ನೀವು ಪ್ರತಿ ತಿಂಗಳು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯ ₹2,000 ಹಣ ಮತ್ತು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೀತಿದ್ದೀರಾ? ಹಾಗಾದ್ರೆ ನಿಮಗೊಂದು ಅತ್ಯಂತ ಪ್ರಮುಖವಾದ ಸುದ್ದಿಯಿದೆ. ಸರ್ಕಾರಿ ಗ್ಯಾರಂಟಿಗಳ ದುರ್ಬಳಕೆ ಮತ್ತು ಸೋರಿಕೆಯನ್ನು ತಡೆಯಲು ರಾಜ್ಯ ಸರ್ಕಾರ ಈಗ ದೊಡ್ಡ ಹೆಜ್ಜೆ ಇಟ್ಟಿದೆ. ಹೌದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಹೊಸದಾಗಿ ಅರ್ಜಿ ಪಡೆಯುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜಂಟಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾದ್ರೆ, ಹಾಲಿ ಫಲಾನುಭವಿಗಳ ಕಥೆ ಏನು? ಯೋಜನೆಗಳು ನಿಂತು ಹೋಗುತ್ತವಾ? ನಿಮ್ಮ ಎಲ್ಲ ಗೊಂದಲಗಳಿಗೆ ಇಲ್ಲಿದೆ ನೇರ ಉತ್ತರ.
Gruhalakshmi Scheme – ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಏಕೆ?
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಪ್ರಮಾಣದ ದುರ್ಬಳಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
- ಅನರ್ಹರ ಖಾತೆಗೆ ಹಣ: ಯೋಜನೆಯಡಿ ನೂರಾರು ಕೋಟಿ ರೂಪಾಯಿ ಹಣ ಅರ್ಹರಲ್ಲದವರ ಕೈ ಸೇರುತ್ತಿದೆ.
- ಮೃತಪಟ್ಟವರ ಹೆಸರಲ್ಲಿ ವಂಚನೆ: ಕೆಲವು ಫಲಾನುಭವಿಗಳು ನಿಧನರಾಗಿದ್ದರೂ, ಅವರ ಹೆಸರಿನಲ್ಲಿ ಬೇರೆಯವರು 100 ಕೋಟಿ ರೂ.ಗೂ ಹೆಚ್ಚು ಹಣ ಪಡೆದುಕೊಂಡಿರುವುದು ಪತ್ತೆಯಾಗಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ಪಷ್ಟನೆ: “ನಾವು ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಾರನ್ನೂ ಯೋಜನೆಯಿಂದ ಕೈಬಿಡುವ ಉದ್ದೇಶ ಸರ್ಕಾರಕ್ಕಿಲ್ಲ. (Gruhalakshmi Scheme) ಆದರೆ, ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಹಣ ತಲುಪಬೇಕು. ಅದಕ್ಕಾಗಿಯೇ ಈ ಪರಿಷ್ಕರಣೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ.”
ಗೃಹಜ್ಯೋತಿಗೂ ಹೊಸ ಅರ್ಜಿ ಕಡ್ಡಾಯ: ಮನೆ ಕೆಳಗಿನ ಅಂಗಡಿಗೂ ಉಚಿತ ಕರೆಂಟ್?!
ಉಚಿತ ವಿದ್ಯುತ್ ಕೊಡುವ ಗೃಹಜ್ಯೋತಿ ಯೋಜನೆ (1.64 ಕೋಟಿ ಫಲಾನುಭವಿಗಳು)ಯಲ್ಲೂ ಸಖತ್ ದುರ್ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಸರ್ಕಾರ ಕೆಲವು ಪ್ರಮುಖ ಲೋಪದೋಷಗಳನ್ನು ಪತ್ತೆ ಹಚ್ಚಿದೆ:
- ಒಬ್ಬರ ಹೆಸರಲ್ಲೇ 5-6 ಮೀಟರ್: ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ಮೀಟರ್ಗಳಿದ್ದು, ಎಲ್ಲದಕ್ಕೂ ಜೀರೋ ಬಿಲ್ ಪಡೆಯಲಾಗುತ್ತಿದೆ.
- ವಾಸ್ತವ್ಯದ ಪರಿಶೀಲನೆ: ಆ ಮನೆಗಳಲ್ಲಿ ಅವರೇ (Gruhalakshmi Scheme) ವಾಸವಿದ್ದಾರಾ ಅಥವಾ ಬೇರೆ ರಾಜ್ಯದವರು ಇದರ ಲಾಭ ಪಡೆಯುತ್ತಿದ್ದಾರಾ ಎಂಬ ಬಗ್ಗೆ ತನಿಖೆಯಾಗಬೇಕಿದೆ.
- ವಾಣಿಜ್ಯ ದುರ್ಬಳಕೆ: ಕೇವಲ ಗೃಹಬಳಕೆಗೆ ಮಾತ್ರ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಕೆಲವರು ತಮ್ಮ ಮನೆ ಕೆಳಗಿರುವ ಅಂಗಡಿಗಳಿಗೂ ಇದೇ ಉಚಿತ ವಿದ್ಯುತ್ ಸಂಪರ್ಕ ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಪ್ರಕ್ರಿಯೆ:
ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಗೊಂದಲ ನಿಮಗಿದ್ದರೆ ಚಿಂತೆ ಬೇಡ. ನಿಮಗಾಗಿ ಸರ್ಕಾರವೇ ಸರಳ ಹಾದಿ ಹುಡುಕಿದೆ.
- ಮೀಟರ್ ರೀಡರ್ಗಳ ಮೂಲಕ ಅರ್ಜಿ: ನಿಮ್ಮ ಮನೆಗೆ ಬರುವ ಮೀಟರ್ ರೀಡರ್ಗಳ ಮೂಲಕವೇ ಕೆಲವೇ ದಿನಗಳಲ್ಲಿ ಹೊಸ ಅರ್ಜಿಗಳನ್ನು ವಿತರಿಸಲಾಗುತ್ತದೆ.
- ಅಗತ್ಯ ದಾಖಲೆಗಳು: ಫಲಾನುಭವಿಗಳು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಫೋಟೋವನ್ನೂ ನೀಡಬೇಕಾಗುತ್ತದೆ.
- ಸ್ಮಾರ್ಟ್ ಗುರುತಿನ ಚೀಟಿ: ಹೊಸ ಅರ್ಜಿ ಸಲ್ಲಿಕೆಯಾದ ಬಳಿಕ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ (ID Card) ನೀಡಲಾಗುತ್ತದೆ. Read this also : ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್: 4.30 ಲಕ್ಷ ಫಲಾನುಭವಿಗಳು ಔಟ್! ಲಿಸ್ಟ್ನಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
ವಿದ್ಯುತ್ ದರ ಹೆಚ್ಚಳ: ಸರ್ಕಾರದ ಮೇಲಿನ ಹೊರೆ ಎಷ್ಟು?
ಪ್ರಸ್ತುತ ಮಾರುಕಟ್ಟೆಯಲ್ಲಿ ವಿದ್ಯುತ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಪ್ರತಿ ಯೂನಿಟ್ಗೆ 12 ರಿಂದ 13 ರೂ. ಆಗುತ್ತಿದೆ. ರಾಜ್ಯ ಸರ್ಕಾರವೇ ಪ್ರತಿ ಯೂನಿಟ್ಗೆ 7 ರಿಂದ 8 ರೂ. ನೀಡಿ ವಿದ್ಯುತ್ ಖರೀದಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನರ್ಹರು ಉಚಿತ ವಿದ್ಯುತ್ ಪಡೆದರೆ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತದೆ. ಹೀಗಾಗಿ, ಇನ್ಮುಂದೆ ಈ ಇಡೀ ಪ್ರಕ್ರಿಯೆಯನ್ನು ಗ್ಯಾರಂಟಿ ಸಮಿತಿ ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ.
ನೀವು ನಿಜವಾದ ಮತ್ತು ಅರ್ಹ ಫಲಾನುಭವಿಗಳಾಗಿದ್ದರೆ ಭಯ ಪಡುವ ಅಗತ್ಯವೇ ಇಲ್ಲ.(Gruhalakshmi Scheme) ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿರುವ ಮಾರ್ಗಸೂಚಿಗಳ ಅನ್ವಯ, ನಿಮ್ಮ ದಾಖಲೆ ಹಾಗೂ ಫೋಟೋ ನೀಡಿ ಹೊಸ ಅರ್ಜಿಯನ್ನು ಸಲ್ಲಿಸಿ, ನಿಮ್ಮ ಗ್ಯಾರಂಟಿ ಲಾಭವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿಕೊಳ್ಳಬಹುದು!

