್ ತೆರೆಯದಿದ್ದರೆ ಗಂಟೆಗೆ ₹250 ಪರಿಹಾರ

Leave a Comment

Your email address will not be published. Required fields are marked *

Scroll to Top