MLA Subbareddy : ನಾನು ರಾಜಕೀಯ ಮಾಡೋಕೆ ಶುರು ಮಾಡಿದ್ರೇ, ಕ್ಷೇತ್ರದಲ್ಲಿ ನಿಮ್ಮನ್ನು ಕಾಲಿಡೋಕು ಬಿಡೊಲ್ಲ : ಶಾಸಕ ಸುಬ್ಬಾರೆಡ್ಡಿ

ಕ್ಷೇತ್ರದಲ್ಲಿ ದಶಕಗಳಿಂದ ನಾನು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಕಳೆದ ಮೂರು ಬಾರಿ ಶಾಸಕನಾಗಿದ್ದರೂ ಜನರ ಸೇವೆಯೇ ನನ್ನ ಆದ್ಯತೆಯಾಗಿದೆ ವಿನಃ ಕೇವಲ ರಾಜಕೀಯವಲ್ಲ. ನಾನು ರಾಜಕೀಯ ಮಾಡಲು ಶುರು ಮಾಡಿದರೆ ವಿರೋಧಿಗಳು ಕ್ಷೇತ್ರದಲ್ಲಿ ಕಾಲಿಡಲು ಸಾಧ್ಯವಿಲ್ಲ ಎಂದು (MLA Subbareddy) ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ರಾಜಕೀಯ ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

MLA Subbareddy addressing media and warning political opponents in his constituency

MLA Subbareddy – ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಸ್ಥಾನಕ್ಕೆ ಭೇಟಿ

ಕೆಲವು ದಿನಗಳ ಹಿಂದೆಯಷ್ಟೆ ಹೈಕೋರ್ಟ್ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ, ಗುಡಿಬಂಡೆ ತಾಲೂಕಿನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಮೇಲಿನ ಆರೋಪಗಳಿಗೆ (MLA Subbareddy) ನೇರವಾಗಿ ಉತ್ತರಿಸಿದರು.

ಜನರ ಆಶೀರ್ವಾದವೇ ನನ್ನ ಶ್ರೀರಕ್ಷೆ

ಕಳೆದ 15 ವರ್ಷಗಳಿಂದ ತಾವು ಮಾಡುತ್ತಿರುವ ಸಮಾಜ ಸೇವೆಯನ್ನು ಸ್ಮರಿಸಿದ ಶಾಸಕರು, ತಾವು ಮೊದಲ ಬಾರಿಗೆ ಪಕ್ಷೇತರವಾಗಿ ಸ್ಪರ್ಧಿಸಿದಾಗ 33 ಸಾವಿರ ಮತಗಳನ್ನು ಪಡೆದಿದ್ದನ್ನು ನೆನಪಿಸಿಕೊಂಡರು. ಎರಡನೇ ಮತ್ತು ಮೂರನೇ ಬಾರಿಯೂ ಕ್ರಮವಾಗಿ 16 ಮತ್ತು 19 ಸಾವಿರ ಮತಗಳ (MLA Subbareddy) ಅಂತರದಿಂದ ಜನ ಬೆಂಬಲ ನೀಡಿದ್ದಾರೆ. ಒಂದು ವೇಳೆ ತಾವು ಜನರ ಸೇವೆ ಮಾಡದಿದ್ದರೆ ಮತದಾರರು ಎಂದೋ ತಮ್ಮನ್ನು ಮನೆಗೆ ಕಳುಹಿಸುತ್ತಿದ್ದರು ಎಂದು ಅವರು ಮಾರ್ಮಿಕವಾಗಿ ನುಡಿದರು. ದೇವರ ಕೃಪೆ ಇರುವ ತನಕ ಯಾರೂ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಆಸ್ತಿ ವಿವರ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಪ್ರತ್ಯುತ್ತರ

ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಸುಬ್ಬಾರೆಡ್ಡಿ, ತಾವು ಒಟ್ಟು ಆಸ್ತಿಯ ವಿವರಗಳನ್ನು ಸರಿಯಾಗಿಯೇ ತೋರಿಸಿರುವುದಾಗಿ ತಿಳಿಸಿದರು. ಆದರೆ ವಿರೋಧಿಗಳು ಇದನ್ನು ವಿವರವಾಗಿ ನೀಡಿಲ್ಲ ಎಂದು ದೂರುತ್ತಿರುವುದು ಹಾಸ್ಯಾಸ್ಪದ ಎಂದರು. “ಒಟ್ಟು ಆಸ್ತಿ ತೋರಿಸಿದ ನಂತರ ಅದು ಭ್ರಷ್ಟಾಚಾರ ಹೇಗೆ ಆಗುತ್ತದೆ?” ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ತಡೆ ನೀಡದಂತೆ ಅರ್ಜಿ ಹಾಕಿದವರ (MLA Subbareddy) ಉದ್ದೇಶವೇನು ಎಂಬುದು ಈಗ ಬಯಲಾಗಿದೆ ಎಂದು ಕಿಡಿಕಾರಿದರು. ತಮ್ಮ ವಿರುದ್ಧ ಭ್ರಷ್ಟಾಚಾರ ಸಾಬೀತಾದರೆ ತಾವೇ ನೇರವಾಗಿ ಸ್ಪೀಕರ್ ಬಳಿ ಹೋಗಿ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು.

MLA Subbareddy addressing media and warning political opponents in his constituency

ವಾಮಮಾರ್ಗದ ರಾಜಕೀಯಕ್ಕೆ ಜನರ ತಕ್ಕ ಉತ್ತರ

ವಿರೋಧಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ (MLA Subbareddy) ಶಾಸಕರು, ಅಧಿಕಾರಕ್ಕಾಗಿ ಇಂತಹ ವಾಮಮಾರ್ಗಗಳನ್ನು ಹಿಡಿಯುವುದು ಸರಿಯಲ್ಲ ಎಂದರು. ಹೈಕೋರ್ಟ್ ತೀರ್ಪು ಬಂದಾಗ ಕ್ಷೇತ್ರದ ಜನರು ತಮಗೆ ಕರೆ ಮಾಡಿ ನೋವು ತೋಡಿಕೊಂಡಿದ್ದರು, ಇದು ಜನರ ಪ್ರೀತಿಯನ್ನು ತೋರಿಸುತ್ತದೆ ಎಂದು ಭಾವುಕರಾದರು. ಈ ಹೋರಾಟದ ಮೂಲಕ ಜನರಲ್ಲಿ ತಮ್ಮ ಮೇಲಿರುವ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. Read this also : ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಬಿಗ್ ರಿಲೀಫ್: ಶಾಸಕ ಸ್ಥಾನ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ!

ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ

ನಂತರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕರು, ಬೆಂಬಲಿಗರೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಈ ಸಮಯದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಆದಿನಾರಾಯಣರೆಡ್ಡಿ, ಕೆ.ನರೇಂದ್ರ, ನವೀನ್, ವಿಕಾಸ್, ಅಂಬರೀಶ್, ಬಾಬು, ರಾಜಾರೆಡ್ಡಿ, ಲಕ್ಷ್ಮೀನಾರಾಯಣ, ಬ್ರಾಹ್ಮಣರಹಳ್ಳಿ ಮೂರ್ತಿ, ಕೃಷ್ಣೇಗೌಡ, ಅಶ್ವತ್ಥಪ್ಪ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top