School Uniform Bride : ಶಾಲಾ ಯೂನಿಫಾರ್ಮ್‌ ನಲ್ಲಿ ಮಂಟಪಕ್ಕೆ ಬಂದ ವಧು; ಅವಳನ್ನು ನೋಡಿ ವೇದಿಕೆ ಮೇಲೆಯೇ ಕಣ್ಣೀರಿಟ್ಟ ವರ!

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಸುಂದರ ಮತ್ತು ಭಾವನಾತ್ಮಕ ಕ್ಷಣ. ಈ ದಿನದಂದು ವಧು-ವರರು ಅದ್ಧೂರಿಯಾಗಿ ಕಾಣಿಸಿಕೊಳ್ಳಬೇಕು, ಬಣ್ಣಬಣ್ಣದ ರೇಷ್ಮೆ ಸೀರೆ ಅಥವಾ ದುಬಾರಿ ಲೆಹೆಂಗಾ ಧರಿಸಬೇಕು ಎಂದು ಕನಸು ಕಾಣುವುದು ಸಹಜ. ಆದರೆ, ಇಲ್ಲೊಬ್ಬಳು ವಧು ತನ್ನ ಮದುವೆಯ ಮಂಟಪಕ್ಕೆ (School Uniform Bride) ಯಾವುದೇ ಆಡಂಬರವಿಲ್ಲದೆ, ಸರಳವಾದ ಶಾಲಾ ಯೂನಿಫಾರ್ಮ್ ಧರಿಸಿ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಈ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನ ಸದ್ದು ಮಾಡುತ್ತಿದೆ.

School uniform bride surprises groom at wedding stage with emotional gesture

School Uniform Bride – ಏನಿದು ಘಟನೆ?

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುವಂತಿದೆ. ಸಾಮಾನ್ಯವಾಗಿ ವಧು ಅಂದವಾಗಿ ಮೇಕಪ್ ಮಾಡಿಕೊಂಡು ಮಂಟಪಕ್ಕೆ ಪ್ರವೇಶಿಸುತ್ತಾಳೆ. ಆದರೆ ಈ ವಿಡಿಯೋದಲ್ಲಿ, ಯುವತಿಯೊಬ್ಬಳು ಸ್ಕೂಲ್ ಯೂನಿಫಾರ್ಮ್ ಧರಿಸಿ, ಕೈಯಲ್ಲೊಂದು ಹೂಗುಚ್ಛ ಹಿಡಿದು ಮದುವೆ ವೇದಿಕೆಯತ್ತ ನಡೆದು ಬರುತ್ತಾಳೆ.

ಅಲ್ಲಿ ಸೂಟ್ ಧರಿಸಿ ಮಿಂಚುತ್ತಿದ್ದ ವರನಿಗೆ ತನ್ನ ಭಾವಿ ಪತ್ನಿ ಈ ಅವತಾರದಲ್ಲಿ ಬರುತ್ತಾಳೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ. ಅವಳು ಬಂದು ಹೂಗುಚ್ಛ ನೀಡಿದಾಗ, ಅವಳನ್ನು ನೋಡಿದ ವರ ಒಂದು ಕ್ಷಣ ಸ್ತಬ್ಧನಾದ. ತನ್ನ ಹಳೆಯ ಶಾಲಾ ದಿನಗಳ ಪ್ರೀತಿ ಕಣ್ಣಮುಂದೆ ಬಂದಂತಾಗಿ, ಆನಂದ ಭಾಷ್ಪ (School Uniform Bride) ಸುರಿಸುತ್ತಾ ಅವಳನ್ನು ತಬ್ಬಿಕೊಂಡನು.

ಟ್ವಿಟ್ಟರ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ

ಈ ಮನಕಲಕುವ ವಿಡಿಯೋವನ್ನು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ @TAdventurousoul ಎಂಬುವವರು ಹಂಚಿಕೊಂಡಿದ್ದಾರೆ. “ತನ್ನ ಪತಿಯನ್ನು ಸರ್‌ಪ್ರೈಸ್ ಮಾಡಲು ಅವಳು ಶಾಲಾ ಯೂನಿಫಾರ್ಮ್ ಧರಿಸಿದ್ದಾಳೆ. ಇವರಿಬ್ಬರೂ ಶಾಲಾ ದಿನಗಳಿಂದಲೇ ಪ್ರೀತಿಸುತ್ತಿದ್ದರು” ಎಂಬ ಕ್ಯಾಪ್ಷನ್ ನೀಡಲಾಗಿದೆ. ಈ 24 ಸೆಕೆಂಡುಗಳ (School Uniform Bride) ವಿಡಿಯೋ ಈಗಾಗಲೇ 3.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 20,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. Read this also : UPSC ಅಭ್ಯರ್ಥಿಯ ದೊಡ್ಡ ಗುಣ: ಮದುವೆಯಲ್ಲಿ ಉಳಿದ ಆಹಾರ ಎತ್ತಿ ಪ್ರಾಣಿಗಳಿಗೆ ಉಣಿಸಿದ ಯುವಕನಿಗೆ ನೆಟ್ಟಿಗರು ಫಿದಾ!

School uniform bride surprises groom at wedding stage with emotional gesture

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಒಬ್ಬ ಬಳಕೆದಾರರು, “ಮೊದಲ ಪ್ರೇಮವೇ ಜೀವನದ ಸಂಗಾತಿಯಾದಾಗ ಸಿಗುವ ಸುಖ ಯಾವುದೇ ಸಿನಿಮಾಕ್ಕಿಂತಲೂ ಅದ್ಭುತವಾಗಿರುತ್ತದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಇದು ಕೇವಲ ಪ್ರೀತಿಯಲ್ಲ, ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಅಪರೂಪದ ಕ್ಷಣ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ : Click Here 

ಶಾಲಾ ದಿನಗಳ (School Uniform Bride) ಆ ಮುಗ್ಧ ಪ್ರೀತಿ ಮದುವೆಯ ಮಂಟಪದವರೆಗೆ ಬರುವುದು ಇಂದಿನ ಕಾಲದಲ್ಲಿ ಅಷ್ಟು ಸುಲಭವಲ್ಲ. ಹಾಗಾಗಿಯೇ ಈ ಜೋಡಿಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

Leave a Comment

Your email address will not be published. Required fields are marked *

Scroll to Top