ಸಿನಿಮಾ ಕಥೆಯಂತೆ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಹಸೆಮಣೆ ಏರಿದ್ದ ಆ ಜೋಡಿಯ ಜೀವನ ಸುಖಮಯವಾಗಿರಬೇಕಿತ್ತು. ಆದರೆ, ಸಂಶಯ ಎಂಬ ಭೂತ ಅಂದದ ಸಂಸಾರದಲ್ಲಿ ವಿಷಗಾಳಿ ಬೀಸುವಂತೆ ಮಾಡಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ನಿಯ (Love Marriage) ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಭೀಕರವಾಗಿ ಕೊಲೆ ಮಾಡಿ, ಬಳಿಕ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಬೆಚ್ಚಿಬೀಳಿಸಿದೆ.

Love Marriage – ಪೊಲೀಸ್ ಠಾಣೆಗೆ ಬಂದು ಅತ್ತಿದ್ದ ಆರೋಪಿ!
ಕಳೆದ ಶನಿವಾರ ಬೆಳಿಗ್ಗೆ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಶಾಕ್ ಕಾದಿತ್ತು. 22 ವರ್ಷದ ಸಚಿನ್ ಎಂಬ ಯುವಕ ಅಳುತ್ತಾ ಠಾಣೆಯೊಳಗೆ ಬಂದಿದ್ದಾನೆ. ಪೊಲೀಸರು ಏನಾಯ್ತು ಎಂದು ವಿಚಾರಿಸುವಷ್ಟರಲ್ಲಿ, “ಸರ್.. ನಾನು ನನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದೇನೆ, ಆಕೆಯ ಶವ ಮನೆಯಲ್ಲಿ ಕಂಬಳಿಯಲ್ಲಿ ಸುತ್ತಿ ಬಿದ್ದಿದೆ” ಎಂದು ಹೇಳಿ ಕೈಮುಗಿದು ನಿಂತಿದ್ದಾನೆ. ಇದನ್ನು ಕೇಳಿ ಪೊಲೀಸರೇ ಒಂದು ಕ್ಷಣ ಸ್ತಬ್ಧರಾಗಿದ್ದಾರೆ.
ಏನಿದು ಘಟನೆ? ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿದ್ದು ಹೇಗೆ?
ಮೃತ ಮಹಿಳೆಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಸಚಿನ್ ಮತ್ತು ಶ್ವೇತಾ ಇಬ್ಬರೂ ಫತೇಪುರ್ ಜಿಲ್ಲೆಯ ಮೋಹನಪುರ ಗ್ರಾಮದವರು. ಪರಸ್ಪರ ಪ್ರೀತಿಸುತ್ತಿದ್ದ ಇವರು, ಮನೆಯವರ ಇಚ್ಛೆಗೆ ವಿರುದ್ಧವಾಗಿ ಕೋರ್ಟ್ ಮೂಲಕ ಮದುವೆಯಾಗಿದ್ದರು. ಮದುವೆಯಾದ ಹೊಸತರಲ್ಲಿ ಸೂರತ್‌ನಲ್ಲಿ ವಾಸವಿದ್ದ ಈ ಜೋಡಿ, (Love Marriage) ಒಂದು ತಿಂಗಳ ಹಿಂದೆಯಷ್ಟೇ ಕಾನ್ಪುರಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ಸಚಿನ್ ಆಟೋ ರಿಕ್ಷಾ ಓಡಿಸುತ್ತಿದ್ದ.
ಸಂಶಯಕ್ಕೆ ಕಾರಣವಾಗಿದ್ದ ಆ ಹಣದ ವರ್ಗಾವಣೆ!
ಸಚಿನ್‌ಗೆ ತನ್ನ ಪತ್ನಿ ಶ್ವೇತಾ ಮೇಲೆ ಮೊದಲಿನಿಂದಲೂ ಅನುಮಾನವಿತ್ತು. ಶ್ವೇತಾಳ ಬ್ಯಾಂಕ್ ಖಾತೆಗೆ ಆಗಾಗ್ಗೆ ಹಣ ಜಮಾ ಆಗುತ್ತಿತ್ತು. ಈ ಬಗ್ಗೆ ಕೇಳಿದಾಗಲೆಲ್ಲಾ “ನಮ್ಮ ಅಜ್ಜಿ ಕಳುಹಿಸುತ್ತಿದ್ದಾರೆ” ಎಂದು ಆಕೆ ಉತ್ತರಿಸುತ್ತಿದ್ದಳು. ಆದರೆ ಇದನ್ನು ನಂಬದ ಸಚಿನ್, ತಮ್ಮ ಮನೆಯ ಎದುರು ವಾಸವಾಗಿದ್ದ ವಿದ್ಯಾರ್ಥಿಗಳ ಜೊತೆ ಪತ್ನಿ ಸಂಪರ್ಕದಲ್ಲಿದ್ದಾಳೆ ಎಂದು ಶಂಕಿಸಿದ್ದ. Read this also : ಬೆಂಗಳೂರು (Bengaluru) : 6 ತಿಂಗಳಿನಿಂದ ಮನೆಗೆ ಬಾರದ ಪತಿ; ಮನನೊಂದು ಮಗಳೊಂದಿಗೆ ತಾಯಿ ಆತ್ಮ**ತ್ಯೆ!
ಪತಿಯ ‘ಪ್ಲ್ಯಾನ್’ಗೆ ಸಿಕ್ಕಿಬಿದ್ದ ಪತ್ನಿ?
ಪತ್ನಿಯ ಬಣ್ಣ ಬಯಲು ಮಾಡಲು ಸಚಿನ್ ಒಂದು ಉಪಾಯ ಮಾಡಿದ್ದ. “ನಾನು ಇಂದು ಸ್ನೇಹಿತರ ಜೊತೆ ಪಾರ್ಟಿಗೆ ಹೋಗುತ್ತಿದ್ದೇನೆ, ರಾತ್ರಿ ಮನೆಗೆ ಬರುವುದಿಲ್ಲ” ಎಂದು ಶ್ವೇತಾಗೆ ಸುಳ್ಳು ಹೇಳಿ ಹೊರಟಿದ್ದ. ಆದರೆ ಮಧ್ಯರಾತ್ರಿ (Love Marriage) ದಿಢೀರನೆ ಮನೆಗೆ ಬಂದಾಗ, ಶ್ವೇತಾ ನೆರೆಹೊರೆಯ ಇಬ್ಬರು ಯುವಕರೊಂದಿಗೆ ಇರುವುದನ್ನು ಕಂಡು ಸಚಿನ್ ರೊಚ್ಚಿಗೆದ್ದಿದ್ದಾನೆ.
ಕೂಡಲೇ ಈ ವಿಚಾರವಾಗಿ ಗಲಾಟೆ ನಡೆದು ಪೊಲೀಸರ ಬಳಿಯೂ ಹೋಗಿದ್ದರು. ಆಗ ಪೊಲೀಸರು ಇಬ್ಬರಿಗೂ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದರು. ಆದರೆ ಮನೆಗೆ ಬಂದ ಮೇಲೆ ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಸಚಿನ್ ಶ್ವೇತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ನಾಲ್ಕು ಗಂಟೆ ಅಲೆದಾಟ, ಕೊನೆಗೆ ಶರಣಾಗತಿ
ಕೊಲೆ ಮಾಡಿದ ಬಳಿಕ ಸಚಿನ್ ಸುಮಾರು 4 ಗಂಟೆಗಳ ಕಾಲ ನಗರದಲ್ಲಿ ದಿಕ್ಕು ತೋಚದೆ ಅಲೆದಾಡಿದ್ದಾನೆ. ಮೊದಲು ಪರಾರಿಯಾಗಲು ಯೋಚಿಸಿದರೂ, ನಂತರ ಪಶ್ಚಾತ್ತಾಪದಿಂದಲೋ ಅಥವಾ ಭಯದಿಂದಲೋ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ಸಚಿನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
