HomeStateUlhasnagar Women Assault : ಮಹಾರಾಷ್ಟ್ರದಲ್ಲಿ ಭೀಕರ ಅಮಾನವೀಯತೆ: ದೇವಸ್ಥಾನಕ್ಕೆ ಬಂದ ಮಹಿಳೆಯರ ಬಟ್ಟೆ ಹರಿದು,...

Ulhasnagar Women Assault : ಮಹಾರಾಷ್ಟ್ರದಲ್ಲಿ ಭೀಕರ ಅಮಾನವೀಯತೆ: ದೇವಸ್ಥಾನಕ್ಕೆ ಬಂದ ಮಹಿಳೆಯರ ಬಟ್ಟೆ ಹರಿದು, ಚಪ್ಪಲಿ ಹಾರ ಹಾಕಿ 2 ಕಿ.ಮೀ ಮೆರವಣಿಗೆ!

ಮನುಷ್ಯತ್ವವೇ ತಲೆತಗ್ಗಿಸುವಂತಹ ಅತ್ಯಂತ ಕ್ರೂರ ಮತ್ತು ಅಮಾನವೀಯ ಘಟನೆಯೊಂದು ಮಹಾರಾಷ್ಟ್ರದಲ್ಲಿ (Ulhasnagar Women Assault) ಬೆಳಕಿಗೆ ಬಂದಿದೆ. ಕೇವಲ ದೇವಸ್ಥಾನ ಪ್ರವೇಶದ ವಿಚಾರಕ್ಕೆ ಸಂಬಂಧಿಸಿದಂತೆ ತಲೆದೋರಿದ ವಿವಾದ, ಕೊನೆಗೆ ಮಹಿಳೆಯರ ಮೇಲಿನ ಅತ್ಯಂತ ಪಾಶವಿ ದೌರ್ಜನ್ಯದಲ್ಲಿ ಅಂತ್ಯವಾಗಿದೆ.

Ulhasnagar women assault case in Maharashtra triggers outrage after brutal public humiliation incident

ಒಂದೇ ಕುಟುಂಬದ ಮಹಿಳೆಯರನ್ನು ಬೀದಿಗೆ ಎಳೆದು ತಂದು, ಬಟ್ಟೆ ಹರಿದು, ತಲೆಕೂದುಲು ಕತ್ತರಿಸಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಬರೋಬ್ಬರಿ ಎರಡು ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಆಘಾತಕಾರಿ ಘಟನೆ ಉಲ್ಹಾಸ್‌ನಗರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Ulhasnagar Women Assault – ದೇವಸ್ಥಾನ ಪ್ರವೇಶಕ್ಕೆ ನಿಷೇಧ ಹೇರಿದ್ದ ಜಾತಿ ಪಂಚಾಯಿತಿ

ಈ ಘೋರ ಕೃತ್ಯ ಮಹಾರಾಷ್ಟ್ರದ ಉಲ್ಹಾಸ್‌ನಗರ ಕ್ಯಾಂಪ್-3 ವ್ಯಾಪ್ತಿಯ ವಾಘ್ರಿ ನಗರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಜಾತಿ ಪಂಚಾಯಿತಿಯೊಂದು ಒಂದು ನಿರ್ದಿಷ್ಟ ಕುಟುಂಬವನ್ನು ಸಾಮಾಜಿಕವಾಗಿ ಬಷ್ಕರಿಸಿತ್ತು. ಅಷ್ಟೇ ಅಲ್ಲದೆ, ಅವರು ಸ್ಥಳೀಯ ದೇವಸ್ಥಾನದೊಳಗೆ ಪ್ರವೇಶಿಸದಂತೆ ನಿಷೇಧ ಹೇರಿತ್ತು. ಆದರೆ, ಆ ಕುಟುಂಬವು ಈ ಅನ್ಯಾಯದ ನಿರ್ಧಾರವನ್ನು ಸತತವಾಗಿ ವಿರೋಧಿಸುತ್ತಾ ಬಂದಿತ್ತು.

ಘಟನೆ ನಡೆದ ದಿನ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮೂಹಿಕ ಅನ್ನದಾನ ಆಯೋಜಿಸಲಾಗಿತ್ತು. ಈ ವೇಳೆ ಆ ಕುಟುಂಬದ ಯುವಕನೊಬ್ಬ ದೇವಸ್ಥಾನಕ್ಕೆ ಬಂದು, ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಹಾಗೂ ತಮ್ಮನ್ನು ದೇವರ ದರ್ಶನದಿಂದ ಏಕೆ ತಡೆಯುತ್ತಿದ್ದೀರಿ ಎಂದು ಅಲ್ಲಿನವರನ್ನು ಪ್ರಶ್ನಿಸಿದ್ದಾನೆ. ಜಾತಿ ಪಂಚಾಯಿತಿಯ (Ulhasnagar Women Assault) ನಿಷೇಧವನ್ನು ಲೆಕ್ಕಿಸದೆ ಆತ ದೇವಸ್ಥಾನದ ಆವರಣದೊಳಗೆ ಹೆಜ್ಜೆ ಇಡುತ್ತಿದ್ದಂತೆ ಅಲ್ಲಿ ದೊಡ್ಡ ಗಲಾಟೆ ಶುರುವಾಗಿದೆ.

ದೂರು ನೀಡಲು ಹೊರಟ ಮಹಿಳೆಯರ ಮೇಲೆ ಜಮಾಯಿಸಿದ ಕ್ರೂರಿಗಳು

ಯುವಕ ದೇವಸ್ಥಾನಕ್ಕೆ ಬಂದಿದ್ದರಿಂದ ಸಿಟ್ಟಿಗೆದ್ದ ಕೆಲವು ದುಷ್ಕರ್ಮಿಗಳು ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡು ಸಂತ್ರಸ್ತರ ಮನೆಗೆ ನುಗ್ಗಿದ್ದಾರೆ. ಮೊದಲು ಮನೆಯಲ್ಲಿದ್ದ ಪುರುಷರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬದ ಮಹಿಳೆಯರು, ಮರುದಿನ ಬೆಳಗ್ಗೆ ಈ ಹಲ್ಲೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದಾರೆ. ಆದರೆ ದುರ್ಮಾರ್ಗಿಗಳು ಇವರನ್ನು ದಾರಿಯಲ್ಲೇ ಅಡ್ಡಗಟ್ಟಿದ್ದಾರೆ.

ದುಷ್ಕರ್ಮಿಗಳು ಮಹಿಳೆಯರನ್ನು ರಸ್ತೆಗೆ ಎಳೆದು ತಂದು ಭೀಕರವಾಗಿ ಥಳಿಸುವುದರ ಜೊತೆಗೆ, ಸೇಡು ತೀರಿಸಿಕೊಳ್ಳುವ ನೆಪದಲ್ಲಿ ಅವರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಅಷ್ಟಕ್ಕೇ ನಿಲ್ಲದೆ ಮಹಿಳೆಯರ ತಲೆಕೂದುಲು ಕತ್ತರಿಸಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ, ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ರಸ್ತೆಯಲ್ಲಿ ಅಮಾನವೀಯವಾಗಿ ನಡೆಸಿಕೊಂಡು ಹೋಗಿದ್ದಾರೆ. ಅತ್ಯಂತ ಬೇಸರದ ಸಂಗತಿಯೆಂದರೆ, ಈ ಇಡೀ ಘಟನೆ ನಡೆಯುತ್ತಿರುವಾಗ ಸುತ್ತಮುತ್ತ ನೂರಾರು ಜನರು ನಿಂತು ನೋಡುತ್ತಿದ್ದರೇ ವಿನಃ ಯಾರೊಬ್ಬರೂ ಮಹಿಳೆಯರ ರಕ್ಷಣೆಗೆ ಬರಲಿಲ್ಲ. ಕೆಲವರಂತೂ mobile ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸುತ್ತಾ ನಿಂತಿದ್ದರು. (Ulhasnagar Women Assault) ಇದು ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಎಷ್ಟು ಪತನಗೊಂಡಿವೆ ಎಂಬುದನ್ನು ಎತ್ತಿ ತೋರಿಸುತ್ತದೆ.

Ulhasnagar women assault case in Maharashtra triggers outrage after brutal public humiliation incident

ಇಬ್ಬರು ಮಹಿಳಾ ಆರೋಪಿಗಳ ಬಂಧನ ಹಾಗೂ ಪೊಲೀಸರಿಂದ ತನಿಖೆ ಚುರುಕು

ಈ ಅಮಾನವೀಯ ಘಟನೆಯ ವಿಡಿಯೋಗಳು (Video here) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶದ ಅಲೆ ಎದ್ದಿದೆ. ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಕಠಿಣ ಸೆಕ್ಷನ್‌ಗಳ (Ulhasnagar Women Assault) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. Read this also : ಚಲಿಸುವ ಬೈಕ್‌ನಲ್ಲೇ ಯುವತಿಗೆ ಚಿತ್ರಹಿಂಸೆ! ಮನುಷ್ಯತ್ವ ಮರೆತ ಯುವಕನ ಅಸಭ್ಯ ವರ್ತನೆಗೆ ನೆಟ್ಟಿಗರು ಫುಲ್ ಗರಂ..!

ಈ ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಮಹಿಳಾ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಉಳಿದ ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಉಲ್ಹಾಸ್‌ನಗರ ಎಸಿಪಿ ಶೈಲೇಶ್ ಕಾಳೆ ತಿಳಿಸಿದ್ದಾರೆ.

ಘಟನೆಗೆ ಹಳೆಯ ಹಗೆತನವೇ ಕಾರಣ?

ಒಂದೇ ಸಾಮಾಜಿಕ ಜಾತಿಗೆ ಸೇರಿದ ಎರಡು (Ulhasnagar Women Assault) ಕುಟುಂಬಗಳ ನಡುವಿನ ಹಳೆಯ ವೈಷಮ್ಯವೇ ಈ ಘೋರ ಕೃತ್ಯಕ್ಕೆ ಕಾರಣ (Video here) ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸಿಪಿ ಶೈಲೇಶ್ ಕಾಳೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಕಿರಾತಕರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ನ್ಯಾಯ ಸಿಗಬೇಕು ಎಂದು ಸ್ಥಳೀಯರು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular