HomeNationalTelangana Crime : ಪ್ರಿಯಕರನ ವ್ಯಾಮೋಹ, 50 ಲಕ್ಷ ವಿಮೆಯಾಸೆ: ಪಕ್ಕಾ ಸ್ಕೆಚ್ ಹಾಕಿ ಪತಿಯನ್ನೇ...

Telangana Crime : ಪ್ರಿಯಕರನ ವ್ಯಾಮೋಹ, 50 ಲಕ್ಷ ವಿಮೆಯಾಸೆ: ಪಕ್ಕಾ ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಪತ್ನಿ!

ಹಣ ಮತ್ತು ಅಕ್ರಮ ಸಂಬಂಧಕ್ಕಾಗಿ ಮನುಷ್ಯ ಎಷ್ಟರ ಮಟ್ಟಿಗೆ ಇಳಿಯಬಹುದು ಎಂಬುದಕ್ಕೆ ಈ ಘಟನೆ ಒಂದು ತಾಜಾ ಉದಾಹರಣೆ. ಪ್ರಿಯಕರನ ಜೊತೆಗಿನ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ತನ್ನ ಪತಿಯ (Telangana Crime) ಹೆಸರಿನಲ್ಲಿ ಬರೋಬ್ಬರಿ 50 ಲಕ್ಷ ರೂ. ಜೀವ ವಿಮೆ (Life Insurance) ಮಾಡಿಸಿ, ಆತನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ರಸ್ತೆ ಅಪಘಾತ ಎಂದು ಬಿಂಬಿಸಲು ಹೋಗಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಹಾಜಿಪುರ ಮಂಡಲದ ಗುಡಿಪೇಟೆಯಲ್ಲಿ ನಡೆದಿರುವ ಈ ರೋಚಕ ಕ್ರೈಂ ಸ್ಟೋರಿಯ ಸಂಪೂರ್ಣ ವಿವರ ಇಲ್ಲಿದೆ.

Telangana Crime case where woman allegedly murdered husband after taking ₹50 lakh life insurance policy

Telangana Crime – ಅಸಲಿಗೆ ನಡೆದಿದ್ದೇನು?

ಮಂಚೇರಿಯಲ್ ಜಿಲ್ಲೆ ಹಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಲ್ಲ ಬಳಿ ಮೇ 22ರಂದು ಗುಡಿಪೇಟೆ ನಿವಾಸಿ ಸಾಯಿನಿ ಕುಮಾರ್ (45) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಮಾರ್, ಕೆಲಸದ ನಿಮಿತ್ತ ಬೈಕ್‌ನಲ್ಲಿ ಮಂಚೇರಿಯಲ್‌ಗೆ ಹೋಗುವಾಗ ಮುಲ್ಕಲ್ಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಇದನ್ನು ಗಮನಿಸಿದ ಸ್ಥಳೀಯರು 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಕರೀಂನಗರಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದರು. ವಾಹನ ಡಿಕ್ಕಿ ಹೊಡೆದ ಯಾವುದೇ ಕುರುಹುಗಳಿಲ್ಲದ ಕಾರಣ ಮತ್ತು ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದಿದ್ದನ್ನು ಗಮನಿಸಿದ ತಾಯಿ ಸಾಯಿನಿ ಲಕ್ಷ್ಮಿ ಅವರು, ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ!

ಪೊಲೀಸರು ತಮ್ಮ ತನಿಖೆ ಆರಂಭಿಸಿದಾಗ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಮೃತ ಕುಮಾರ್ ಅವರ ಪತ್ನಿ ಸಾಯಿನಿ ಭಾರತಿಯೇ ಈ ಕೊಲೆಯ ರೂವಾರಿ ಎಂದು ತಿಳಿದುಬಂದಿದೆ. 2002ರಲ್ಲಿ ಕುಮಾರ್ (Telangana Crime) ಮತ್ತು ಭಾರತಿ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಹತ್ತು ವರ್ಷಗಳ ಕಾಲ ಇವರ ಸಂಸಾರ ಸುಖವಾಗಿಯೇ ಸಾಗಿತ್ತು. ಆದರೆ, 2012ರಲ್ಲಿ ಲಗಿಶೆಟ್ಟಿ ಸುರೇಂದರ್ ಎಂಬಾತನ ಜೊತೆ ಭಾರತಿಯ ಪರಿಚಯವಾಗಿ, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಕುಮಾರ್‌ಗೆ ತಿಳಿದು ಆತ ತೀವ್ರ ಮಾನಸಿಕ ವೇದನೆಗೆ ಒಳಗಾಗಿ ಮದ್ಯವ್ಯಸನಿಯಾಗಿದ್ದ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.

50 ಲಕ್ಷ ವಿಮೆ ಮತ್ತು 10 ಲಕ್ಷದ ‘ಸುಪಾರಿ’ ಡೀಲ್

ಇದೇ ವೇಳೆ ಕೃಷಿ ಕೆಲಸಕ್ಕಾಗಿ ಕುಮಾರ್, ರಾಮ್ ಮಲ್ಲೇಶ್ ಎಂಬಾತನ ಬಳಿ 60 ಸಾವಿರ ರೂ. ಸಾಲ ಮಾಡಿದ್ದ. ಸಾಲ ತೀರಿಸುವಂತೆ ಮಲ್ಲೇಶ್ ಬೆದರಿಕೆ ಹಾಕಿದಾಗ, ಮಧ್ಯಪ್ರವೇಶಿಸಿದ ಪತ್ನಿ ಭಾರತಿ, ನಿನ್ನ ಸಾಲವನ್ನು ನಾನು ತೀರಿಸುತ್ತೇನೆ, ಆದರೆ ನನಗೊಂದು ಕೆಲಸ ಮಾಡಿಕೊಡಬೇಕು ಎಂದು ಪ್ಲಾನ್ ಮಾಡಿದ್ದಾಳೆ. Read this also : ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಭೀಕರ ದಾಳಿ: ಪತ್ನಿಯ ಮೊಬೈಲ್‌ನಿಂದ ಬಂದ ಆ ಒಂದು ಮೆಸೇಜ್ ಮಾಡಿದ್ದೇನು?

ಮೊದಲೇ ಸ್ಕೆಚ್ ಹಾಕಿದ್ದ ಭಾರತಿ, (Telangana Crime) ಪತಿ ಕುಮಾರ್ ಹೆಸರಿನಲ್ಲಿ 50 ಲಕ್ಷ ರೂ.ಗಳ ಲೈಫ್ ಇನ್ಶೂರೆನ್ಸ್ ಮಾಡಿಸಿದ್ದಳು. ಪತಿಯನ್ನು ಕೊಲೆ ಮಾಡಲು ಮಲ್ಲೇಶ್ ಜೊತೆ 10 ಲಕ್ಷ ರೂ.ಗಳಿಗೆ ಸುಪಾರಿ ಡೀಲ್ ಕುದುರಿಸಿದ್ದಳು. 2026ರ ಏಪ್ರಿಲ್‌ನಲ್ಲಿ 2 ಲಕ್ಷ ರೂ. ಮುಂಗಡ (Advance) ನೀಡಿ, ಕೊಲೆ ಮುಗಿದ ಮೇಲೆ ಉಳಿದ ಹಣ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಳು.

ಅಪಘಾತ ಎಂದು ಬಿಂಬಿಸಲು ಮಾಸ್ಟರ್ ಪ್ಲಾನ್

ಮೇ 22ರ ರಾತ್ರಿ, ಮಲ್ಲೇಶ್ ಮತ್ತು ಶ್ರೀರಾಮ್ ಮೇಸ್ತ್ರಿ ಎಂಬುವವರು ಪ್ಲಾನ್ ಪ್ರಕಾರ ಕುಮಾರ್‌ಗೆ ವಿಪರೀತ ಮದ್ಯ ಕುಡಿಸಿದ್ದಾರೆ. ಬಳಿಕ ಮುಲ್ಕಲ್ಲ ಗ್ರಾಮದ ಹೊರವಲಯದಲ್ಲಿ ಆತನ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಬಲವಾಗಿ ಹೊಡೆದು, ಆತ ಸತ್ತಿದ್ದಾನೆಂದು ಭಾವಿಸಿ ರಸ್ತೆಯ ಮೇಲೆ ಬಿಸಾಡಿ ಪರಾರಿಯಾಗಿದ್ದರು. ಇದನ್ನು ಸಹಜ ರಸ್ತೆ ಅಪಘಾತ (Telangana Crime) ಎಂದು ನಂಬಿಸುವುದು ಅವರ ಪ್ರಮುಖ ಉದ್ದೇಶವಾಗಿತ್ತು.

Telangana Crime case where woman allegedly murdered husband after taking ₹50 lakh life insurance policy

ತಾಯಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಎಚ್ಚೆತ್ತ ಪೊಲೀಸರು, ತಮ್ಮದೇ ಶೈಲಿಯಲ್ಲಿ ಪತ್ನಿ ಭಾರತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲು ಸತ್ಯ ಬಾಯ್ಬಿಟ್ಟಿದ್ದಾಳೆ. ಬೆಳೆದು ನಿಂತ ಇಬ್ಬರು ಮಕ್ಕಳ ಭವಿಷ್ಯವನ್ನೂ ಲೆಕ್ಕಿಸದೆ, ಕೇವಲ ಪ್ರಿಯಕರ ಸುರೇಂದರ್ ಜೊತೆ ಆರಾಮಾಗಿ ಜೀವಿಸುವ ಆಸೆಯಿಂದ ಹೆಣೆದಿದ್ದ ಷಡ್ಯಂತ್ರ ಬಯಲಾಗಿದೆ.

ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ವಸ್ತುಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Telangana Crime) ನಾಲ್ವರನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದಾರೆ. ಆರೋಪಿಗಳಾದ ರಾಮ್ ಮಲ್ಲೇಶ್, ಮೇಸ್ತ್ರಿ ಶ್ರೀನು, ಪತ್ನಿ ಭಾರತಿ ಹಾಗೂ ಪ್ರಿಯಕರ ಸುರೇಂದರ್ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ಇವರ ಬಳಿಯಿಂದ ಒಂದು ಬೈಕ್, 25,000 ರೂ. ನಗದು, ಕೊಲೆಗೆ ಬಳಸಿದ್ದ ಸುತ್ತಿಗೆ, ಮರದ ದೊಣ್ಣೆ, ಮೂರು ಮೊಬೈಲ್ ಫೋನ್‌ಗಳು ಮತ್ತು ಕೊಲೆಗೆ ಪ್ರಚೋದನೆ ನೀಡಿದ್ದ 50 ಲಕ್ಷ ರೂ.ಗಳ ಲೈಫ್ ಇನ್ಶೂರೆನ್ಸ್ ಬಾಂಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಇಡೀ ಮಂಚೇರಿಯಲ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular