ಇಂದಿನ ಗಡಿಬಿಡಿಯ ಜೀವನದಲ್ಲಿ ಪ್ರತಿಯೊಂದೂ ಮನೆಬಾಗಿಲಿಗೇ ಬರುತ್ತಿದೆ. ಫುಡ್ ಇರಲಿ, ಬ್ಯೂಟಿ ಪಾರ್ಲರ್ ಇರಲಿ ಅಥವಾ ಮಸಾಜ್ ಇರಲಿ – ಒಂದು ಕ್ಲಿಕ್ ಮಾಡಿದರೆ ಸಾಕು, ಸೇವೆ ನೀಡುವವರು ನಮ್ಮ ಮನೆಗೆ ಹಾಜರಿರುತ್ತಾರೆ. ಆದರೆ, ಈ ‘ಹೋಮ್ ಸರ್ವಿಸ್’ ಅದೆಷ್ಟು ಸುರಕ್ಷಿತ? ಮುಂಬೈನಲ್ಲಿ (Mumbai) ನಡೆದ ಈ ಭೀಕರ ಘಟನೆ ಕೇಳಿದರೆ ನೀವು ಆನ್‌ಲೈನ್‌ನಲ್ಲಿ ಸೇವೆ ಬುಕ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸುವುದು ಖಂಡಿತ.

Mumbai – ಏನಿದು ಘಟನೆ?
ಮುಂಬೈನ ವಡಾಲಾದಲ್ಲಿ ಅರ್ಬನ್ ಕಂಪನಿ (Urban Company) ಮೂಲಕ ಮಸಾಜ್ ಸೇವೆ ಬುಕ್ ಮಾಡಿದ್ದ ಮಹಿಳೆಯೊಬ್ಬರ ಮೇಲೆ, ಅದೇ ಕಂಪನಿಯ ಸಿಬ್ಬಂದಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಕೇವಲ ಮಸಾಜ್ ಕ್ಯಾನ್ಸಲ್ ಮಾಡಿದ್ದಕ್ಕೋಸ್ಕರ ಮನೆಯೊಳಗೆ ನುಗ್ಗಿ ಗ್ರಾಹಕಿಯ ಜಡೆ ಹಿಡಿದು ಎಳೆದಾಡಿರುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಕ್ಯಾನ್ಸಲ್ ಮಾಡಿದ್ದೇ ತಪ್ಪಾಯಿತೇ?
ಭಕ್ತಿ ಪಾರ್ಕ್ ನಿವಾಸಿ, ಪಿಆರ್ ವೃತ್ತಿಯಲ್ಲಿರುವ ಶಹನಾಜ್ ವಾಹಿದ್ ಸಯ್ಯದ್ (46) ಈ ಕಹಿ ಅನುಭವ ಉಂಡವರು. ಭುಜದ ನೋವಿನ ಕಾರಣ ಅವರು ಮಸಾಜ್ ಬುಕ್ ಮಾಡಿದ್ದರು. ಮನೆಗೆ ಬಂದ ಮಸಾಜ್ ಸಿಬ್ಬಂದಿ ಅಶ್ವಿನಿ ಶಿವನಾಥ್ ವಾರ್ತಾಪಿ (32) ಎಂಬಾಕೆ ತಂದಿದ್ದ ‘ಪೋರ್ಟಬಲ್ ಮಸಾಜ್ ಬೆಡ್’ ಅತ್ಯಂತ ಕಳಪೆ ಸ್ಥಿತಿಯಲ್ಲಿತ್ತು. (Mumbai) ಇದನ್ನು ಗಮನಿಸಿದ ಶಹನಾಜ್, “ನನಗೆ ಈ ಸರ್ವಿಸ್ ಬೇಡ” ಎಂದು ಅಪಾಯಿಂಟ್‌ಮೆಂಟ್ ರದ್ದುಗೊಳಿಸಲು ನಿರ್ಧರಿಸಿದರು. Read this also : ರೀಲ್ಸ್ ಹುಚ್ಚಿಗೆ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ! ಅಸಲಿ ಕಾರಣ ಕೇಳಿದ್ರೆ ದಂಗಾಗ್ತೀರಾ!
ಇಷ್ಟಕ್ಕೇ ಕೆರಳಿದ ಅಶ್ವಿನಿ, “ಮನೆಯಲ್ಲಿ ಕುಳಿತು ಆಟ ಆಡುತ್ತಿದ್ದೀರಾ?” ಎಂದು ಕಿರುಚಾಡುತ್ತಾ ವಾಗ್ವಾದಕ್ಕಿಳಿದಿದ್ದಾಳೆ. ಮಾತಿಗೆ ಮಾತು ಬೆಳೆದು, ಅಶ್ವಿನಿ ತನ್ನ ಗ್ರಾಹಕಿಯ ಮೇಲೆಯೇ ಕೈ ಮಾಡಿದ್ದಾಳೆ.

ವೈರಲ್ ವೀಡಿಯೋದಲ್ಲಿ ಏನಿದೆ?
ಶಹನಾಜ್ ಅವರ 18 ವರ್ಷದ ಮಗ ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ವೀಡಿಯೋದಲ್ಲಿ ಇಬ್ಬರೂ ಮಹಿಳೆಯರು ಪರಸ್ಪರ ಕೂದಲು ಹಿಡಿದು ಎಳೆದಾಡುವುದು, ಹಾಸಿಗೆಯ ಮೇಲೆ ಬಿದ್ದು ಹೊಡೆದಾಡುವುದು ಕಾಣಿಸುತ್ತದೆ. “ನನ್ನ ತಾಯಿಯ ಮೇಲೆ ಹಲ್ಲೆ ಮಾಡಲು ನಿನಗೆಷ್ಟು ಧೈರ್ಯ? ನಿನ್ನ ವೃತ್ತಿಜೀವನ ಇಲ್ಲಿಗೆ ಮುಗಿಯಿತು” ಎಂದು ಮಗ (Mumbai) ಆಕ್ರೋಶ ವ್ಯಕ್ತಪಡಿಸುವುದು ವೀಡಿಯೋದಲ್ಲಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಕಾನೂನು ಕ್ರಮ ಮತ್ತು ಕಂಪನಿಯ ಪ್ರತಿಕ್ರಿಯೆ
ಘಟನೆಗೆ ಸಂಬಂಧಿಸಿದಂತೆ ಶಹನಾಜ್ ಅವರು ವಡಾಲಾ ಟ್ರಕ್ ಟರ್ಮಿನಲ್ (TT) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಅಶ್ವಿನಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರಂಭದಲ್ಲಿ ಮೌನ ವಹಿಸಿದ್ದ ಅರ್ಬನ್ ಕಂಪನಿ, ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದೆ. “ಹಲ್ಲೆ ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ” ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಗಮನಿಸಿ: ಆನ್‌ಲೈನ್ ಸೇವೆಗಳನ್ನು ಪಡೆಯುವಾಗ ಅಪರಿಚಿತರನ್ನು ಮನೆಗೆ ಕರೆಸಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಇಂತಹ ಅಹಿತಕರ ಘಟನೆಗಳು ನಡೆದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
