Monday, January 19, 2026
HomeStateBengaluru Crime : ಮಸಾಜ್ ಪಾರ್ಲರ್ ಕೆಲಸ ಬೇಡ ಅಂದ್ರೂ ಕೇಳಲಿಲ್ಲ ಅಂತ ಹೆಂಡ್ತಿಯ ಕುತ್ತಿಗೆ...

Bengaluru Crime : ಮಸಾಜ್ ಪಾರ್ಲರ್ ಕೆಲಸ ಬೇಡ ಅಂದ್ರೂ ಕೇಳಲಿಲ್ಲ ಅಂತ ಹೆಂಡ್ತಿಯ ಕುತ್ತಿಗೆ ಸೀಳಿದ ಗಂಡ!

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕ್ರೈಂ ಸುದ್ದಿಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಕ್ಷಣಿಕ ಕೋಪಕ್ಕೆ ಬಲಿಯಾಗುತ್ತಿರುವ ಸಂಸಾರಗಳ ಸಂಖ್ಯೆ ಕೇಳಿದರೆ ಮೈ ನಡುಗುತ್ತೆ. “ನನ್ನ ಹೆಂಡ್ತಿ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡೋದು ನಂಗೆ ಇಷ್ಟ ಇಲ್ಲ” ಅಂತ ಶುರುವಾದ ಜಗಳ, ಕೊನೆಗೆ ಆಕೆಯ ಪ್ರಾಣವನ್ನೇ ಬಲಿಪಡೆಯುವ ಹಂತಕ್ಕೆ ಹೋಗಿದೆ. ಪತಿಯೇ ತನ್ನ ಪತ್ನಿಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru Crime) ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Bengaluru crime scene where husband murdered wife over massage parlour job dispute

Bengaluru Crime – ಅಷ್ಟಕ್ಕೂ ನಡೆದಿದ್ದೇನು?

ಮೃತ ದುರ್ದೈವಿ ಮಹಿಳೆಯನ್ನು 39 ವರ್ಷದ ಆಯೇಷಾ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈಕೆಯನ್ನು ಹತ್ಯೆಗೈದ ಆರೋಪಿ ಆಕೆಯ ಗಂಡ ಸೈಯ್ಯದ್ ಜಬಿ. ಇವರಿಬ್ಬರು ಬೆಂಗಳೂರಿನ ಅಗ್ರಹಾರ ಲೇಔಟ್‌ನಲ್ಲಿ ವಾಸವಾಗಿದ್ದರು. ಡಿಸೆಂಬರ್ 26ರ ರಾತ್ರಿ (ಶುಕ್ರವಾರ) ಕೆಲಸದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜೋರು ಜಗಳ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿದಾಗ, ಕೋಪದ ಕೈಗೆ ಬುದ್ಧಿ ಕೊಟ್ಟ ಸೈಯ್ಯದ್ ಜಬಿ, ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಆಯೇಷಾಳ ಕುತ್ತಿಗೆ ಸೀಳಿ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ.

ಮಸಾಜ್ ಪಾರ್ಲರ್ ಕೆಲಸವೇ ಮುಳುವಾಯ್ತಾ?

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವ ಪ್ರಕಾರ, ಆಯೇಷಾ ಸಿದ್ದಿಕಿ ಸ್ಥಳೀಯ ಮಸಾಜ್ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಪತ್ನಿ ಈ ಕೆಲಸ ಮಾಡುವುದು ಪತಿ ಸೈಯ್ಯದ್‌ಗೆ ಇಷ್ಟವಿರಲಿಲ್ಲವಂತೆ. “ನೀನು ಅಲ್ಲಿ ಕೆಲಸಕ್ಕೆ ಹೋಗಬೇಡ, ಆ ಕೆಲಸ ಬಿಟ್ಟುಬಿಡು” ಎಂದು ಆತ ಪದೇ ಪದೇ ತಾಕೀತು (Bengaluru Crime) ಮಾಡುತ್ತಿದ್ದನಂತೆ.

ಅಲ್ಲದೇ, ಈ ಕೆಲಸದ ವಿಚಾರವಾಗಿಯೇ ಆಕೆಯ ನಡತೆಯ ಮೇಲೆ ಸೈಯ್ಯದ್ ಅನುಮಾನ ಪಡುತ್ತಿದ್ದನು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ದಿನನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಂತಿಮವಾಗಿ ಇದೇ ಅನುಮಾನ ಎಂಬ ಭೂತ ಆಯೇಷಾಳ ಪ್ರಾಣ ತೆಗೆದಿದೆ.

Bengaluru crime scene where husband murdered wife over massage parlour job dispute

3 ತಿಂಗಳ ಹಿಂದಷ್ಟೇ ಮದುವೆ, ಇದು ಆಯೇಷಾಗೆ 3ನೇ ಮದುವೆ!

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಆಯೇಷಾ ಮತ್ತು ಸೈಯ್ಯದ್ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ಮೃತ ಆಯೇಷಾ ಸಿದ್ದಿಕಿಗೆ ಇದು ಮೂರನೇ ಮದುವೆ. ಆರೋಪಿ ಸೈಯ್ಯದ್ ಜಬಿಗೆ ಇದು ಎರಡನೇ ಮದುವೆ. ಮೂರು ತಿಂಗಳ ಹಿಂದಷ್ಟೇ ಹೊಸ ಜೀವನ ಆರಂಭಿಸಿದ್ದ ಈ ಜೋಡಿಯ ನಡುವೆ, ಆರಂಭದ ದಿನಗಳಿಂದಲೇ ಬಿರುಕು ಮೂಡಿತ್ತು. ಅನುಮಾನ ಮತ್ತು ಮನಸ್ತಾಪಗಳು ಹೆಚ್ಚಾಗಿ, ಕೊನೆಗೆ ಇದು ಹತ್ಯೆಯ (Bengaluru Crime) ಹಂತಕ್ಕೆ ತಲುಪಿದೆ. Read this also : ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ದುರಂತ ಸಾವು: 58 ದಿನಗಳ ಸಂಸಾರದಲ್ಲಿ ಅಸಲಿಗೆ ನಡೆದಿದ್ದೇನು?

ಕೊಲೆ ಮಾಡಿ ನೇರವಾಗಿ ಠಾಣೆಗೆ ಹೋದ ಪತಿ

ಪತ್ನಿಯ ಕುತ್ತಿಗೆ ಸೀಳಿ ಕೊಂದ ನಂತರ, ಆರೋಪಿ ಸೈಯ್ಯದ್ ಜಬಿ ಅಲ್ಲಿಂದ ಪರಾರಿಯಾಗುವ ಬದಲು, ನೇರವಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು (Bengaluru Crime) ಮುಂದಿನ ತನಿಖೆ ನಡೆಸುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular