Friday, November 22, 2024

ಹೋಟೆಲ್ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ….!

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ನೊಂದಾಯಿತ ಹೋಟೆಲ್ ಕಾರ್ಮಿಕರ ಮಕ್ಕಳಿಗೆ 2023-24ನೇ ಸಾಲಿನ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಯಿರಬೇಕು, ಯಾರು ಅರ್ಜಿ ಸಲ್ಲಿಸಬಹುದು, ಹೇಗೆ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿಗಾಗಿ ಮುಂದೆ ಓದಿ..

ಎಲ್ಲಾ ಉದ್ಯಮಗಳಂತೆ ಹೋಟೆಲ್ ಉದ್ಯಮದಲ್ಲೂ ಸಹ ಅನೇಕರು ಬಡತನದಿಂದ ಬಳಲುತ್ತಿರುತ್ತಾರೆ. ಇಂದಿನ ದುಬಾರಿ ದುನಿಯಾದಲ್ಲಿ ಉನ್ನತ ಶಿಕ್ಷಣ ಅನ್ನುವುದು ಕಾರ್ಮಿಕ ವರ್ಗಕ್ಕೆ ಕನಸು ಎಂದೇ ಹೇಳಬಹುದಾಗಿದೆ. ಆದ್ದರಿಂದ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ಹೋಟೆಲ್ ಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರ ಮಕ್ಕಳಿಗಾಗಿ ಪ್ರತೀ ವರ್ಷ ಪ್ರೋತ್ಸಾಹ ನೀಡುತ್ತಾ ಅವರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಬಂದಿದ್ದೆ. ಈ ನಿಟ್ಟಿನಲ್ಲಿ ಈ ವರ್ಷವೂ ಸಹ ನೊಂದಾಯಿತ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಯಾವ ರೀತಿ ಸಲ್ಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Prostaha dhana for students 1

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ಪ್ರೋತ್ಸಾಹ ಧನ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ವಿಚಾರಕ್ಕೆ ಬಂದರೇ.

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಹೊಟೇಲ್ ಕಾರ್ಮಿಕರಾಗಿರಬೇಕು ಮತ್ತು ಏಪ್ರಿಲ್ 30, 2024ರ ಒಳಗಾಗಿ ಕಡ್ಡಾಯವಾಗಿ ಹೊಟೇಲ್ ಕಾರ್ಮಿಕ ಸಂಘದ ಐಡಿ ಕಾರ್ಡ್ ಹೊಂದಿರಬೇಕು.
  • ವಿದ್ಯಾರ್ಥಿಯು 2023-24 ನೆ ಸಾಲಿನಲ್ಲಿ SSLC ಅಥವಾ PUC ಮುಗಿಸಿರಬೇಕು.
  • 2023-24ನೇ ಸಾಲಿನ SSLC ಅಥವಾ ಪಿಯುಸಿಯಲ್ಲಿ ಕಡ್ಡಾಯವಾಗಿ ಕನಿಷ್ಠ 80% ಅಂಕ ಪಡೆದಿರಬೇಕು.
  • ಜೂನ್ 15 ರ ಒಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಅಂಕಪಟ್ಟಿಯನ್ನು ಅರ್ಜಿಯ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವುದು ವಿಧಾನ

  • 9035655406 ಅಥವಾ 9743539990 ಗೆ ವಾಟ್ಸಪ್ ಮಾಡುವ ಮೂಲಕ ಅರ್ಜಿ ಪಡೆದುಕೊಳ್ಳಬೇಕು.
  • ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿಸಿ.
  • ಒಂದು ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಮತ್ತು ಅಂಕ ಪ್ರತಿಗಳನ್ನು ಇರಿಸಿ.

ಎಲ್ಲಾ ದಾಖಲೆಗಳನ್ನು ಅನಫಾ ಗ್ರಾಂಡ್, ನಂ 1353 29 ನೇ ಮುಖ್ಯ ರಸ್ತೆ, ಉತ್ತರಹಳ್ಳಿ, ಪೂರ್ಣಪ್ರಜ್ಞಾ ಬಡಾವಣೆ ಬೆಂಗಳೂರು  560061, ಈ ವಿಳಾಸಕ್ಕೆ ಕಳುಹಿಸಿ ಕೊಡಿ. ಅರ್ಜಿಗಳನ್ನು ಪರಿಗಣಿಸಿ ಆಯ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!