HomeStateAmarashilpi Jakanachari : ಭಾರತದ ಶಿಲ್ಪಕಲಾ ಪರಂಪರೆಗೆ ಜಕಣಾಚಾರಿಯವರ ಕೊಡುಗೆ ಅಪಾರ : ಹರ್ಷ

Amarashilpi Jakanachari : ಭಾರತದ ಶಿಲ್ಪಕಲಾ ಪರಂಪರೆಗೆ ಜಕಣಾಚಾರಿಯವರ ಕೊಡುಗೆ ಅಪಾರ : ಹರ್ಷ

ಭಾರತದ ಶಿಲ್ಪಕಲೆಗೆ ಜಕಣಾಚಾರಿ ಅವರು ನೀಡಿದ ಕೊಡುಗೆ ಅಳಿಸಲಾಗದ್ದು. ಕಲ್ಲಿಗೆ ಜೀವ ತುಂಬಿದ ಅವರ ಅಪ್ರತಿಮ ಕಲಾ ನೈಪುಣ್ಯತೆಯೇ ನಮ್ಮ ಇತಿಹಾಸದ ಹೆಮ್ಮೆ. ಈ ಮಹಾನ್ ಶಿಲ್ಪಿಯ ಸಾಧನೆ ಸದಾ ಕಾಲ ನಮಗೆ ಸ್ಫೂರ್ತಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಹರ್ಷ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಮರಶಿಲ್ಪಿ (Amarashilpi Jakanachari) ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿರು.

Officials and community leaders attending Amarashilpi Jakanachari memorial event at Gudibande, Chikkaballapur district

Amarashilpi Jakanachari – ಜಕಣಾಚಾರಿಯವರ ಅಪ್ರತಿಮ ತ್ಯಾಗ ಮತ್ತು ವೃತ್ತಿನಿಷ್ಠೆ

ಭಾರತೀಯ ಶಿಲ್ಪಕಲೆಯ ಉನ್ನತ ಪರಂಪರೆಯನ್ನು ವಿವರಿಸುತ್ತಾ, ಭಾರತವು ಜ್ಞಾನ, ಕಲೆ ಮತ್ತು ಸಂಸ್ಕಾರಗಳ ತವರೂರು. ನಮ್ಮ ದೇಶದಲ್ಲಿ ಶಿಲ್ಪಕಲೆಯು ನಾಲ್ಕನೇ ಶತಮಾನದಲ್ಲಿಯೇ ಅಭೂತಪೂರ್ವ ಬೆಳವಣಿಗೆ ಕಂಡಿತ್ತು. ಜಕಣಾಚಾರಿ ಮತ್ತು ಅವರ ಪುತ್ರ ಡಂಕಣಾಚಾರ್ಯರ ನಡುವಿನ ಐತಿಹಾಸಿಕ ಪ್ರಸಂಗವನ್ನು ನೆನಪಿಸಿದ ಅವರು, ಬೇಲೂರಿನ ಶಿಲ್ಪಕಲೆಯ ಕೆಲಸದ ಸಮಯದಲ್ಲಿ ಶಿಲ್ಪದಲ್ಲಿನ ದೋಷವನ್ನು ಗುರುತಿಸಿದಾಗ, ಜಕಣಾಚಾರ್ಯರು ತಮ್ಮ ಮಾತಿನಂತೆ ಬಲಗೈಯನ್ನೇ ಕತ್ತರಿಸಿಕೊಂಡರು. ಅವರ ವೃತ್ತಿ ನಿಷ್ಠೆ ಮತ್ತು ತ್ಯಾಗ ಅಪ್ರತಿಮವಾದುದು. ತಂದೆ-ಮಗನ ಈ ಬಾಂಧವ್ಯ ಮತ್ತು ಕಲೆಯ ಮೇಲಿನ ಗೌರವ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.

Amarashilpi Jakanachari – ಸಮಾಜದಲ್ಲಿ ಒಗ್ಗಟ್ಟಿನ ಮಂತ್ರ

ಬಳಿಕ ವಿಶ್ವ ಕರ್ಮ ಸಮುದಾಯದ ವೀರಾಚಾರಿ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಅಗತ್ಯತೆಯನ್ನು ಪ್ರತಿಪಾದಿಸಿದರು. ನಮ್ಮ ಕುಲ ಬಾಂಧವರಲ್ಲಿ ಪರಸ್ಪರ ಸಹಕಾರ ಮತ್ತು ಒಗ್ಗಟ್ಟು ಇರುವುದು ಬಹಳ ಮುಖ್ಯ. ಹಿರಿಯರು ನಮಗಾಗಿ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ, ಅದನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಜಕಣಾಚಾರಿ ಹಾಗೂ ನಮ್ಮ ಪೂರ್ವಜರು ಈ ಸಮಾಜಕ್ಕೆ ಒಂದು ಗೌರವಯುತ ಹೆಸರನ್ನು ತಂದುಕೊಟ್ಟಿದ್ದಾರೆ. ಅಂತಹ ಮಹಾನ್ ಚೇತನಗಳನ್ನು ಸ್ಮರಿಸುವುದು ಮತ್ತು ಅವರ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. Read this also : ನಿಮ್ಮ EPF UAN ಸಂಖ್ಯೆ ಮರೆತುಹೋಗಿದೆಯೇ? ಚಿಂತಿಸಬೇಡಿ, ಮೊಬೈಲ್‌ನಲ್ಲೇ ಸುಲಭವಾಗಿ ಪಡೆಯಲು ಇಲ್ಲಿದೆ ಸಿಂಪಲ್ ಸ್ಟೆಪ್ಸ್!

Officials and community leaders attending Amarashilpi Jakanachari memorial event at Gudibande, Chikkaballapur district

Amarashilpi Jakanachari – ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಈ ಸಮಯದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಶಿರಸ್ತೇದಾರ್‍ ನಟರಾಜ್, ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ಕೆಡಿಪಿ ಸದಸ್ಯ ರಿಯಾಜ್ ಪಾಷ, ಸಮುದಾಯದ ಬ್ರಹ್ಮಾಚಾರಿ ಸೇರಿದಂತೆ ಹಲವರು ಇದ್ದರು.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular