ಪ್ರೀತಿ ಎಂಬುದು ಕುರುಡು ಎನ್ನುತ್ತಾರೆ, ಆದರೆ ಆ ಪ್ರೀತಿಯೇ ಒಬ್ಬ ಯುವಕನನ್ನು ಸಾವಿನ ದವಡೆಗೆ ತಳ್ಳುವಷ್ಟು ಕ್ರೂರವಾಗಿ ಪರಿಣಮಿಸಿದ ಘಟನೆಯೊಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯಲ್ಲಿ ನಡೆದಿದೆ. ಪ್ರೇಯಸಿಯನ್ನು ಭೇಟಿಯಾಗಲು ಹೋದ ಮಧ್ಯಪ್ರದೇಶದ ಭೋಪಾಲ್ ಮೂಲದ 18 ವರ್ಷದ ಯುವಕನ ಮೇಲೆ ಅಮಾನುಷ ಹಲ್ಲೆ ನಡೆಸಿ, (Love Trap) ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

Love Trap – ಏನಿದು ಘಟನೆ?
ಭೋಪಾಲ್‌ನ ಕೋಲಾರ್ ನಿವಾಸಿ ಸೋನು (18) ಎಂಬ ಯುವಕ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಪುಲೋರೋ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸುಮಾರು 15 ದಿನಗಳ ಹಿಂದೆ ಆಕೆ ತನ್ನ ಮನೆಯನ್ನು ತೊರೆದು ಭೋಪಾಲ್‌ಗೆ ಬಂದು ಸೋನು ಜೊತೆ ಉಳಿದುಕೊಂಡಿದ್ದಳು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಆಕೆ ಮತ್ತೆ ರಾಜಸ್ಥಾನಕ್ಕೆ ಮರಳಿದ್ದಳು. ಕೆಲ ದಿನಗಳ ನಂತರ ಆ ಯುವತಿ ಸೋನುಗೆ ಫೋನ್ ಮಾಡಿ, ತನ್ನನ್ನು ಭೇಟಿಯಾಗಲು ರಾಜಸ್ಥಾನಕ್ಕೆ ಬರುವಂತೆ ಕರೆದಿದ್ದಳು. ಪ್ರೇಯಸಿಯ ಕರೆಯನ್ನೇ ನಂಬಿ ಸೋನು ಅಲ್ಲಿಗೆ ಹೋದವನೇ ಆಕೆಯ ಕುಟುಂಬಸ್ಥರ ಸಂಚಿಗೆ ಬಲಿಯಾಗಿದ್ದಾನೆ.
ಮೂರು ದಿನಗಳ ಕಾಲ ನರಕಯಾತನೆ
ಸೋನು ಗ್ರಾಮಕ್ಕೆ ತಲುಪುತ್ತಿದ್ದಂತೆ ಆಕೆಯ ಕುಟುಂಬಸ್ಥರು ಆತನನ್ನು ಅಪಹರಿಸಿ, ಮೂರು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು. ಈ ಅವಧಿಯಲ್ಲಿ ಸೋನು ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ, ವಿಕೃತಿಯ ಪರಮಾವಧಿ ಎಂಬಂತೆ ಬಿಯರ್ ಬಾಟಲಿಯಲ್ಲಿದ್ದ ಮೂತ್ರವನ್ನು ಬಲವಂತವಾಗಿ (Love Trap) ಆತನಿಗೆ ಕುಡಿಸಲಾಗಿದೆ. ಈ ಇಡೀ ಕೃತ್ಯವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. Read this also : ಪ್ರೀತಿಸಿ ಮದುವೆಯಾದವಳ ಮೇಲೆ ಅನುಮಾನ: ಪತ್ನಿಯ ಕತ್ತು ಹಿಸುಕಿ ಕೊಂದು ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟ ಪತಿ!
ವೈರಲ್ ವಿಡಿಯೋದಿಂದ ಹೊರಬಂದ ಸತ್ಯ
ಆರೋಪಿಗಳು ಸೋನುಗೆ ಮೂತ್ರ ಕುಡಿಸುತ್ತಿರುವ ಮತ್ತು ಆತನನ್ನು ಹಿಂಸಿಸುತ್ತಿರುವ ವಿಡಿಯೋವನ್ನು ಸೋನು ಕುಟುಂಬದವರಿಗೇ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ನೋಡಿ ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಭೋಪಾಲ್‌ನ ಕೋಲಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Love Trap) ಆಗಿದ್ದು, ಮನುಷ್ಯತ್ವ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಲು ಸಾಧ್ಯವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸರ ಕ್ರಮವೇನು?
ಘಟನೆಗೆ (Love Trap) ಸಂಬಂಧಿಸಿದಂತೆ ಭೋಪಾಲ್ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭೋಪಾಲ್‌ನ ಕೋಲಾರ್ ಇನ್ಸ್‌ಪೆಕ್ಟರ್ ಸಂಜಯ್ ಸೋನಿ ಈ ಬಗ್ಗೆ ಪ್ರತಿನಿಧಿಸಿ, “ವಿಶೇಷ ಪೊಲೀಸ್ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಸಂತ್ರಸ್ತ ಯುವಕನ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿತ್ತು. ಸದ್ಯ ಆರೋಪಿಗಳ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ಅಪಹರಣ, ಹಲ್ಲೆ ಮತ್ತು ಅಕ್ರಮ ಬಂಧನದ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಸರಿಯೇ?
ಪ್ರೀತಿ-ಪ್ರೇಮದ ವಿಷಯದಲ್ಲಿ ಏನೇ ಅಸಮಾಧಾನವಿದ್ದರೂ ಅದನ್ನು ಕಾನೂನುಬದ್ಧವಾಗಿ ಅಥವಾ ಪಂಚಾಯಿತಿ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ, ಇಂತಹ ಅಮಾನವೀಯ ಕೃತ್ಯಗಳನ್ನು ಎಸಗುವುದು ನಾಗರಿಕ ಸಮಾಜಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿದೆ. ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಕೃತಿ ಮೆರೆದ ಕಾಮುಕರಿಗೆ ಕಠಿಣ ಶಿಕ್ಷೆಯಾಗುವ ನಿರೀಕ್ಷೆಯಿದೆ.
