ಮದುವೆಯೆಂದರೆ ಮೂರು ಗಂಟು, ನೂರು ವರ್ಷದ ಸಂಬಂಧ ಅಂತಾರೆ. ಆದರೆ ಇಲ್ಲಿ ನೂರು ದಿನ ಕೂಡ ಸಂಸಾರ ಸುಗಮವಾಗಿ ಸಾಗಲಿಲ್ಲ. ಕಲಬುರಗಿ ಮೂಲದ ಯುವಕ ಹಾಗೂ ಬನಹಳ್ಳಿಯ ಯುವತಿಯ ಹಸೆಮಣೆ ಸಂಬಂಧ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಜಾತಿ ಮುಚ್ಚಿಟ್ಟ ಆರೋಪ ಒಂದು ಕಡೆಯಾದರೆ, ಪತ್ನಿಯ (Marital Dispute) ಎಂಗೇಜ್‌ಮೆಂಟ್ ಸೀರೆಯನ್ನೇ ಪ್ರೇಯಸಿಗೆ ಉಡುಗೊರೆ ನೀಡಿದ ರೋಚಕ ಟ್ವಿಸ್ಟ್ ಈ ಬ್ರೇಕಪ್ ಸ್ಟೋರಿಗೆ ಸಿಕ್ಕಿದೆ.

Marital Dispute – ಮದುವೆಯಾದ ವಾರಕ್ಕೇ ಶುರುವಾಯ್ತು ಅಸಲಿ ಆಟ!
ಕಲಬುರಗಿ ಮೂಲದ ಅಂಬರೀಶ್ ಮತ್ತು ಬನಹಳ್ಳಿಯ ನಂದಿನಿ ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ಆದರೆ, “ಹೊಸ ಬಾಳಿನ ಹೊಸ್ತಿಲು” ತುಳಿದ ಒಂದು ವಾರಕ್ಕೇ ಇವರ ನಡುವೆ ಬಿರುಕು ಕಾಣಿಸಿಕೊಂಡಿದೆ. ಗಂಡ ಅಂಬರೀಶ್ ವಾದವೇನೆಂದರೆ, “ಹುಡುಗಿ ಕಡೆಯವರು ಅಸಲಿ ಜಾತಿಯನ್ನು ಮುಚ್ಚಿಟ್ಟು ಮೋಸ ಮಾಡಿದ್ದಾರೆ” ಎಂಬುದು. ಆದರೆ, ನಂದಿನಿಯ ಕಥೆಯೇ ಬೇರೆ! ತನ್ನ ಪತಿ ಮತ್ತು ಅತ್ತೆ ಸೇರಿ ಪ್ರತಿನಿತ್ಯ ಜಾತಿ ನಿಂದನೆ ಮಾಡುವುದಲ್ಲದೆ, ಕುಡಿದು ಬಂದು ದೈಹಿಕವಾಗಿ ಹಲ್ಲೆ ಮಾಡುತ್ತಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಪತ್ನಿಯ ಸೀರೆ ಪ್ರೇಯಸಿಗೆ ಗಿಫ್ಟ್? ಕಹಾನಿಗೆ ಬಿಗ್ ಟ್ವಿಸ್ಟ್!
ಈ ಪ್ರಕರಣಕ್ಕೆ ಈಗ ಅನಿರೀಕ್ಷಿತ ತಿರುವು ಸಿಕ್ಕಿದೆ. ಪತಿ ಅಂಬರೀಶ್‌ಗೆ ಮದುವೆಗೆ ಮುಂಚೆಯೇ ಬೇರೊಬ್ಬ ಯುವತಿಯೊಂದಿಗೆ ಅಫೇರ್ (Love Affair) ಇತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ನಂದಿನಿಯ ನಿಶ್ಚಿತಾರ್ಥಕ್ಕಾಗಿ (Engagement) ತಂದಿದ್ದ ಸೀರೆಯನ್ನು ಅಂಬರೀಶ್ ತನ್ನ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದಾನೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. “ನನ್ನ ಬಾವನ ಜೊತೆ ಮಾತನಾಡಿದರೂ ಅನುಮಾನ ಪಡುತ್ತಾರೆ. ಮನೆಯಿಂದ ಹೊರಹಾಕಿ (Marital Dispute) ಮಾನಸಿಕ ಹಿಂಸೆ ನೀಡುತ್ತಿದ್ದಾರೆ” – ನಂದಿನಿ, ಸಂತ್ರಸ್ತ ಪತ್ನಿ. Read this also : ಗುಂಟೂರು ಜಿಲ್ಲೆಯಲ್ಲಿ ಭೀಕರ ಕೊಲೆ, ಪತಿಯನ್ನು ಕೊಂದ ಕಿರಾತಕಿ, ಹೆಣದ ಪಕ್ಕದಲ್ಲೇ ಕುಳಿತು ಅಶ್ಲೀಲ ವಿಡಿಯೋ ವೀಕ್ಷಣೆ!

ಪೊಲೀಸ್ ಮೆಟ್ಟಿಲೇರಿದ ಸಂಸಾರದ ಜಗಳ
ಜಾತಿ ನಿಂದನೆ ಮತ್ತು ಹಲ್ಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರುಗಳು ದಾಖಲಾಗಿವೆ. ಯುವತಿ ಕುಟುಂಬದವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಂಬರೀಶ್ ದೂರಿದ್ದರೆ, ನಂದಿನಿ ಪರವಾಗಿ ವರದಕ್ಷಿಣೆ ಮತ್ತು ಜಾತಿ ನಿಂದನೆ ದೂರು ನೀಡಲಾಗಿದೆ. ಸದ್ಯಕ್ಕೆ ಪೊಲೀಸರು ಯುವತಿ (Marital Dispute) ಕುಟುಂಬದವರ ಮೇಲೂ FIR ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
