Sunday, December 21, 2025
HomeStateLocal News : ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅರಳಲಿ; ಪೋಷಕರಿಗೆ ಬಿ.ಜಿ. ಶ್ರೀನಿವಾಸ್ ಜಿನ್ನಿ ಕರೆ...

Local News : ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅರಳಲಿ; ಪೋಷಕರಿಗೆ ಬಿ.ಜಿ. ಶ್ರೀನಿವಾಸ್ ಜಿನ್ನಿ ಕರೆ | ಚಿಣ್ಣರ ಕಲಾ ಉತ್ಸವಕ್ಕೆ ಅದ್ದೂರಿ ಚಾಲನೆ

“ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಅದ್ಭುತ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ, ನೀರೆರೆದು ಪೋಷಿಸುವ ಜವಾಬ್ದಾರಿ ಪೋಷಕರದ್ದು. ಮಗು ಸೋಲಲಿ ಅಥವಾ ಗೆಲ್ಲಲಿ, ವೇದಿಕೆ ಹತ್ತಲು ನಾವು ಪ್ರೋತ್ಸಾಹ ನೀಡಬೇಕು,” ಎಂದು ಯುವ ಮುಖಂಡರು ಹಾಗೂ ಮಣಿಕಂಠ ಪ್ರಿಂಟರ್ಸ್‌ನ ಮಾಲೀಕರಾದ ಬಿ.ಜಿ. ಶ್ರೀನಿವಾಸ್ ಜಿನ್ನಿ ಕರೆ ನೀಡಿದರು.

Chinnara Kala Utsava 2025 inauguration at Bagepalli as B.G. Srinivas Jinni encourages parents to nurture children’s hidden talents - Local News

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಪಟ್ಟಣದ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀ ಟಿವಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಚಿಣ್ಣರ ಕಲಾ ಉತ್ಸವ 2025-2026’ ಕಾರ್ಯಕ್ರಮವನ್ನು (Local News) ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

Local News – ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ

ಮಣಿಕಂಠ ಪ್ರಿಂಟರ್ಸ್, ದಿ ಎಕ್ಸ್‌ಪರ್ಟ್ ಪಿಯು ಕಾಲೇಜ್ ಮತ್ತು ಲಕ್ಷ್ಮೀ ಟಿವಿ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀನಿವಾಸ್ ಜಿನ್ನಿ ಅವರು, “ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಕಲೆ ಹೊರಬರಲು ಇಂತಹ ವೇದಿಕೆಗಳು ಬಹಳ ಅವಶ್ಯಕ. ನೃತ್ಯ, ಹಾಡು, ಅಥವಾ ಅಭಿನಯ ಹೀಗೆ ಮಕ್ಕಳಲ್ಲಿ ಅಡಕವಾಗಿರುವ ಕಲೆಯನ್ನು ಪ್ರದರ್ಶಿಸಲು ‘ಚಿಣ್ಣರ ಕಲಾ ಉತ್ಸವ’ ಉತ್ತಮ ಅವಕಾಶವನ್ನು ಕಲ್ಪಿಸಿದೆ. ಇದರಿಂದ ಮಕ್ಕಳಲ್ಲಿನ ವೇದಿಕೆಯ ಭಯ (Stage Fear) ಹೋಗಲಾಡಿಸಲು ಮತ್ತು ಅವರಲ್ಲಿ ನಾಯಕತ್ವದ ಗುಣ ಹಾಗೂ ಧೈರ್ಯವನ್ನು ಬೆಳೆಸಲು ಸಾಧ್ಯವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಪ್ರತಿ ಭಾನುವಾರ ಕಲಾ ಹಬ್ಬ

ಇಂದಿನಿಂದ ಪ್ರಾರಂಭವಾಗಿರುವ ಈ ಚಿಣ್ಣರ ಕಲಾ ಉತ್ಸವವು ಪ್ರತಿ ಭಾನುವಾರ ನಡೆಯಲಿದೆ. ಇದರಲ್ಲಿ ಮಕ್ಕಳು ನೃತ್ಯ, ಏಕಪಾತ್ರಾಭಿನಯ, ರಸಪ್ರಶ್ನೆ (ಹೇಳು-ಕೇಳು), ಭರತನಾಟ್ಯ ಹಾಗೂ ಗಾಯನ ಸೇರಿದಂತೆ ಯಾವುದೇ ಕಲಾ ಪ್ರಕಾರವನ್ನಾದರೂ ಪ್ರದರ್ಶಿಸಬಹುದು. ಪೋಷಕರು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಆಯೋಜಕರು (Local News) ತಿಳಿಸಿದ್ದಾರೆ. Read this also : ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 311 ಹುದ್ದೆಗಳಿಗೆ ನೇಮಕಾತಿ! ಕೇಂದ್ರ ಸರ್ಕಾರಿ ಕೆಲಸ ಬೇಕಾ? ಇಂದೇ ಅರ್ಜಿ ಹಾಕಿ..!

Chinnara Kala Utsava 2025 inauguration at Bagepalli as B.G. Srinivas Jinni encourages parents to nurture children’s hidden talents - Local News

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ (Local News)  ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಟಿ. ವೀರಾಂಜನೇಯ, ಲಕ್ಷ್ಮೀ ಟಿವಿ ಮಾಲೀಕರಾದ ಕ್ರೇಜಿ ರಮೇಶ್, ಹಾಗೂ ಪ್ರಮುಖ ಮುಖಂಡರಾದ ಚಿನ್ನತಿಮ್ಮನಪಲ್ಲಿ ರಮೇಶ್, ಆನಂದ ರೆಡ್ಡಿ, ನಾರಾಯಣ ರೆಡ್ಡಿ, ಬಿ.ಎಸ್. ಸುರೇಶ್, ಚಂದ್ರಾನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಕ್ಕಳ ಪ್ರತಿಭೆಯನ್ನು ಕಣ್ತುಂಬಿಕೊಂಡರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular