Zodiac Signs : ಶನಿ ನಕ್ಷತ್ರ ಬದಲಾವಣೆ 2026: ರೇವತಿ ನಕ್ಷತ್ರಕ್ಕೆ ಶನಿ ಎಂಟ್ರಿ; ನಿಮ್ಮ ರಾಶಿಗೆ ಲಾಭವೋ, ನಷ್ಟವೋ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಯಾಕಂದ್ರೆ, ನಮ್ಮ ಕರ್ಮಗಳಿಗೆ ತಕ್ಕಂತೆ ಫಲ ಕೊಡುವ ನ್ಯಾಯದೇವತೆ ಆತ. ಶನಿ ಸ್ಥಾನ ಬದಲಾಯಿಸಿದರೆ ಸಾಕು, (Zodiac Signs) ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳು ಶುರುವಾಗುತ್ತವೆ. ಸದ್ಯ ಮೀನ ರಾಶಿಯಲ್ಲಿರುವ ಶನಿಯು ಪ್ರಮುಖ ನಕ್ಷತ್ರ ಬದಲಾವಣೆ ಮಾಡಿದ್ದಾನೆ.

Zodiac signs horoscope predictions after Saturn transit into Revati Nakshatra in 2026

ಹೌದು, ಶನಿ ಮಹಾತ್ಮ ಈಗಾಗಲೇ ರೇವತಿ ನಕ್ಷತ್ರಕ್ಕೆ ಪಾದಾರ್ಪಣೆ ಮಾಡಿದ್ದಾನೆ. ರೇವತಿ ನಕ್ಷತ್ರದ ಅಧಿಪತಿ ಬುಧ ಗ್ರಹ. ಬುಧ ಎಂದರೆ ಬುದ್ಧಿ, ಬಿಸಿನೆಸ್ ಹಾಗೂ ಒಳ್ಳೆಯ ನಿರ್ಧಾರಗಳಿಗೆ ಕಾರಕ. ಹಾಗಾಗಿ ಶನಿ ಮತ್ತು ಬುಧನ ಈ ಕಾಂಬಿನೇಷನ್ ಯಾರಿಗೆ ಅದೃಷ್ಟ ತರಲಿದೆ? ಯಾರಿಗೆ ಕೊಂಚ ಕಷ್ಟ ತಂದಿಡಲಿದೆ? ತಿಳಿಯೋಣ.

Zodiac Signs – ಶನಿ ಸಂಚಾರದ ಇಂಪಾರ್ಟೆಂಟ್ ಡೇಟ್ಸ್ (2026 – 2027)

ಮುಂದಿನ ದಿನಗಳಲ್ಲಿ ಶನಿಯ ಚಲನೆ ಹೀಗಿರಲಿದೆ:

  • 2026 ಜುಲೈ 27: ಶನಿಯ ವಕ್ರಚಲನೆ (Retrograde) ಆರಂಭ.
  • 2026 ಅಕ್ಟೋಬರ್ 9: ಉತ್ತರಾಭಾದ್ರ ನಕ್ಷತ್ರಕ್ಕೆ ಮರಳುವ ಶನಿ.
  • 2027 ಫೆಬ್ರವರಿ 8: ಮತ್ತೆ ರೇವತಿ ನಕ್ಷತ್ರಕ್ಕೆ ಎಂಟ್ರಿ.
  • 2027 ಜೂನ್ 3: ಮೀನ ರಾಶಿಯಿಂದ ಮೇಷ ರಾಶಿಗೆ ಶನಿ ಶಿಫ್ಟ್.

ಶನಿ ಗೋಚಾರ ಫಲ: 12 ರಾಶಿಗಳ ಮೇಲಾಗುವ ಪ್ರಭಾವ ಇಲ್ಲಿದೆ:

ಮೇಷ ರಾಶಿ: ಕೊಂಚ ಸಮಾಧಾನದಿಂದಿರಿ

ನಿಮ್ಮ ರಾಶಿಯ 12ನೇ ಮನೆಯಲ್ಲಿ ಶನಿ ಇರುವುದರಿಂದ ಕೆಲಸಗಳು ಅಂದುಕೊಂಡಷ್ಟು ಬೇಗ ಮುಗಿಯಲ್ಲ. ಖರ್ಚುಗಳು ಕೈಮೀರಬಹುದು, ಹಾಗಾಗಿ ಬಜೆಟ್ ಕಡೆ ಗಮನ ಇರಲಿ. ಸಾಡೇ ಸಾತಿಯ (Zodiac Signs)  ಮೊದಲ ಹಂತ ಇರೋದರಿಂದ ಮಿಶ್ರ ಫಲ ಸಿಗಲಿದೆ.

ವೃಷಭ ರಾಶಿ: ಅದೃಷ್ಟದ ಬಾಗಿಲು ಓಪನ್!

ನಿಮಗೆ ಈ ಸಮಯ ಸೂಪರ್ ಆಗಿದೆ. ಕೈ ಹಾಕಿದ ಕೆಲಸಗಳಲ್ಲೆಲ್ಲಾ ಸಕ್ಸಸ್ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ತುಂಬಾ ಸ್ಟ್ರಾಂಗ್ ಆಗಲಿದೆ. Read this also : ಮಿಥುನ ರಾಶಿಯಲ್ಲಿ ಗುರು-ಶುಕ್ರರ ಅಪರೂಪದ ಸಂಯೋಗ: ಜೂನ್ 2ರವರೆಗೆ ಈ 6 ರಾಶಿಯವರಿಗೆ ಒಲಿಯಲಿದ್ದಾಳೆ ಅದೃಷ್ಟ ದೇವತೆ!

ಮಿಥುನ ರಾಶಿ: ಕೆರಿಯರ್‌ನಲ್ಲಿ ಬಂಪರ್ ಆಫರ್

ಉದ್ಯೋಗಿಗಳಿಗೆ ಪ್ರಮೋಷನ್ ಸಿಗುವ ಲಕ್ಷಣಗಳಿವೆ. ಆಫೀಸ್‌ನಲ್ಲಿ ಬಾಸ್ ಕಡೆಯಿಂದ ಗುಡ್ ಅಪ್ರಿಸಿಯೇಷನ್ ಸಿಗಲಿದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಕಟಕ ರಾಶಿ: ನೆಮ್ಮದಿಯ ದಿನಗಳು

ಕೋರ್ಟ್ ಕಚೇರಿ ಅಥವಾ ಆಸ್ತಿ ವಿಚಾರದ ಕಿರಿಕಿರಿಗಳು ಕೊನೆಗೊಳ್ಳಲಿವೆ. ಹೈಯರ್ ಎಜುಕೇಶನ್ ಅಥವಾ ವಿದೇಶಕ್ಕೆ ಹೋಗಬೇಕೆಂಬ ಕನಸು ನನಸಾಗುವ ಟೈಮ್ ಇದು. ಸಮಾಜದಲ್ಲಿ ನಿಮ್ಮ (Zodiac Signs) ಸ್ಟೇಟಸ್ ಹೆಚ್ಚಾಗಲಿದೆ.

ಸಿಂಹ ರಾಶಿ: ಅಷ್ಟಮ ಶನಿಯ ಟೆನ್ಷನ್ ಕ್ಲೋಸ್

ನಿಮ್ಮ ಮೇಲಿದ್ದ ಅಷ್ಟಮ ಶನಿಯ ನೆಗೆಟಿವ್ ಎಫೆಕ್ಟ್ ಈಗ ಕಮ್ಮಿಯಾಗುತ್ತಾ ಬರುತ್ತದೆ. ಗುರುವಿನ ಕೃಪೆ ಇರುವುದರಿಂದ ಬಿಸಿನೆಸ್ ಮತ್ತು ಉದ್ಯೋಗದಲ್ಲಿ ಲಾಭ ಕಾಣಬಹುದು. ದೇವಸ್ಥಾನಗಳ ಭೇಟಿಗೆ ಮನಸ್ಸು ಮಾಡ್ತೀರಾ.

ಕನ್ಯಾ ರಾಶಿ: ಮದುವೆ ಯೋಗ ಕೂಡಿಬರಲಿದೆ

ನಿಮ್ಮ ರಾಶಿಯ 7ನೇ ಮನೆಯಲ್ಲಿ ಶನಿ ಇರುವುದರಿಂದ ಕಂಕಣ ಭಾಗ್ಯ ಕೂಡಿಬರಲಿದೆ. ಹೊಸ ಫ್ರೆಂಡ್ಸ್ ಸಿಗುತ್ತಾರೆ. ಆದರೆ ನೆನಪಿಡಿ, ಶೇರ್ ಮಾರ್ಕೆಟ್ ಅಥವಾ ದೊಡ್ಡ ಬಂಡವಾಳ (Zodiac Signs)  ಹೂಡುವಾಗ ಹಿರಿಯರ ಸಲಹೆ ಪಡೆದುಕೊಳ್ಳಿ.

ತುಲಾ ರಾಶಿ: ಸಾಲದಿಂದ ಮುಕ್ತಿ!

ನಿಮ್ಮ ಹಳೆಯ ಸಾಲಗಳು ತೀರುವ ಲಕ್ಷಣಗಳಿವೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಶತ್ರುಗಳ ಕಾಟ ಇರಲ್ಲ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಒಳ್ಳೆಯ ಲಾಭ ಮಾಡಬಹುದು.

ವೃಶ್ಚಿಕ ರಾಶಿ: ಗುಡ್ ನ್ಯೂಸ್ ಗ್ಯಾರಂಟಿ

ಪಂಚಮ ಶನಿ ಇದ್ದರೂ ನಿಮಗೆ ದೊಡ್ಡ ತೊಂದರೆ ಇರಲ್ಲ. ಮಕ್ಕಳ ಕಡೆಯಿಂದ ನಿಮಗೆ ಹೆಮ್ಮೆ ತರುವಂತಹ ಗುಡ್ ನ್ಯೂಸ್ ಸಿಗಲಿದೆ. ಫ್ಯಾಮಿಲಿಯಲ್ಲಿ ಖುಷಿಯ ವಾತಾವರಣ ಇರಲಿದ್ದು, ಹೆಲ್ತ್ ಕೂಡ ಸುಧಾರಿಸಲಿದೆ.

ಧನು ರಾಶಿ: ಹೊಸ ವಾಹನ, ಮನೆ ಖರೀದಿ ಯೋಗ

ನಿಮಗೆ ಗೃಹ ಯೋಗ ಆರಂಭವಾಗಲಿದೆ. ಸ್ವಂತ ಮನೆ ಕಟ್ಟುವ ಅಥವಾ ಹೊಸ ಗಾಡಿ ಖರೀದಿಸುವ ಪ್ಲಾನ್ ಸಕ್ಸಸ್ ಆಗುತ್ತೆ. ಸ್ಟೂಡೆಂಟ್ಸ್‌ಗೆ ಓದಿನಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ಹಿರಿಯರ ಸಪೋರ್ಟ್ ನಿಮ್ಮ ಜೊತೆಗಿರುತ್ತೆ.

ಮಕರ ರಾಶಿ: ಕಾನ್ಫಿಡೆನ್ಸ್ ಹೆಚ್ಚಾಗಲಿದೆ

ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. (Zodiac Signs)  ಮುನಿಸಿಕೊಂಡಿದ್ದ ಬಂಧು-ಮಿತ್ರರು ಮತ್ತೆ ಹತ್ತಿರವಾಗಲಿದ್ದಾರೆ. ಅವಿವಾಹಿತರಿಗೆ ಮದುವೆ ಫಿಕ್ಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಸಮಾಜದಲ್ಲಿ ಗೌರವ ಸಿಗಲಿದೆ.

Zodiac signs horoscope predictions after Saturn transit into Revati Nakshatra in 2026

ಕುಂಭ ರಾಶಿ: ವಿದೇಶ ಪ್ರಯಾಣದ ಯೋಗ

ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಲೈನ್‌ ನಲ್ಲಿರುವವರಿಗೆ ಇದು ಸುವರ್ಣ ಅವಕಾಶ. ವಿದೇಶಕ್ಕೆ ಹೋಗುವ ಚಾನ್ಸ್ ಸಿಗಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದ್ದು, ಲೈಫ್‌ಸ್ಟೈಲ್‌ನಲ್ಲಿ ಪಾಸಿಟಿವ್ ಬದಲಾವಣೆಗಳನ್ನು ಕಾಣುತ್ತೀರಿ.

ಮೀನ ರಾಶಿ: ಜನ್ಮ ಶನಿಯಿದ್ದರೂ ಟೆನ್ಷನ್ ಇಲ್ಲ

ನಿಮ್ಮ ರಾಶಿಯಲ್ಲೇ ಶನಿ ಇದ್ದರೂ (ಜನ್ಮ ಶನಿ), ಬುಧ ಮತ್ತು ಗುರುವಿನ ಪಾಸಿಟಿವ್ ಎಫೆಕ್ಟ್ ಇರುವುದರಿಂದ ನೆಮ್ಮದಿ ಕೆಡಲ್ಲ. ರೈತರಿಗೆ ಮತ್ತು ವ್ಯಾಪಾರಿಗಳಿಗೆ ಒಳ್ಳೆಯ ಆದಾಯ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸುಧಾರಿಸಲಿದೆ.

ಗಮನಿಸಿ : ಈ ಲೇಖನದಲ್ಲಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಇದು ಸಂಪೂರ್ಣ ವೈಜ್ಞಾನಿಕ ಎಂದು ನಾವು ಪ್ರತಿಪಾದಿಸುವುದಿಲ್ಲ. ನಿಮ್ಮ ವೈಯಕ್ತಿಕ ಜಾತಕಕ್ಕೆ ತಕ್ಕಂತೆ ಫಲಿತಾಂಶಗಳು ಬದಲಾಗುವುದರಿಂದ, ಪರಿಣಿತ ಜ್ಯೋತಿಷಿಗಳನ್ನು ಸಂಪರ್ಕಿಸುವುದು ಉತ್ತಮ.

Leave a Comment

Your email address will not be published. Required fields are marked *

Scroll to Top