Sunday, January 18, 2026
HomeStateLocal News : ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ : ಬಿಇಒ ಕೃಷ್ಣಕುಮಾರಿ

Local News : ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ : ಬಿಇಒ ಕೃಷ್ಣಕುಮಾರಿ

ವಿದ್ಯಾರ್ಥಿಗಳ ಮೆದುಳಿಗೆ ಜ್ಞಾನ ತುಂಬುವ ವಿಶಿಷ್ಟ ಕಲಿಕಾ ಪದ್ಧತಿಯೇ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬವಾಗಿದ್ದು, ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಿಎಂಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ (Local News) ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತಾಡಿದರು.

Local News: Students actively engaging in activity-based learning during a cluster-level Learning Festival at a PM SHRI government school Gudibande

Local News – ಏನಿದು ಕಲಿಕಾ ಹಬ್ಬ? ಇದರ ಉದ್ದೇಶವೇನು?

ವಿದ್ಯಾರ್ಥಿಗಳು ನಾವೀನ್ಯತೆಯಿಂದ ಯೋಚಿಸಿ ತಮ್ಮ ಸಾಮರ್ಥ್ಯವನ್ನು ಭದ್ರಗೊಳಿಸಿಕೊಳ್ಳುವುದು ಈ ಹಬ್ಬದ ಉದ್ದೇಶವಾಗಿದೆ. ಕಲಿಕಾ ಹಬ್ಬದಲ್ಲಿ ಭಾಗವಹಿಸುವುದೇ ಮುಖ್ಯ, ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಗೆಲ್ಲುವ ಛಲವನ್ನು ಬೆಳೆಸಿಕೊಳ್ಳುವುದು ಕಲಿಕೆಯ ಭಾಗವಾಗಿದೆ. ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಈ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸುತ್ತಿದೆ. ಪುಸ್ತಕದ ಹೊರೆಯನ್ನು ಕಡಿಮೆ ಮಾಡಿ, ಚಟುವಟಿಕೆಗಳ ಮೂಲಕ ಮೂಲ ಶಿಕ್ಷಣ ಮತ್ತು ಸಂಖ್ಯಾ ಗಣಿತವನ್ನು ಸುಲಭವಾಗಿ ಕಲಿಸುವುದು ಇದರ ಗುರಿ ಎಂದರು. Read this also : UPI ಮೂಲಕ ತಪ್ಪಾಗಿ ಹಣ ವರ್ಗಾವಣೆಯಾಗಿದೆಯೇ? ಚಿಂತಿಸಬೇಡಿ, ನಿಮ್ಮ ಹಣ ಮರಳಿ ಪಡೆಯಲು ಹೀಗೆ ಮಾಡಿ..!

ಮಕ್ಕಳಲ್ಲಿನ ಪ್ರತಿಭೆ ಪ್ರೋತ್ಸಾಹಿಸಲು ಸಲಹೆ

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಹಿಂದಿನ ಕಾಲದಲ್ಲಿ ನಾವುಗಳು ಧಾರ್ಮಿಕ ಸಂಪ್ರದಾಯಗಳ ಹಬ್ಬಗಳನ್ನು ಮಾತ್ರ ಕಾಣುತ್ತಿದ್ದೆವು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಕಲಿಕಾ ಹಬ್ಬವನ್ನು ಆಯೋಜಿಸಿರುವುದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿದೆ. (Local News) ಸತತ ಪ್ರಯತ್ನದಿಂದ ಮಾತ್ರ ನಾವು ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಪ್ರಯತ್ನದ ಮೂಲಕ ಸಾಧನೆ ಮಾಡಬೇಕಿದೆ. ಇನ್ನೂ ಶಿಕ್ಷಕರಿಗೆ ಮಕ್ಕಳೇ ದೇವರುಗಳು, ಮಕ್ಕಳು ಚೆನ್ನಾಗಿದ್ದರೇ ನಾವು ಚೆನ್ನಾಗಿರುತ್ತೇವೆ. ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವಂತಹ ಈ ರೀತಿಯ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವಂತೆ ಶಿಕ್ಷಕರೂ ಹಾಗೂ ಪೋಷಕರು ಸಹಕರಿಸಬೇಕು ಎಂದರು.

Local News: Students actively engaging in activity-based learning during a cluster-level Learning Festival at a PM SHRI government school Gudibande

ಕಾರ್ಯಕ್ರಮದಲ್ಲಿದ್ದ ಗಣ್ಯರು

ಕಾರ್ಯಕ್ರಮದಲ್ಲಿ (Local News) ಪಪಂ ಸದಸ್ಯ ಅಂಬರೀಶ್ ಮಕ್ಕಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಈ ಸಮಯದಲ್ಲಿ ಕ್ಲಸ್ಟರ್‍ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಬಿ.ಆರ್.ಸಿ ಸಂಯೋಜಕ ರಾಘವೇಂದ್ರ, ಶಿಕ್ಷಕರ ಸಂಘದ ಶ್ರೀರಾಮಪ್ಪ, ಶ್ರೀರಾಮರೆಡ್ಡಿ, ಇಸಿಒಗಳಾದ ಶ್ರೀನಿವಾಸ್, ನಂಜುಂಡಪ್ಪ, ಬಿಆರ್‌ಪಿ ಭಾರತಿ, ಚಂದ್ರಶೇಖರ್‍, ಅನಿತಾ, ಶಾಲೆಯ ಮುಖ್ಯ ಶಿಕ್ಷಕ ಶಂಕರ್‍ ಸೇರಿದಂತೆ ಹಲವರು ಇದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular