HomeStateSBI Credit Card ಬಳಕೆದಾರರೇ ಎಚ್ಚರ! ಬದಲಾಗಿದೆ ಬಿಲ್ ಪಾವತಿ ನಿಯಮ: ಇನ್ಮುಂದೆ ಸ್ವಲ್ಪ ಯಾಮಾರಿದ್ರೂ...

SBI Credit Card ಬಳಕೆದಾರರೇ ಎಚ್ಚರ! ಬದಲಾಗಿದೆ ಬಿಲ್ ಪಾವತಿ ನಿಯಮ: ಇನ್ಮುಂದೆ ಸ್ವಲ್ಪ ಯಾಮಾರಿದ್ರೂ ಜೇಬಿಗೆ ಕತ್ತರಿ ಖಚಿತ!

ನೀವು ಎಸ್‌ಬಿಐ (SBI Credit Card) ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ತಿಂಗಳಿನಿಂದ ನಿಮ್ಮ ಕಾರ್ಡ್ ಸ್ಟೇಟ್‌ಮೆಂಟ್ ಗಮನಿಸುವಾಗ ಸ್ವಲ್ಪ ಎಚ್ಚರವಿರಲಿ. ಏಕೆಂದರೆ ಎಸ್‌ಬಿಐ ಕಾರ್ಡ್ ಸಂಸ್ಥೆಯು ತನ್ನ ಲೇಟ್ ಪೇಮೆಂಟ್ ಶುಲ್ಕಗಳು, ರಿವಾರ್ಡ್ ಪಾಯಿಂಟ್ಸ್ ಮತ್ತು ವಾರ್ಷಿಕ ಶುಲ್ಕ ಮನ್ನಾ ಮಾಡುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ.

SBI credit card new rules late payment charges reward points changes India

ಈ ಹೊಸ ಅಪ್‌ಡೇಟ್‌ಗಳು ಈಗಾಗಲೇ ಜಾರಿಗೆ ಬಂದಿದ್ದು, ಬಿಲ್ ಪಾವತಿಯಲ್ಲಿ ಸಣ್ಣ ನಿರ್ಲಕ್ಷ್ಯ ತೋರಿದರೂ ನೀವು ದೊಡ್ಡ ಮೊತ್ತದ ದಂಡ ತೆರಬೇಕಾಗಬಹುದು. ಸಾಮಾನ್ಯ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿರುವ ಆ 4 ಪ್ರಮುಖ ಬದಲಾವಣೆಗಳು ಇಲ್ಲಿವೆ ನೋಡಿ:

SBI Credit Card – ಪ್ರಮುಖ 4 ಬದಲಾವಣೆಗಳು

1. ದುಬಾರಿಯಾದ ಲೇಟ್ ಪೇಮೆಂಟ್ ಶುಲ್ಕ (Late Payment Charges)

ಮೇ 1 ರಿಂದ ಜಾರಿಗೆ ಬರುವಂತೆ ಎಸ್‌ಬಿಐ ಕಾರ್ಡ್ ತನ್ನ ವಿಳಂಬ ಪಾವತಿ ಶುಲ್ಕವನ್ನು ಪರಿಷ್ಕರಿಸಿದೆ. ನಿಗದಿತ ಅವಧಿಯೊಳಗೆ ಬಿಲ್ ಪಾವತಿಸದಿದ್ದರೆ ವಿಧಿಸುವ ದಂಡ ಈಗ ಮತ್ತಷ್ಟು ಹೆಚ್ಚಾಗಿದೆ.

  • ನಿಮ್ಮ ಬಾಕಿ ಮೊತ್ತ ₹100 ರಿಂದ ₹500 ರೊಳಗಿದ್ದರೆ, ಇನ್ಮುಂದೆ ₹100 ಲೇಟ್ ಫೀ ಪಾವತಿಸಬೇಕು.
  • ಬಾಕಿ ಮೊತ್ತ ಹೆಚ್ಚಾದಂತೆ ಈ ಶುಲ್ಕವೂ ಗಣನೀಯವಾಗಿ ಏರಿಕೆಯಾಗುತ್ತಾ ಹೋಗುತ್ತದೆ. ಆದ್ದರಿಂದ, ಡೆಡ್‌ಲೈನ್‌ಗಿಂತ ಮುಂಚಿತವಾಗಿ ಬಿಲ್ ಪಾವತಿಸುವುದು ಈಗ (SBI Credit Card) ಅನಿವಾರ್ಯವಾಗಿದೆ.

2. ವಾರ್ಷಿಕ ಶುಲ್ಕ ಮನ್ನಾ ಇನ್ಮುಂದೆ ಕಷ್ಟ!

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ವರ್ಷಕ್ಕೆ ಇಂತಿಷ್ಟು ಮೊತ್ತವನ್ನು ಖರ್ಚು ಮಾಡಿದರೆ ವಾರ್ಷಿಕ ಶುಲ್ಕವನ್ನು (Annual Fee) ಮನ್ನಾ ಮಾಡುತ್ತವೆ. ಆದರೆ, ಜನಪ್ರಿಯ BPCL SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕಂಪನಿ ಶಾಕ್ ನೀಡಿದೆ.

  • ಹಿಂದೆ ವರ್ಷಕ್ಕೆ ₹50,000 ಖರ್ಚು ಮಾಡಿದರೆ ₹499 ವಾರ್ಷಿಕ ಶುಲ್ಕ ಮನ್ನಾ ಆಗುತ್ತಿತ್ತು.
  • ಆದರೆ ಈಗಿನ ನಿಯಮದಂತೆ, ಈ ಸೌಲಭ್ಯ ಪಡೆಯಲು ನೀವು ಕನಿಷ್ಠ ₹1 ಲಕ್ಷ ಖರ್ಚು ಮಾಡಬೇಕಾಗುತ್ತದೆ. ಅಂದರೆ ಖರ್ಚಿನ ಮಿತಿಯನ್ನು ಕಂಪನಿ ದುಪ್ಪಟ್ಟು (SBI Credit Card) ಮಾಡಿದೆ.

3. ರಿವಾರ್ಡ್ ಪಾಯಿಂಟ್ಸ್ ರಿಡೀಮ್ ಮಾಡುವುದಕ್ಕೂ ಮಿತಿ

ಏಪ್ರಿಲ್ 1 ರಿಂದಲೇ ಅನ್ವಯವಾಗುವಂತೆ ರಿವಾರ್ಡ್ ಪಾಯಿಂಟ್‌ಗಳ ಬಳಕೆಯಲ್ಲೂ ಹೊಸ ನಿಯಮ ತರಲಾಗಿದೆ.

4. ಬಾಕಿ ವಸೂಲಿಗೆ ಕಠಿಣ ಕ್ರಮ

ಬಿಲ್ ಪಾವತಿಸದ ಗ್ರಾಹಕರ ವಿರುದ್ಧ ಎಸ್‌ಬಿಐ ಕಾರ್ಡ್ ಕಠಿಣ ಕ್ರಮಕ್ಕೆ ಮುಂದಾಗಿದೆ.

SBI credit card new rules late payment charges reward points changes India

  • ಫೋನ್ ಕರೆಗಳು, ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಎಚ್ಚರಿಕೆ ನೀಡುವುದರ ಜೊತೆಗೆ, ಅಗತ್ಯವಿದ್ದರೆ ಥರ್ಡ್ ಪಾರ್ಟಿ ಏಜೆನ್ಸಿಗಳ ಮೂಲಕ ಬಾಕಿ ವಸೂಲಿಗೆ ಕಂಪನಿ ಮುಂದಾಗಲಿದೆ.
  • ತೀರಾ ನಿರ್ಲಕ್ಷ್ಯ ವಹಿಸಿದರೆ ಕಸ್ಟಮರ್ (SBI Credit Card) ಮಾಹಿತಿಯನ್ನು ಸಿಬಿಲ್ (CIBIL) ನಂತಹ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಲಾಗುತ್ತದೆ. ಆದರೆ, ಈ ಕ್ರಮ ಕೈಗೊಳ್ಳುವ ಮೊದಲು ಗ್ರಾಹಕರಿಗೆ ಒಂದು ತಿಂಗಳ ನೋಟಿಸ್ ನೀಡುವುದಾಗಿ ಕಂಪನಿ ತಿಳಿಸಿದೆ.

ಗಮನಿಸಿ: ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಸಣ್ಣ ನಿರ್ಲಕ್ಷ್ಯ ವಹಿಸಿದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ (CIBIL) ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ, ಅನಗತ್ಯ ದಂಡದಿಂದ ಪಾರಾಗಲು ಯಾವಾಗಲೂ ಗಡುವು ಮುಗಿಯುವ ಮುನ್ನವೇ ಪೂರ್ಣ ಬಿಲ್ ಪಾವತಿಸಲು ಪ್ರಯತ್ನಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular