ಅಲ್ಲಲ್ಲಿ ಕಾಣುವ ಈ ಸಸಿಯಲ್ಲಿದೆ ಔಷಧೀಯ ಗುಣಗಳು, ನಿಮಗಿದು ತಿಳಿದಿದೆಯೇ?

ನಮ್ಮ ಸುತ್ತಮುತ್ತಲಿನ ಕಾಣುವಂತಹ ಹಲವು ಸಸಿಗಳಲ್ಲಿ ಔಷಧಿಯ ಗುಣಗಳಿರುತ್ತವೆ. ಆ ಸಸ್ಯಗಳಲ್ಲಿರುವ ಔಷಧಿ ಗುಣಗಳ ಬಗ್ಗೆ ಮಾಹಿತಿ ತಿಳಿದೇ ಇರುವುದಿಲ್ಲ. ಅಂತಹ ಸಸ್ಯಗಳಲ್ಲಿ ಉಮ್ಮತ್ತಿ ಗಿಡ ಸಹ ಒಂದಾಗಿದೆ. ಈ ಸಸಿಯಲ್ಲಿನ ಎಲೆಗಳು, ಹೂವುಗಳಲ್ಲಿ ತುಂಬಾನೆ ಔಷಧಿಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಈ ಸಸಿಯಲ್ಲಿನ ಔಷಧಿ ಗುಣಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಔಷಧಿ ಸಸಿಯಲ್ಲಿ ಏನೆಲ್ಲಾ ಔಷಧಿ ಗುಣಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿ…! (ಸಂಗ್ರಹ ಮಾಹಿತಿ)

Datura plant uses 1

ಭಾರತದಲ್ಲಿ ಅನಾದಿ ಕಾಲದಿಂದಲೂ ಆರ್ಯುವೇದದ ತುಂಬಾನೆ ಪ್ರಾಮುಖ್ಯತೆ ಹೊಂದಿದೆ ಎನ್ನಲಾಗಿದೆ.  ಅದರಲ್ಲೂ ಆರ್ಯುವೇದ ಇದೀಗ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅನೇಕರು ಇಂದಿಗೂ ಆರ್ಯುವೇದ ಪದ್ದತಿಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿರುತ್ತಾರೆ. ನಮ್ಮ ಪೂರ್ವಜರು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಗುವಂತಹ ಹಲವಾರು ಸಸಿಗಳಲ್ಲಿ ಹೇರಳವಾದ ಔಷಧಿಯ ಗುಣಗಳಿರುತ್ತದೆ. ಈ ಸಾಲಿಗೆ ಉಮ್ಮತಿ ಗಿಡ ಅಥವಾ ದತ್ತೂರಿ ಗಿಡ ಸಹ ಒಂದಾಗಿದೆ. ಈ ಸಸಿಯಲ್ಲಿ ತುಂಬಾನೆ ಔಷಧಿ ಗುಣಗಳಿವೆ. ಈ ಸಸಿಯ ಬಗ್ಗೆ ಈಗಿನವರಿಗೆ ಅಷ್ಟೊಂದು ಮಾಹಿತಿ ಇಲ್ಲ ಎಂದೇ ಹೇಳಬಹುದಾಗಿದೆ. ಈ ಸಸಿ ಎಲ್ಲೆಂದರಲ್ಲಿ ಬೆಳೆಯುತ್ತಿರುತ್ತದೆ. ಈ ಸಸಿಯಲ್ಲಿ ಔಷಧಿ ಗುಣಗಳು ಆಗರವಾಗಿದೆ. ಸಸಿಯ ಕಾಯಿಗಳು ಚೆಂಡಿನ ಆಕಾರದಲ್ಲಿದ್ದು, ಮುಳ್ಳಿನಿಂದ ಕೂಡಿರುತ್ತದೆ. ಇದು ಬಹಳಷ್ಟು ವಿಷಕಾರಿಯಾಗಿದೆ. ಆದರೆ ಈ ಸಸಿಯನ್ನು ಚರ್ಮದಿಂದ ಹಿಡಿದು ತಲೆನೋವಿನವರೆಗೂ ಮನೆಯ ಮದ್ದಾಗಿ ಬಳಕೆ ಮಾಡಬಹುದಾಗಿದೆ.

Datura plant uses 0

ಇನ್ನೂ ದತ್ತೂರಿ ಅಥವಾ ಉಮ್ಮತ್ತಿ ಗಿಡದಲ್ಲಿ ಈ ಕೆಳಗಿನ ಔಷಧಿ ಗುಣಗಳಿವೆ.

  • ಆಕಳಲ್ಲಿ ಕಾಣುವ ಕೆಚ್ಚಲು ಬಾವು ಸಮಸ್ಯೆಗೆ ಈ ಸಸ್ಯದ ಎಲೆಯನ್ನು ಶುದ್ಧ ಹಸುವಿನ ಹಾಲು ಹಾಗೂ ಜೀರಿಗೆ ಹಾಕಿ ಅರೆದು ಕೆಚ್ಚಲಿಗೆ ಹಚ್ಚುವುದರಿಂದಬಾವು ಕಡಿಮೆಯಾಗುತ್ತದೆ.
  • ತಲೆನೋವು ಮತ್ತು ಮೈಗ್ರೇನ್ ತಲೆನೋವಿಗೆ ಈ ಎಲೆಗಳನ್ನು ಎಳ್ಳೆಣ್ಣೆಯೊಂದಿಗೆ ಬಿಸಿ ಮಾಡಿ ಹಣೆಯ ಮೇಲೆ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.
  • ಕಾಲು ನೋವು, ಕೀಲು ನೋವಿನಂತಹ ಸಮಸ್ಯೆಗೆ ಉಮ್ಮತ್ತಿ ಎಲೆಗೆ ಎಳ್ಳೆಣ್ಣೆ ಹಚ್ಚಿ ಸ್ವಲ್ಪ ಬಿಸಿ ಮಾಡಿ ನೋವು ಇರುವಲ್ಲಿ ಇಟ್ಟುಕೊಂಡರೆ ನೋವು ಶಮನವಾಗುತ್ತದೆ.
  • ಉಮ್ಮತ್ತಿ ಎಲೆಗಳ ರಸವನ್ನು ತುರಿಕೆ ಮತ್ತು ಹುಣ್ಣುಗಳ ಮೇಲೆ ಹಚ್ಚಿದರೆ ಬೇಗನೇ ಗುಣವಾಗುತ್ತದೆ.
  • ತಲೆಯಲ್ಲಿ ಹೇನು, ಹುಣ್ಣು ಇರುವವರು ಈ ಎಲೆಗಳ ರಸವನ್ನು ಆಲದ ಎಣ್ಣೆಗೆ ಬೆರೆಸಿ ಹಚ್ಚಿದರೆ ಈ ಸಮಸ್ಯೆಗಳು ದೂರವಾಗುತ್ತವೆ.

Leave a Comment

Your email address will not be published. Required fields are marked *

Scroll to Top