ಸಮಾಜದಲ್ಲಿ ಗೌರವ ಹೋಗುತ್ತದೆ ಎಂಬ ಅಂಧಾಭಿಮಾನ ಮನುಷ್ಯನನ್ನು ಎಷ್ಟು ಕ್ರೂರನನ್ನಾಗಿ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದು, ಕೇವಲ ಒಂದು ನಿಮಿಷದ ಹಸುಗೂಸನ್ನು ಸ್ವಂತ ಅಜ್ಜಿಯೇ ಕುತ್ತಿಗೆ ಹಿಸುಕಿ (Honor Killing) ಕೊಂದಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Honor Killing – ಗೌರವದ ಹೆಸರಿನಲ್ಲಿ ನಡೆದ ಘೋರ ಅಪರಾಧ
ವೃತ್ತಿಯಲ್ಲಿ ಸ್ಟಾಫ್ ನರ್ಸ್ ಆಗಿರುವ ಯುವತಿಯೊಬ್ಬಳು ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಳು. ಕುಟುಂಬದ ಮರ್ಯಾದೆ ಕಾಪಾಡುವ ನೆಪದಲ್ಲಿ ಈ ವಿಷಯವನ್ನು ಅತ್ಯಂತ ಗುಟ್ಟಾಗಿ ಇಡಲಾಗಿತ್ತು. ಆಸ್ಪತ್ರೆಗೆ ಹೋದರೆ ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂಬ ಭಯದಿಂದ, ನರ್ಸ್ ಆಗಿದ್ದ ಯುವತಿ ಕಳೆದ 15 ದಿನಗಳ ಹಿಂದೆ ತನ್ನ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಆದರೆ, ಮಗು ಭೂಮಿಗೆ ಬಂದ ಕ್ಷಣವೇ ಆ ಮಗುವಿನ ಆಯುಷ್ಯ ಮುಗಿದುಹೋಗಿತ್ತು. ಹುಟ್ಟಿದ ಕೇವಲ ಒಂದೇ ನಿಮಿಷದಲ್ಲಿ ಮಗುವಿನ ಅಜ್ಜಿ, ಆ ಹಸುಗೂಸಿನ ಕುತ್ತಿಗೆ ಹಿಸುಕಿ ಪ್ರಾಣ ತೆಗೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. Read this also : ಸಾಲ ತೀರಿಸಲು ಹೆಂಡತಿಯೇ ಆಮಿಷ! 100ಕ್ಕೂ ಹೆಚ್ಚು ಜನರ ಹನಿಟ್ರ್ಯಾಪ್ ಮಾಡಿದ ದಂಪತಿ: ಬೆಚ್ಚಿಬೀಳಿಸುವ ಸತ್ಯ ಬಯಲು
ತಿಪ್ಪೆಗುಂಡಿಯೊಳಗೆ ಹೂತುಹಾಕಿದ ಮೃತದೇಹ
ಕೊಲೆಯ ನಂತರ ರಕ್ತಸಿಕ್ತವಾಗಿದ್ದ ಗಂಡು ಮಗುವಿನ ದೇಹವನ್ನು ಬ್ಯಾಗ್‌ನಲ್ಲಿ ತುಂಬಿದ ಕುಟುಂಬಸ್ಥರು, ಯಾರಿಗೂ ತಿಳಿಯದಂತೆ ಜನವಸತಿ ಇಲ್ಲದ ತಿಪ್ಪೆ ಗುಂಡಿಯೊಂದರಲ್ಲಿ ಹೂತು ಹಾಕಿದ್ದರು. ಆದರೆ, ಸುಳ್ಳು ಮತ್ತು ಅಪರಾಧ ಎಂದಿಗೂ ಅಡಗಿರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಯಿತು. ಸುಮಾರು 15 ದಿನಗಳ ನಂತರ (Honor Killing) ತಿಪ್ಪೆ ಗುಂಡಿಯ ಬಳಿ ಏನೋ ಅನುಮಾನಾಸ್ಪದವಾಗಿ ಹೂತಿಟ್ಟಿರುವುದು ಪಕ್ಕದ ಮನೆಯ ಯುವಕನ ಗಮನಕ್ಕೆ ಬಂದಿದೆ. ಆತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತನಿಖೆ ಚುರುಕುಗೊಳಿಸಿದ ಲಕ್ಕವಳ್ಳಿ ಪೊಲೀಸರು
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಲಕ್ಕವಳ್ಳಿ ಪೊಲೀಸರು, ತಿಪ್ಪೆ ಗುಂಡಿಯನ್ನು ಅಗೆದು ಮಗುವಿನ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಮಗುವಿನ ತಾಯಿ, (Honor Killing) ಆಕೆಯ ತಂದೆ-ತಾಯಿ ಹಾಗೂ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವೃತ್ತಿಯಲ್ಲಿ ಜೀವ ಉಳಿಸಬೇಕಾದ ನರ್ಸ್ ಒಬ್ಬಳು, ತನ್ನ ಹೆತ್ತ ಕಂದಮ್ಮನ ಜೀವ ತೆಗೆಯಲು ಮನೆಯವರಿಗೆ ಸಾಥ್ ನೀಡಿದ್ದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮರ್ಯಾದೆಗಿಂತ ಮನುಷ್ಯತ್ವ ದೊಡ್ಡದು ಎಂಬ ಸತ್ಯವನ್ನು ಮರೆತ ಈ ಕುಟುಂಬ ಇಂದು ಕಟಕಟೆಯಲ್ಲಿ ನಿಲ್ಲುವಂತಾಗಿದೆ.
