ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯರ ನಡುವಿನ ಕಲಹಗಳು ಮಿತಿಮೀರುತ್ತಿವೆ. ಸಣ್ಣಪುಟ್ಟ ಕಾರಣಕ್ಕೆ ಶುರುವಾಗುವ ಜಗಳಗಳು ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗುತ್ತಿರುವುದು ಆತಂಕಕಾರಿ ಸಂಗತಿ. ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಘಟನೆಯಂತೂ ಕೇಳಿದರೆ ಮೈ ನಡುಗುತ್ತದೆ. ರೀಲ್ಸ್ ಹುಚ್ಚು ಅದೆಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದೆ ಎಂದರೆ, ಪತ್ನಿಯೊಬ್ಬಳು ತನ್ನ ಪತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ!

Ghaziabad Wife Bites – ನಡೆದಿದ್ದೇನು? ಘಟನೆಯ ಹಿನ್ನೆಲೆ ಇಲ್ಲಿದೆ
ಗಾಜಿಯಾಬಾದ್ ಜಿಲ್ಲೆಯ ಮೋದಿ ನಗರದ ನಿವಾಸಿಗಳಾದ ವಿಪಿನ್ ಮತ್ತು ಇಶಾ ದಂಪತಿಗಳೇ ಈ ಕಥೆಯ ನಾಯಕ-ನಾಯಕಿ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಈ ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗಿದ್ದು ಇಶಾಳ ‘ಸೋಷಿಯಲ್ ಮೀಡಿಯಾ ಕ್ರೇಜ್’. ಇಶಾಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುವುದೆಂದರೆ ಎಲ್ಲಿಲ್ಲದ ಹುಚ್ಚು. ದಿನವಿಡೀ ಮೊಬೈಲ್ನಲ್ಲೇ ಮುಳುಗಿರುತ್ತಿದ್ದ ಆಕೆ, ಸಂಸಾರದ ಕಡೆಗೆ ಗಮನ ಕೊಡುತ್ತಿರಲಿಲ್ಲ.
ಆ ರಾತ್ರಿ ನಡೆದ ಆ ಭೀಕರ ಘಟನೆ:
ಕೆಲ ದಿನಗಳ ಹಿಂದೆ ವಿಪಿನ್ ಕೆಲಸ ಮುಗಿಸಿ ಮನೆಗೆ ಬಂದಾಗ, ಇಶಾ ಅಡುಗೆ ಮಾಡಿರಲಿಲ್ಲ. ರೀಲ್ಸ್ ಗೀಳಿನಲ್ಲಿ ಬಿದ್ದಿದ್ದ ಆಕೆ, ಗಂಡ ಬಂದರೂ ಲೆಕ್ಕಿಸದೆ ಜಗಳಕ್ಕೆ ಇಳಿದಿದ್ದಾಳೆ. ಅಂದು ಮನೆಯಲ್ಲಿ ವಿಪಿನ್ (Ghaziabad Wife Bites) ಪೋಷಕರೂ ಇದ್ದರು. ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಮಧ್ಯರಾತ್ರಿ ಅಡುಗೆ ಮನೆಯಿಂದ ವಿಪಿನ್ ಅವರ ಕಿರುಚಾಟ ಕೇಳಿಬಂದಿದೆ.
ಶಬ್ದ ಕೇಳಿ ಮನೆಯವರು ಮತ್ತು ನೆರೆಹೊರೆಯವರು ಓಡಿ ಬಂದು ನೋಡಿದಾಗ ದೃಶ್ಯ ಘೋರವಾಗಿತ್ತು. ವಿಪಿನ್ ಬಾಯಿಯಿಂದ ರಕ್ತ ಸುರಿಯುತ್ತಿತ್ತು, ಇಶಾ ಮುಖದಲ್ಲೂ ರಕ್ತದ ಕಲೆಗಳಿದ್ದವು. ಆಕೆ ತನ್ನ ಗಂಡನ ನಾಲಿಗೆಯನ್ನು ಹಲ್ಲಿನಿಂದ ಕಚ್ಚಿ ತುಂಡರಿಸಿ ಎಸೆದಿದ್ದಾಳೆ! “ನಾನೇ ಆತನ ನಾಲಿಗೆಯನ್ನು ಕಿತ್ತೆಸೆದಿದ್ದು” ಎಂದು ಆಕೆ ಹೇಳುತ್ತಿದ್ದರೆ ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.

ಆಸ್ಪತ್ರೆಗೆ ದಾಖಲು – ಪೊಲೀಸರ ಕ್ರಮ:
ತಕ್ಷಣವೇ ವಿಪಿನ್ ಪೋಷಕರು ತುಂಡಾದ ನಾಲಿಗೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಅತಿಯಾದ ರಕ್ತಸ್ರಾವದಿಂದ ವಿಪಿನ್ ಸ್ಥಿತಿ ಗಂಭೀರವಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಪಿನ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಇಶಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. Read this also : ಬಸ್ ನಿಲ್ಲಿಸಲಿಲ್ಲವೆಂದು ಚಾಲಕನ ಮೇಲೆ ಬುರ್ಖಾಧಾರಿ ಮಹಿಳೆಯಿಂದ ಭೀಕರ ಹಲ್ಲೆ! ವಿಡಿಯೋ ವೈರಲ್…!
ರೀಲ್ಸ್ ಹುಚ್ಚೋ ಅಥವಾ ದ್ವೇಷವೋ?
ವಿಪಿನ್ ಕುಟುಂಬದವರು ಹೇಳುವ ಪ್ರಕಾರ, ಇಶಾಗೆ ಈ ಮದುವೆ ಇಷ್ಟವಿರಲಿಲ್ಲ. ಹಾಗಾಗಿ ಆಕೆ ಪತಿಯೊಂದಿಗೆ ಸದಾ ಜಗಳವಾಡುತ್ತಿದ್ದಳು. “ಆಕೆ ಹೇಳುವಂತೆ ನಾವ್ಯಾರೂ ಆಕೆಗೆ ಕಿರುಕುಳ ನೀಡಿಲ್ಲ, ಕೇವಲ ರೀಲ್ಸ್ (Ghaziabad Wife Bites) ಮಾಡುವುದನ್ನು ಬಿಟ್ಟು ಸಂಸಾರದ ಕಡೆ ಗಮನ ಕೊಡು ಅಂದಿದ್ದೇ ದೊಡ್ಡ ತಪ್ಪಾಯ್ತು” ಎಂದು ವಿಪಿನ್ ಪೋಷಕರು ಕಣ್ಣೀರು ಹಾಕಿದ್ದಾರೆ.
ಒಟ್ಟಿನಲ್ಲಿ, ಕ್ಷಣಿಕ ಆವೇಶ ಮತ್ತು ಸೋಶಿಯಲ್ ಮೀಡಿಯಾ ಹುಚ್ಚು ಒಂದು ಸುಂದರ ಸಂಸಾರವನ್ನು ಬೀದಿಗೆ ತಂದಿದೆ. ಈ ಘಟನೆ ಈಗ ಇಡೀ ದೇಶಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
