“ಪ್ರೀತಿ ಅಂದ್ರೆ ಪ್ರಾಣ ಕೊಡೋರು ಇದ್ದಾರೆ, ಆದ್ರೆ ಅದೇ ಪ್ರೀತಿಯ ಹೆಸರಲ್ಲಿ ನಂಬಿದವರ ಪ್ರಾಣ ಹಿಂಡಿ, ಹಣ ದೋಚುವ ಕಿರಾತಕರು ಕೂಡ ಇದ್ದಾರೆ.” ಬೆಂಗಳೂರಿನಲ್ಲಿ ಇಂತದ್ದೇ ಒಂದು ಬೆಚ್ಚಿಬೀಳಿಸುವ ವಂಚನೆಯ ಜಾಲ ಬಯಲಾಗಿದೆ. ಮದುವೆಯಾಗಿದ್ದರೂ ಆ ವಿಷಯ ಮುಚ್ಚಿಟ್ಟು, ಪ್ರೀತಿಯ (Bengaluru Love Scam) ನಾಟಕವಾಡಿ ಯುವತಿಯೊಬ್ಬಳ ಬಾಳನ್ನೇ ಕತ್ತಲೆ ಮಾಡಿದ ‘ರೋಮಿಯೋ’ ಶುಭಾಂಶು ಶುಕ್ಲಾ ಈಗ ಕಂಬಿ ಎಣಿಸುತ್ತಿದ್ದಾನೆ.

Bengaluru Love Scam – ವಂಚನೆಯ ಬಲೆ ಹೆಣೆದಿದ್ದು ಹೇಗೆ?
ಬೆಂಗಳೂರಿನ ಟಿ.ದಾಸರಹಳ್ಳಿ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡ ಶುಭಾಂಶು ಶುಕ್ಲಾ, ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದನು. ಪೋಷಕರಿಗೆ “ಕೆಲಸದ ಮೇಲೆ ಮುಂಬೈಗೆ ಹೋಗುತ್ತಿದ್ದೇವೆ” ಎಂದು ಸುಳ್ಳು ಹೇಳಿಸಿ, ಬೆಂಗಳೂರಿನ ಫ್ಲ್ಯಾಟ್‌ವೊಂದರಲ್ಲಿ ಆಕೆಯೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದನು. ಆದರೆ ಈತನ ಅಸಲಿ ಉದ್ದೇಶ ಪ್ರೀತಿಯಲ್ಲ, ಬದಲಿಗೆ ಹಣದ ದೋಚುವಿಕೆಯಾಗಿತ್ತು.
₹37 ಲಕ್ಷ ಹಣ, ಅರ್ಧ ಕೆಜಿ ಚಿನ್ನದ ಲೂಟಿ!
ಸಂತ್ರಸ್ತ ಯುವತಿಯ ನಂಬಿಕೆಯನ್ನು ಅಸ್ತ್ರವಾಗಿಸಿಕೊಂಡ ಈತ, ಆಕೆಯಿಂದ ಬರೋಬ್ಬರಿ 37 ಲಕ್ಷ ರೂಪಾಯಿ ಹಣವನ್ನು ಕಬಳಿಸಿದ್ದಾನೆ. ಅಷ್ಟೇ ಅಲ್ಲದೆ, ಯುವತಿಯ ಕುಟುಂಬಸ್ಥರ ಜೊತೆಗೂ ಸಲಿಗೆ ಬೆಳೆಸಿದ್ದ ಈತ, ಮನೆಯಲ್ಲಿದ್ದ 559 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ ಎಂಬ ಗಂಭೀರ (Bengaluru Love Scam) ಆರೋಪ ಕೇಳಿಬಂದಿದೆ.
ಸಿಕ್ಕಿಬಿದ್ದಾಗ ಆತ್ಮಹತ್ಯೆ ನಾಟಕ!
ಲಿವ್-ಇನ್‌ನಲ್ಲಿದ್ದಾಗಲೇ ಶುಭಾಂಶುಗೆ ಮದುವೆಯಾಗಿರುವ ವಿಷಯ ಯುವತಿಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ “ನಾನು ಡಿವೋರ್ಸ್ ಕೊಡುತ್ತೇನೆ” ಎಂದು ನಂಬಿಸಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ದೂರು ನೀಡಲು ಮುಂದಾದಾಗಲೆಲ್ಲಾ, “ನೀನು ಪೊಲೀಸರ ಹತ್ತಿರ ಹೋದರೆ ನಾನು ಸಾಯುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದನು. ಒಮ್ಮೆ ಕೈ ಕುಯ್ದುಕೊಂಡು (Bengaluru Love Scam) ಆತ್ಮ***ಹತ್ಯೆ ನಾಟಕವಾಡಿದ್ದರಿಂದ ಹೆದರಿದ ಯುವತಿಯೇ ಆತನನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿದ್ದರು. Read this also : ಮಸಾಜ್ ಪಾರ್ಲರ್ ಕೆಲಸ ಬೇಡ ಅಂದ್ರೂ ಕೇಳಲಿಲ್ಲ ಅಂತ ಹೆಂಡ್ತಿಯ ಕುತ್ತಿಗೆ ಸೀಳಿದ ಗಂಡ!

ಮೊಬೈಲ್ ಚೆಕ್ ಮಾಡಿದಾಗ ಬಯಲಾಯ್ತು 17ರ ಅಪ್ರಾಪ್ತೆಯ ಜಾಲ!
ಯುವತಿ ಒಮ್ಮೆ ಈತನ ಮೊಬೈಲ್ ಚೆಕ್ ಮಾಡಿದಾಗ ಇವನ ನಿಜವಾದ ವಂಚಕ ರೂಪ ಬಯಲಾಗಿದೆ. ಈತ ಕೇವಲ ಈಕೆಯನ್ನಷ್ಟೇ ಅಲ್ಲದೆ, ಹಲವು ಯುವತಿಯರಿಗೆ ಮೋಸ ಮಾಡಿದ್ದನು. ಅಚ್ಚರಿಯೆಂದರೆ 17 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೂ ಸಂಪರ್ಕದಲ್ಲಿದ್ದು, ಆಕೆಯಿಂದ 50 ಲಕ್ಷ ರೂಪಾಯಿ ಹಣ ಪಡೆಯಲು ಸ್ಕೆಚ್ ಹಾಕಿದ್ದನು. ಇದನ್ನು ತಡೆದಿದ್ದಕ್ಕೆ ನಡುರಸ್ತೆಯಲ್ಲೇ ಸಂತ್ರಸ್ತೆಯ ಮೇಲೆ ಹಲ್ಲೆ (Bengaluru Love Scam) ನಡೆಸಿದ್ದನು.
ಹಲ್ಲೆಯ ನಂತರ ಹೇಗೋ ತಪ್ಪಿಸಿಕೊಂಡ ಯುವತಿ, ವಕೀಲರ ಸಹಾಯದಿಂದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಶುಭಾಂಶು ಶುಕ್ಲಾನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
