ಅನೇಕ ಯುವಕ-ಯುವತಿಯರು ವ್ಯಾಪಾರ, ಉದ್ದಿಮೆಗಳ ಮೂಲಕ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅಂತಹವರಲ್ಲಿ ಕೆಲವರು ಜಯಿಸುತ್ತಾರೆ, ಮತ್ತೆ ಕೆಲವರು ಸೋಲುತ್ತಾರೆ. ಈ ಪ್ರಕ್ರಿಯೆಯಲ್ಲಿ ಅನೇಕ ಅವಮಾನಗಳನ್ನು, ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಸವಾಲುಗಳನ್ನು ಎದುರಿಸಿದ ಯುವಕನೋರ್ವ ಬಟ್ಟೆ ವ್ಯಾಪಾರದಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ. ಅದರಲ್ಲೂ ಕಡಿಮೆ ಸಮಯದಲ್ಲೇ ರಾಜ್ಯವ್ಯಾಪಿ ಹೆಸರನ್ನು ಗಳಿಸಿಕೊಂಡಿದ್ದಾನೆ.
ಹೌದು,… ಯುವಕನೋರ್ವ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದ್ದಾನೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಯುವಕ ಅರುಣ್ ಎಂಬ ಯುವಕ ಸಣ್ಣ ವಯಸ್ಸಿನಲ್ಲೇ ಒಳ್ಳೆಯ ಸಾಧನೆ ಮಾಡಿದ್ದಾನೆ. ಸಣ್ಣದಾಗಿ ಬಟ್ಟೆ ವ್ಯಾಪಾರ ಮಾಡುವ ಅಂಗಡಿಯನ್ನು ಪ್ರಾರಂಭಿಸಿದ ಅರುಣ್, ಇದೀಗ ಬೆಂಗಳೂರಿನಲ್ಲಿರುವಂತೆ ದೊಡ್ಡ ಬಟ್ಟೆ ವ್ಯಾಪಾರ ಮಳಿಗೆಯನ್ನು ತೆರೆದಿದ್ದಾನೆ. ಗ್ರಾಹಕರಿಗೆ ವಿವಿಧ ರೀತಿಯ ಆಫರ್ ಗಳನ್ನು ಕೊಟ್ಟು ಸೆಳೆದುಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸಹ ತಮ್ಮ ವ್ಯಾಪಾರವನ್ನು ಪ್ರಮೋಟ್ ಮಾಡುತ್ತಿರುತ್ತಾನೆ. ಅರುಣ್ ಅಡ್ಡಾ ಎಂಬ ಇನ್ಸ್ಟಾಗ್ರಾಂ, ಫೇಸ್ ಬುಕ್ ಪೇಜ್ ಮೂಲಕ ವ್ಯಾಪಾರದ ಬಗ್ಗೆ ಜಾಹಿರಾತು ನೀಡುತ್ತಿರುತ್ತಾನೆ. ಗೂಗಲ್ ಫಾಂ ಮೂಲಕ ಆಫರ್ ಗಳನ್ನು ನೀಡಿ, ಇದರಲ್ಲಿ ನೊಂದಣಿಯಾದವರಿಗೆ ಆಫರ್ ನಲ್ಲಿ ತಿಳಿಸಿದಂತೆ ಬಟ್ಟೆಗಳನ್ನು ನೀಡುತ್ತಿರುತ್ತಾನೆ.
ಈಗಲೂ ಸಹ ಗುಡಿಬಂಡೆಗೆ 100 ಕಿ.ಮೀ ದೂರದಲ್ಲಿರುವ ಬೆಂಗಳೂರಿನಲ್ಲಿಯೇ ಗುಡಿಬಂಡೆ ಎಲ್ಲಿದೆ ಎಂಬುದು ಹೆಚ್ಚಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಗುಡಿಬಂಡೆ ಸುರಸದ್ಮಗಿರಿ ಬೆಟ್ಟ, ವಾಟದಹೊಸಹಳ್ಳಿ ಕೆರೆ, ಆವುಲಬೆಟ್ಟ ತಾಣಗಳಿಗೆ ವಾರಾಂತ್ಯಗಳಂದು ಗುಡಿಬಂಡೆಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಬಟ್ಟೆ ಖರೀದಿ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನಿಂದಲೂ ಗುಡಿಬಂಡೆಗೆ ಆಗಮಿಸುತ್ತಿರುವುದು ಅರುಣ್ ಅಡ್ಡಾ ಮೆನ್ಸ್ ವೇರ್ ಗೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಗುಲ್ಬರ್ಗಾ ಹೀಗೆ ವಿವಿಧ ಜಿಲ್ಲೆಗಳಿಂದ ಅರುಣ್ ಅಡ್ಡಾ ಮೆನ್ಸ್ ವೇರ್ ಗೆ ಬಟ್ಟೆ ಖರೀದಿಸಲು ಬರುತ್ತಿದ್ದಾರೆ.
ವಿಡಿಯೋ ನೋಡಲು ಲಿಂಕ್ ಒಪೆನ್ ಮಾಡಿ: https://www.facebook.com/share/v/3By7RA2HSKB5P9L1/?mibextid=qi2Omg
ಇನ್ನೂ ISM Kannada (ಇಸಂ ಕನ್ನಡ ಅಂತರ್ಜಾಲ ತಾಣ) ಅರುಣ್ ಅಡ್ಡಾ ಮೆನ್ಸ್ ವೇರ್ ಮಾಲೀಕ ಅರುಣ್ ಜೊತೆ ಚಿಟ್ ಚಾಟ್ ನಡೆಸಿತು. ಈ ಸಮಯದಲ್ಲಿ ISM Kannada ಜೊತೆಗೆ ಮಾತನಾಡಿದ ಅರುಣ್ ನಾನು ಮೊದಲಿಗೆ ಸಣ್ಣದಾಗಿ ಅಂಗಡಿ ಆರಂಭಿಸಿದೆ. ವ್ಯಾಪಾರ ಆರಂಭಿಸಿದ ಪ್ರಾರಂಭದಲ್ಲಿ ಸಾಮಾನ್ಯವಾಗಿ ವ್ಯಾಪಾರ ಆಗುತ್ತಿತ್ತು. ಏನಾದರೂ ಮಾಡಿ ನಾನು ನಮ್ಮ ಭಾಗದ ಜನರಿಗೆ ಒಳ್ಳೆಯ ಬಟ್ಟೆಗಳನ್ನು ಒದಗಿಸಬೇಕು. ಕಡಿಮೆ ದರದಲ್ಲಿ ಬಟ್ಟೆ ಕೊಡಬೇಕು ಎಂದು ನಿರ್ಧಾರ ತೆಗೆದುಕೊಂಡು ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡಲು ಶುರು ಮಾಡಿದೆ. ಆರಂಭದಲ್ಲಿ ಅನೇಕರು ವಿಮರ್ಶೆ ಮಾಡಿದರು. ಅವನು ಅಷ್ಟು ಕಡಿಮೆಗೆ ಬಟ್ಟೆ ಕೊಡುತ್ತಿದ್ದಾನೆ. ಕಳಪೆ ಇರಬಹುದು ಎಂದು ವಿಮರ್ಶೆ ಮಾಡಿದರು. ಆದರೆ ನನ್ನ ಬಳಿ ಖರೀದಿ ಮಾಡಿದ ಯಾವುದೇ ಬಟ್ಟೆಗಳಿಗೆ ನಾನು ಗ್ಯಾರಂಟಿ ಕೊಡುತ್ತೇನೆ. ಬಟ್ಟೆ ಕಲರ್ ಡ್ಯಾಮೇಜ್ ಆದರೂ ಪೀಸ್ ಟು ಪೀಸ್ ಬದಲಿಸಿಕೊಡುತ್ತೇನೆ ಎಂದರು.
ಇನ್ನೂ ಈ ಹಿಂದೆ ಅನೇಕರು ಗುಡಿಬಂಡೆ ಎಂದರೇ ಸಾಕು ಅವಹೇಳನ ಮಾಡುತ್ತಿದ್ದರು. ಗುಡಿಬಂಡೆಯಲ್ಲಿ ಏನು ಸಿಗೊಲ್ಲ ಎಂದು ಹೇಳುತ್ತಿದ್ದರು. ಇದೀಗ ಗುಡಿಬಂಡೆ ಹೆಸರು ರಾಜ್ಯದಾದ್ಯಂತ ಹೆಸರು ಮಾಡಿದೆ. ನನ್ನ ಅರುಣ್ ಅಡ್ಡಾ ಮೂಲಕ ಗುಡಿಬಂಡೆಯ ಜನತೆಗೆ ಕಡಿಮೆ ದರದಲ್ಲಿ ಬಟ್ಟೆಗಳನ್ನು ಪೂರೈಕೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನೂರು ರೂಪಾಯಿಗೆ ಒಂದು ಜೊತೆ ಬಟ್ಟೆ ಪೂರೈಕೆ ಮಾಡುತ್ತೇನೆ. ನನ್ನ ಈ ಒಂದು ಸಣ್ಣ ಪ್ರಯತ್ನಕ್ಕೆ ಜನರ ಸಹಕಾರ ಸಹ ತುಂಬಾನೆ ಇದೆ. ಮುಂದೆ ಸಹ ಇದೇ ರೀತಿಯ ಸಹಕಾರ ನೀಡಿ ನಿಮ್ಮ ಹುಡುಗನನ್ನು ಬೆಳೆಸಬೇಕು.